IPL 2025: ಶ್ರೇಯಸ್ ಅಯ್ಯರ್ ಜಾಗಕ್ಕೆ ಸೂರ್ಯಕುಮಾರ್ ಯಾದವ್?
2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೂ ಮೊದಲು ಫ್ರಾಂಚೈಸಿಗಳು ಕೆಲವು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲಿವೆ. ಹಲವು ತಂಡಗಳಲ್ಲಿ ಸ್ಟಾರ್ ಆಟಗಾರರ ಬದಲಾವಣೆಯಾಗಲಿದೆ.
ಈಗಾಗಲೇ ಕೆಲವು ಸ್ಟಾರ್ ಆಟಗಾರರು ಈ ತಂಡಕ್ಕೆ ಸೇರುತ್ತಾರೆ ಎಂದು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ. ಇದೀಗ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಸಂಬಂಧಿಸಿದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

ಹಾಲಿ ಚಾಂಪಿಯನ್ ಕೆಕೆಆರ್ ಮುಂಬರುವ 2025ರ ಐಪಿಎಲ್‌ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮುಂಬೈ ಇಂಡಿಯನ್ಸ್ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಕರೆ ತರಲು ಕೆಕೆಆರ್ ಗಾಳ ಹಾಕುತ್ತಿದೆ ಎಂದು ವರದಿಯಾಗಿದೆ.
ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ತನ್ನದೆ ವಿಭಿನ್ನ ಶೈಲಿಯ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿದ್ದಾರೆ. ಆದರೆ ಐಪಿಎಲ್ 2025ರ ಮೊದಲು ಮುಂಬೈ ಇಂಡಿಯನ್ಸ್ ದೊಡ್ಡ ಅಘಾತ ಎದುರಾಗಲಿದೆ. ಸೂರ್ಯ ಮುಂಬೈ ತೊರೆದು ಮತ್ತೊಂದು ಕೆಕೆಆರ್ ನಾಯಕನಾಗಬಹುದು.
ಅಯ್ಯರ್ ಸ್ಥಾನ ತುಂಬ್ತಾರಾ?
ಐಪಿಎಲ್ 2024ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ತಂಡ ಟ್ರೋಫಿ ಗೆದ್ದಿತ್ತು. ಇದೀಗ ಈ ಚಾಂಪಿಯನ್ ತಂಡ ಮುಂಬರುವ ಋತುವಿನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಬದಲಿಸಲು ಚಿಂತನೆ ನಡೆಸಿದೆ. ವರದಿಗಳ ಪ್ರಕಾರ, ಐಪಿಎಲ್ 2025 ರಲ್ಲಿ ಅಯ್ಯರ್ ಬದಲಿಗೆ ಹೊಸ ನಾಯಕನನ್ನು ನೇಮಿಸಲು ಸಿದ್ಥತೆ ಮಾಡಿಕೊಳ್ಳುತ್ತಿದ್ದು, ಕೆಕೆಆರ್ ತಂಡವು ಶೀಘ್ರದಲ್ಲೇ ಅದನ್ನು ಖಚಿತಪಡಿಸುವ ಸಾಧ್ಯತೆ ಇದೆ. ಮಾಧ್ಯಮ ವರದಿಗಳ ಪ್ರಕಾರ, ಕೆಕೆಆರ್ ಫ್ರಾಂಚೈಸಿ ಸೂರ್ಯಕುಮಾರ್ ಯಾದವ್ ಅವರನ್ನು ಸಂಪರ್ಕಿಸಿ ನಾಯಕತ್ವದ ಪ್ರಸ್ತಾಪವನ್ನು ಮಾಡಿದೆ.
ಕೆಕೆಆರ್ ಮಾಜಿ ಆಟಗಾರ
ಸೂರ್ಯಕುಮಾರ್ ಕೆಲವು ವರ್ಷಗಳಿಂದ ಮುಂಬೈ ತಂಡದ ಭಾಗವಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಕೆಕೆಆರ್‌ಗೆ ಕೊಡುಗೆ ನೀಡಿದ್ದರು. ಒಂದೇ ವ್ಯತ್ಯಾಸವೆಂದರೆ ಈಗ ಸೂರ್ಯ ಟಿ20ಯಲ್ಲಿ ಅಗ್ರ ಬ್ಯಾಟರ್‌ಗಳಲ್ಲಿ ಒಬ್ಬರು. ಇತ್ತೀಚೆಗೆ, ಟೀಮ್ ಇಂಡಿಯಾದಲ್ಲಿ ಟಿ20 ಸ್ವರೂಪದ ಕಮಾಂಡ್ ಅನ್ನು ಸಹ ನೀಡಲಾಗಿದೆ. ಅವರ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ವಿರುದ್ಧ ಟಿ20 ಸರಣಿ ವಶಪಡಿಸಿಕೊಂಡಿದೆ.
ಐಪಿಎಲ್ ನಿಯಮ ಬದಲಾವಣೆ?
ಐಪಿಎಲ್ 2025ರ ಮೊದಲು ನಡೆಯಲಿರುವ ಮೆಗಾ ಹರಾಜಿನಲ್ಲಿ 6 ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಬಿಸಿಸಿಐ ಅವಕಾಶ ನೀಡಬಹುದು. ಈ ಹಿಂದೆ ಕೇವಲ ನಾಲ್ವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಿತ್ತು. ಸೂರ್ಯನನ್ನು ತಂಡಕ್ಕೆ ಕರೆ ತರಲು ಮುಂಬೈನಿಂದ ಕೆಕೆಆರ್ ಟ್ರೇಡ್ ಮಾಡುವ ಸಾಧ್ಯತೆ ಇದೆ.
ಈ ಬಾರಿಯ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಮಾಡಿರುವ ಮುಂಬೈ ಇಂಡಿಯನ್ಸ್ ನಿರ್ಧಾರದಿಂದ ಸೂರ್ಯಕುಮಾರ್ ಯಾದವ್ ತೃಪ್ತರಾಗಿಲ್ಲ. ಹೀಗಾಗಿ ಮುಂಬೈ ತಂಡ ಅವರನ್ನು ಬಿಡುಗಡೆ ಮಾಡಬಹುದು ಎಂದು ಈ ಹಿಂದೆ ವರದಿಗಳಿದ್ದವು. ಈಗ ಕೆಕೆಆರ್ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತೆಗೆದುಹಾಕುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications