IPL 2025: ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವದ ರೇಸ್‌ನಲ್ಲಿ 3 ಆಟಗಾರರು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಬಿಡುಗಡೆ ಮಾಡಿಲ್ಲ.
ಇದರ ಹೊರತಾಗಿಯೂ, ಹಲವು ಫ್ರಾಂಚೈಸಿ ತಂಡಗಳು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ವರದಿಗಳು ಹೊರಬೀಳುತ್ತಿವೆ. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಿದೆ.

ಕಳೆದ ವರ್ಷ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಚಿಂತನೆ ನಡೆಸುತ್ತಿರುವ ಮೂಲಗಳು ತಿಳಿಸಿವೆ. ಚಾಂಪಿಯನ್ ಆದ ನಂತರ ನಾಯಕನನ್ನು ತೆಗೆದುಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ಇಂಡಿಯನ್ಸ್‌ನಲ್ಲಿ ಈ ಪ್ರಕ್ರಿಯೆ ನಡೆದಿತ್ತು.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ ರೋಹಿತ್ ಶರ್ಮಾ ಅವರನ್ನು ಬದಲಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನ್ನಾಗಿ ಮಾಡಲಾಗಿತ್ತು. ಮುಂಬೈಗೆ ಹಾರ್ದಿಕ್ ಹಿಂತಿರುಗುತ್ತಿದ್ದಂತೆ ತಂಡದ ಪ್ರದರ್ಶನ ಅಸ್ಥಿರವಾಗಿತ್ತು. ಆಟಗಾರರಲ್ಲೂ ಅಸಮಾಧಾನ ಮೂಡಿತ್ತು. ಪರಿಣಾಮ ಈ ಬಾರಿ ಮುಂಬೈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಬೇಕಾಯಿತು.
ಸೂರ್ಯನಿಗೆ ಆಫರ್?
ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸೂರ್ಯಕುಮಾರ್ ಯಾದವ್ ಛಾಪು ಮೂಡಿಸಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಮುಂಬೈ ಪರ ಆಡುತ್ತಿರುವ ಅವರು ಮುಂದಿನ ಆವೃತ್ತಿಯಲ್ಲಿ ತಂಡವನ್ನು ಬದಲಾಯಿಸಬಹುದು ಎನ್ನಾಗುತ್ತಿದೆ. ಹೀಗಾಗಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿ ಮಾಡಲು ಸಂಪರ್ಕಿಸಲಾಗಿದೆ ಎಂಬ ವರದಿಗಳು ಬಂದಿವೆ.
ವರದಿಗಳ ಪ್ರಕಾರ, ಸೂರ್ಯಕುಮಾರ್ ಅವರಿಗೆ ಕೆಕೆಆರ್ ನಾಯಕತ್ವವನ್ನು ನೀಡಿದೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ಬಳಿಕ ಸೂರ್ಯಕುಮಾರ್ ಅವರನ್ನು ಟೀಮ್ ಇಂಡಿಯಾದ ಪೂರ್ಣಾವಧಿ ಟಿ20 ನಾಯಕನ್ನಾಗಿ ಮಾಡಲಾಗಿದೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ತೆಗೆದು ಹಾಕಿದರೆ ಕೆಕೆಆರ್ ಅಭಿಮಾನಿಗಳಿಗೆ ದೊಡ್ಡ ಶಾಕ್ ಎದುರಾಗಲಿದೆ.
ಮುಂಬೈ ಬಿಡ್ತಾರಾ ರೋಹಿತ್?
ಸೂರ್ಯಕುಮಾರ್ ನಂತರ ಮುಂಚೂಣಿಯಲ್ಲಿರುವ ಆಟಗಾರನ ಹೆಸರು ರೋಹಿತ್ ಶರ್ಮಾ. ಮುಂದಿನ ಋತುವಿನಲ್ಲಿ ರೋಹಿತ್ ಕೋಲ್ಕತ್ತಾ ತಂಡವನ್ನು ಸೇರಿಕೊಳ್ಳಬಹುದು ಎಂಬ ಚರ್ಚೆಗಳು ಕ್ರಿಕೆಟ್ ಗಲ್ಲಿಯಲ್ಲಿ ಆರಂಭವಾಗಿವೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ ಬಳಿಕ ರೋಹಿತ್ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಮುಂಬೈ ಇಂಡಿಯನ್ಸ್‌ನಿಂದ ಹೊರಬರಬಹುದು. ಆದರೆ, ಮುಂಬೈನಿಂದ ಅವರನ್ನು ಬೇರ್ಪಡಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಏಕೆಂದರೆ ಈಗಾಗಲೇ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಮರಳಿ ಕೆಕೆಆರ್‌ಗೆ ಕಮ್ಮಿನ್ಸ್?
ಮಂಬರುವ 2025ರ ಐಪಿಎಲ್ ಟೂರ್ನಿಯಲ್ಲಿ ಪ್ಯಾಟ್ ಕಮಿನ್ಸ್ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಈ ಬಾರಿಯ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಫೈನಲ್ ಗೆ ಕರೆದೊಯ್ದಿದ್ದ ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಕಮ್ಮಿನ್ಸ್ ಮರಳಿ ಕೆಕೆಆರ್ ಸೇರುವ ಸಾಧ್ಯತೆಯಿದೆ. ಈ ಹಿಂದೆಯೂ ಅವರಿಗೆ ಕೆಕೆಆರ್ ತಂಡದೊಂದಿಗೆ ಆಡಿರುವ ಅನುಭವಿದೆ. ಮೆಗಾ ಹರಾಜಿಗೂ ಮುನ್ನ ಎಸ್‌ಆರ್‌ಹೆಚ್ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗದಿದ್ದರೆ ಕೋಲ್ಕತ್ತಾ ಅವರನ್ನು ನಾಯಕನ ಸ್ಥಾನಕ್ಕೆ ಹರಾಜಿನಲ್ಲಿ ಖರೀದಿಸಲು ಮಂದಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications