IPL 2025: ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿ
ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಈ ಮೆಗಾ ಟೂರ್ನಿಯ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಈ ಟೂರ್ನಿ ಮಾರ್ಚ್ 22 ರಂದು ಉದ್ಘಾಟನೆ ಆಗಲಿದೆ. ಈ ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಹಾಗಿದ್ದರೆ ಒಟ್ಟಾರೆ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಟಿ20 ಫಾರ್ಮೆಟ್‌ಗೆ ಹೊಸ ಹೊಳಪು ನೀಡಿದ್ದು ಐಪಿಎಲ್. ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರು ಊಹಿಸಿರಲು ಸಾಧ್ಯವೇ ಇಲ್ಲ. ಆದರೆ ಕಳೆದ 18 ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್‌ನಲ್ಲಿ ಬ್ಯಾಟರ್ ಅಬ್ಬರ ಜೋರಾಗಿರುತ್ತದೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್‌ಗಳು, ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.

ವಿರಾಟ್ ಕೊಹ್ಲಿಗೆ ಅಗ್ರ ಸ್ಥಾನ
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದಾಗ, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಈಗಾಗಲೇ 17 ಆವೃತ್ತಿಗಳನ್ನು ಒಂದೇ ತಂಡದ ಪರ ಆಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈಗ 18ನೇ ಆವೃತ್ತಿ ಆಡಲು ಸಿದ್ಧರಾಗಿದ್ದಾರೆ. ಈ ಲೀಗ್‌ನಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿರುವ ವಿರಾಟ್ ಗರಿಷ್ಠ ರನ್ ಲೆಕ್ಕಾಚಾರದಲ್ಲೂ ಮುಂಚೂಣಿಯಲಿದ್ದಾರೆ.
ವಿರಾಟ್ ಒಟ್ಟಾರೆ 252 ಐಪಿಎಲ್ ಪಂದ್ಯಗಳ 244 ಇನಿಂಗ್ಸ್‌ನಲ್ಲಿ 38.66ರ ಸರಾಸರಿಯಲ್ಲಿ 8004 ರನ್ ಸಿಡಿಸಿದ್ದಾರೆ. ಈ ವೇಳೆ 8 ಶತಕ ಹಾಗೂ 55 ಅರ್ಧಶತಕಗಳು ಸೇರಿವೆ.

ರನ್ ಶಿಖರ್ ಏರಿರುವ ಧವನ್
ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಶಿಖರ್ ಧವನ್ ಅವರಿಗೆ ಎರಡನೇ ಸ್ಥಾನ. ಇವರು 222 ಪಂದ್ಯಗಳ 221 ಇನಿಂಗ್ಸ್‌ನಲ್ಲಿ 6769 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 51 ಅರ್ಧಶತಕಗಳು ಸೇರಿವೆ.
ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಬ್ಯಾಟರ್. ಇವರು 257 ಪಂದ್ಯಗಳ 252 ಇನಿಂಗ್ಸ್‌ಗಳಲ್ಲಿ 6628 ರನ್ ಸಿಡಿಸಿದ್ದಾರೆ. ಇವರು 2 ಶತಕ ಹಾಗೂ 43 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದು, ಇವರು 184 ಪಂದ್ಯಗಳಲ್ಲಿ 6565 ರನ್ ಚಚ್ಚಿದ್ದಾರೆ. ಈ ವೇಳೆ 4 ಶತಕ ಹಾಗೂ 62 ಅರ್ಧಶತಕಗಳು ಸೇರಿವೆ. ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟರ್ ಸುರೇಶ್ ರೈನಾ 229 ಇನಿಂಗ್ಸ್‌ಗಳಲ್ಲಿ 39ರ ಸರಾಸರಿಯಲ್ಲಿ 5528 ರನ್ ಕಲೆ ಹಾಕಿದ್ದಾರೆ. ಇವರ ಬುಟ್ಟಿಯಲ್ಲಿ 1 ಶತಕ ಹಾಗೂ 39 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications