For Quick Alerts
ALLOW NOTIFICATIONS  
For Daily Alerts
 

IPL 2025: ಚಿನ್ನಸ್ವಾಮಿ ಪಿಚ್ ಬಗ್ಗೆ ಆರ್‌ಸಿಬಿ ಅಸಮಾಧಾನ; ಮೆಂಟರ್ ಡಿಕೆ ಹೇಳಿದ್ದೇನು?

ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಅವರ ನೆಲೆದಲ್ಲಿಯೇ ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ಗೆಲುವುಗಳನ್ನು ಕಂಡಿದೆ. ಆದರೆ ತವರಿನಲ್ಲಿ ಆರ್‍‌ಸಿಬಿ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಗುರುವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುಜರಾತ್ ಟೈಟಾನ್ಸ್ ಸೋಲಿಸಿದೆ. ಇದಕ್ಕೂ ಮುನ್ನ ಆರ್‍‌ಸಿಬಿ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಪಿಚ್‌ನಲ್ಲಿ ಬಿಗ್ ಸ್ಕೋರ್ ಕಲೆ ಹಾಕಲು ಹೆಣಗಾಡುತ್ತಿದೆ. ಬೇರೆ ಪಿಚ್‌ಗಳಲ್ಲಿ ಆರ್‍‌ಸಿಬಿ ಆಟಗಾರರು ಅಬ್ಬರದ ಪ್ರದರ್ಶನ ನೀಡಿ ಬಿಗ್ ಸ್ಕೋರ್ ಕಲೆ ಹಾಕುತ್ತಿದ್ದಾರೆ. ಕಳೆದ ಸೀಸನ್‌ಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ಆರ್‍‌ಸಿಬಿ ಬಲಿಷ್ಠ ತಂಡವಾಗಿದೆ. ಆದರೂ, ತವರಿನಲ್ಲಿ ಆರ್‍‌ಸಿಬಿ ತಂಡ ಜಿಟಿ ಎದುರು ಎಂಟು ವಿಕೆಟ್‌ಗಳಿಗೆ 169 ರನ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಳು ವಿಕೆಟ್‌ಗಳಿಗೆ 163 ರನ್‌ಗಳನ್ನು ಗಳಿಸಿತು.

IPL 2025 What did RCB mentor Dinesh Karthik say about the M Chinnaswamy Stadium pitch in Bengaluru

ತವರಿನಲ್ಲಿ ಆರ್‍‌ಸಿಬಿ ಸತತ ಎರಡು ಪಂದ್ಯಗಳನ್ನು ಸೋತ ಬಳಿಕ ಹಲವು ಪ್ರಶ್ನೆಗಳು ಎದ್ದಿವೆ. ನಿಧಾನಗತಿಯ ಪಿಚ್‌ನಿಂದಾಗಿ, ಐಪಿಎಲ್ 2025 ರಲ್ಲಿ ಆರ್‍‌ಸಿಬಿ ತಂಡದ ಬ್ಯಾಟರ್ಸ್ ತವರು ಮೈದಾನದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದ್ದರಿಂದ, ಆರ್‌ಸಿಬಿ ತನ್ನ ತವರು ಎಂ ಚಿನ್ನಸ್ವಾಮಿ ಮೈದಾನದ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಡಿಕೆ ಹೇಳಿದ್ದೇನು?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ ದಿನೇಶ್ ಕಾರ್ತಿಕ್ ಮಾತನಾಡಿ, 'ಮೊದಲ ಎರಡು ಪಂದ್ಯಗಳಲ್ಲಿ, ನಾವು ಉತ್ತಮ ಪಿಚ್ ಸಿದ್ಧಪಡಿಸುವಂತೆ ಕೇಳಿದ್ದೆವು. ಆದರೆ ಬ್ಯಾಟಿಂಗ್ ಸವಾಲಿನ ಪಿಚ್ ನಮಗೆ ಸಿಕ್ಕಿತು. ಹಾಗಾಗಿ ಪರಿಸ್ಥಿತಿಗೆ ಅನುಗುಣವಾಗಿ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ ನಾವು ಕ್ಯುರೇಟರ್‌ಗಳು ಮಾತನಾಡಬೇಕು. ಅವರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

ಪಿಚ್ ಸವಾಲು

ಖಂಡಿತವಾಗಿಯೂ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟರ್ಸ್‌ಗೆ ಹೆಚ್ಚಿನ ಸಹಾಯವನ್ನು ನೀಡುವ ಯಾವುದೇ ಪಿಚ್ ಇರಲಿಲ್ಲ. ಅದು ಸವಾಲಿನ ಪಿಚ್ ಆಗಿತ್ತು. ಇಲ್ಲಿಯವರೆಗೆ, ಇಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ನಮಗೆ ಒಂದೇ ರೀತಿಯ ಪಿಚ್ ಸಿಕ್ಕಿದೆ. ಟಿ20 ಕ್ರಿಕೆಟ್‌ನಲ್ಲಿ ಲಾಂಗ್ ಶಾಟ್‌ಗಳು, ಬೌಂಡರಿಗಳು ಮತ್ತು ಸಿಕ್ಸರ್‌ಗಳು ಬಹಳ ಮುಖ್ಯ ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

ಟಿ20 ಕ್ರಿಕೆಟ್‌ನ ಸ್ವರೂಪವೇನೆಂದರೆ, ಅದರಲ್ಲಿ ಹೆಚ್ಚು ರನ್ ಗಳಿಸಿದಷ್ಟೂ ಬ್ರೊಡ್ಕ್ಯಾಸ್ಟ್ರ್ಸ್ ಹೆಚ್ಚಿನ ಲಾಭವಾಗುತ್ತದೆ. ಅಭಿಮಾನಿಗಳು ಸಹ ಸಂತೋಷಪಡುತ್ತಾರೆ. ಅವರೆಲ್ಲರೂ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡಲು ಬಯಸುತ್ತಾರೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

Story first published: Friday, April 11, 2025, 18:47 [IST]
Other articles published on Apr 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+