For Quick Alerts
ALLOW NOTIFICATIONS  
For Daily Alerts
 

Shubman Gill: ಗುಜರಾತ್ ಟೈಟಾನ್ಸ್ ಪರ ನಾಯಕ ಶುಭಮನ್ ಗಿಲ್ ವಿಶೇ‍ಷ ಸಾಧನೆ

ಏಕಾನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 26ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಲಕ್ನೋ ಸೂಪರ್ ಕಿಂಗ್ಸ್ ಸೋಲಿಸಿದೆ. ಆರಂಭದಲ್ಲಿ ಎರಡು ಸೋಲುಗಳನ್ನು ಎದುರಿಸಿದ ನಂತರ, ಪಂತ್ ಪಡೆ ಗೆಲುವಿನ ಹಾದಿಗೆ ಮರಳಿದೆ. ಲಕ್ನೋ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದೆ. ಗುಜರಾತ್ ಟೈಟಾನ್ಸ್ ಸೋತರೂ, ತಂಡದ ನಾಯಕ ಶುಭಮನ್ ಗಿಲ್ ವಿಶೇಷ ಸಾಧನೆ ಮಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ಶುಭಮನ್ ಗಿಲ್ 60 ರನ್ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದರು.

IPL 2025 Shubman Gill creates record by scoring most runs for Gujarat Titans

ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಗುಜರಾತ್ ಟೈಟಾನ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಸಾಯಿ ಸುದರ್ಶನ್ ಜೊತೆ ಆರಂಭಿಕರಾಗಿ ಬಂದ ಶುಭಮನ್ ಗಿಲ್, ಶತಕದ ಜೊತೆಯಾಟ ಆಡಿದರು. ಹೀಗಾಗಿ ಗುಜರಾತ್ ಟೈಟಾನ್ಸ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 120 ರನ್‌ಗಳ ತಲುಪಲು ಸಾಧ್ಯವಾಯಿತು. ಶುಭಮನ್ ಗಿಲ್ ಅವರಿಗೆ ಸುದರ್ಶನ್ ಉತ್ತಮ ಸಾಥ್ ನೀಡಿದರು.

ಶುಭಮನ್ ಗಿಲ್ 38 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿದರು. ಮತ್ತೊಂದೆಡೆ ಸಾಯಿ ಸುದರ್ಶನ್ 37 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 56 ರನ್ ಗಳಿಸಿದರು. ಈ ಹಂತದಲ್ಲಿ ಗುಜರಾತ್ ಟೈಟಾನ್ಸ್ ಬಿಗ್ ಸ್ಕೋರ್ ಗಳಿಸುವ ನಿರೀಕ್ಷೆಯಲ್ಲಿತ್ತು. ಆದರೆ, ಈ ಇಬ್ಬರೂ ಔಟಾದ ತಕ್ಷಣ ಗುಜರಾತ್ ಬ್ಯಾಟಿಂಗ್ ಕ್ರಮಾಂಕ ಕುಸಿಯಿತು.

ಶುಭಮನ್ ಗಿಲ್ 60 ರನ್ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ಪರ ವೇಗವಾಗಿ 2000 ರನ್ ಗಳಿಸಿ ದಾಖಲೆ ಸೃಷ್ಟಿಸಿದರು. ಐಪಿಎಲ್‌ನಲ್ಲಿ ಫ್ರಾಂಚೈಸಿಯೊಂದರ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್ 2022 ರ ಪೂರ್ವ-ಹರಾಜು ಡ್ರಾಫ್ಟ್‌ನಲ್ಲಿ ಶುಭಮನ್ ಗಿಲ್ ಅವರನ್ನು ಗುಜರಾತ್ ಸೇರಿಸಿಕೊಂಡಿತ್ತು. ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿತ್ತು.

ಶುಭಮನ್ ಐಪಿಎಲ್ 2022 ರಲ್ಲಿ 16 ಪಂದ್ಯಗಳಲ್ಲಿ 483 ರನ್ ಗಳಿಸಿದ್ದಾರೆ. 2018 ರಲ್ಲಿ ಅವರ ಚೊಚ್ಚಲ ಪಂದ್ಯದ ನಂತರ ಇದು ಅವರ ಅತ್ಯುತ್ತಮ ಐಪಿಎಲ್ ಪ್ರದರ್ಶನವಾಗಿದೆ. ಹಾರ್ದಿಕ್ ನಾಯಕತ್ವದಲ್ಲಿ, ಗುಜರಾತ್ ಐಪಿಎಲ್ 2022 ರ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತು. ಐಪಿಎಲ್‌ನ ತನ್ನ ಚೊಚ್ಚಲ ಸೀಸನ್‌ನಲ್ಲಿ ಟ್ರೋಫಿಯನ್ನು ಗೆಲ್ಲುವ ಮೂಲಕ ಕ್ರಿಕೆಟ್ ಜಗತ್ತಿನ ಪ್ರಶಂಸೆಯನ್ನು ಗಳಿಸಿತು.

ವೇಗವಾಗಿ 2000 ರನ್ ಗಳಿಸಿದವರು

ಕ್ರಿಸ್ ಗೇಲ್ - 41 ಇನ್ನಿಂಗ್ಸ್ (ಆರ್‌ಸಿಬಿ)
ಕೆಎಲ್ ರಾಹುಲ್ - 43 ಇನ್ನಿಂಗ್ಸ್ (ಪಿಬಿಕೆಎಸ್)
ಡೇವಿಡ್ ವಾರ್ನರ್ - 47 ಇನ್ನಿಂಗ್ಸ್ (ಎಸ್‌ಆರ್‌ಹೆಚ್)
ಜೋಸ್ ಬಟ್ಲರ್ - 49 ಇನ್ನಿಂಗ್ಸ್ (ಆರ್‌ಆರ್)
ಶುಭ್‌ಮನ್ ಗಿಲ್ - 51 ಇನ್ನಿಂಗ್ಸ್ (ಜಿಟಿ)

ಐಪಿಎಲ್ 2023 ರಲ್ಲಿ ಶುಭಮನ್ ಗಿಲ್ ಅದ್ಭುತ ಫಾರ್ಮ್ ಪ್ರದರ್ಶಿಸಿದರು. ಈ ಸೀಸನ್‌ನಲ್ಲಿ ಅವರು 59.33 ರ ಸರಾಸರಿಯಲ್ಲಿ 890 ರನ್‌ಗಳೊಂದಿಗೆ 3 ಶತಕಗಳು ಮತ್ತು 4 ಅರ್ಧಶತಕಗಳನ್ನು ಬಾರಿಸಿದರು. ಆದರೆ, ಗುಜರಾತ್ ತಂಡವು ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ಇದರೊಂದಿಗೆ ಸತತ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಗುಜರಾತ್ ತಂಡದ ಕನಸು ಭಗ್ನವಾಯಿತು. ಐಪಿಎಲ್ 2024 ಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿದ ನಂತರ ಗುಜರಾತ್ ಶುಭಮನ್ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿತು. ಅವರು 2024 ರಲ್ಲಿ 12 ಪಂದ್ಯಗಳಲ್ಲಿ 426 ರನ್ ಗಳಿಸಿದರು.

ಗುಜರಾತ್ ಟೈಟಾನ್ಸ್ ಪರ ಅತಿ ಹೆಚ್ಚು ರನ್‌ಗಳಿಸಿದವರು

ಶುಭಮನ್ ಗಿಲ್ - 2007 ರನ್
ಸಾಯಿ ಸುದರ್ಶನ್ - 1363 ರನ್
ಡೇವಿಡ್ ಮಿಲ್ಲರ್ - 950 ರನ್
ಹಾರ್ದಿಕ್ ಪಾಂಡ್ಯ - 833 ರನ್
ವೃದ್ಧಿಮಾನ್ ಸಹಾ - 824 ರನ್

Story first published: Saturday, April 12, 2025, 19:41 [IST]
Other articles published on Apr 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+