ಸೋಮವಾರ ನಡೆದ ಐಪಿಎಲ್ 2025ರ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳಿಂದ ಸೋಲಿಸಿತು. ಯುವ ಆರಂಭಿಕ ಬ್ಯಾಟರ್ ಶೇಖ್ ರಶೀದ್ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಗಾಯಗೊಂಡು ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಹೊರಗುಳಿದ ಬಳಿಕ ರಶೀದ್ ಅವರಿಗೆ ಆಡುವ ಅವಕಾಶ ಸಿಕ್ಕಿತು. ಶೇಖ್ ರಶೀದ್ ಕೇವಲ 20 ವರ್ಷ 202 ದಿನಗಳಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಎಲ್ಲರ ಗಮನ ಸೆಳೆದರು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಶೇಖ್ ರಶೀದ್ 19 ಎಸೆತಗಳಲ್ಲಿ 27 ರನ್ ಗಳಿಸಿದರು. ಶೇಖ್ ರಶೀದ್ 142.11 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ 6 ಬೌಂಡರಿಗಳನ್ನು ಬಾರಿಸಿದರು.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಶೇಖ್ ರಶೀದ್, ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರಶೀದ್ ಭರವಸೆಯ ಅಗ್ರ ಕ್ರಮಾಂಕದ ಬ್ಯಾಟರ್. ಹೀಗಾಗಿ ಅವರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿದೆ. ಶೇಖ್ ರಶೀದ್ 19 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಿ, 37.62 ಸರಾಸರಿಯಲ್ಲಿ 1204 ರನ್ ಗಳಿಸಿದ್ದಾರೆ. ಶೇಖ್ ರಶೀದ್ 12 ಲಿಸ್ಟ್ ಎ ಮತ್ತು 17 ಟಿ20 ಪಂದ್ಯಗಳನ್ನು ಆಡಿದ್ದಾರೆ. ಯುವ ಮಟ್ಟದಲ್ಲಿ ಶೇಖ್ ರಶೀದ್ ಅವರ ಪ್ರದರ್ಶನ ಉತ್ತಮವಾಗಿದೆ. ಶೇಖ್ ರಶೀದ್ 2022 ರ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದರು.
ಯಶ್ ಧುಲ್ ನಾಯಕತ್ವದಲ್ಲಿ ಭಾರತ ತಂಡ 2022 ರ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಈ ಚಾಂಪಿಯನ್ ಭಾರತ ತಂಡದಲ್ಲಿ ಶೇಖ್ ರಶೀದ್ ಕೂಡ ಇದ್ದಾರೆ. 2022 ರ ಅಂಡರ್- 19 ವಿಶ್ವಕಪ್‌ನಲ್ಲಿ ಭಾರತ ತಂಡ ಪರ ಶೇಖ್ ರಶೀದ್ 4 ಪಂದ್ಯಗಳಲ್ಲಿ 201 ರನ್ ಗಳಿಸಿದರು. ಈ ಮೂಲಕ ಭಾರತ ಪರ ಹೆಚ್ಚು ರನ್ ಗಳಿಸಿ ಮೂರನೇ ಆಟಗಾರ ಎನಿಸಿಕೊಂಡಿದ್ದರು. ಶೇಖ್ ರಶೀದ್ 12 ಲಿಸ್ಟ್ ಎ ಪಂದ್ಯಗಳಲ್ಲಿ 128 ರನ್ ಮತ್ತು 18 ಟಿ20 ಪಂದ್ಯಗಳಲ್ಲಿ 379 ರನ್ ಕಲೆ ಹಾಕಿದ್ದಾರೆ. ಈಗ ಐಪಿಎಲ್‌ನಲ್ಲಿ ಅವರು ತಮ್ಮ ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ.
ಶೇಖ್ ರಶೀದ್ ಅವರನ್ನು ಪ್ರತಿಭಾನ್ವಿತ ಕ್ರಿಕೆಟಿಗನನ್ನಾಗಿ ಮಾಡಲು ಅವರ ತಂದೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಶೇಖ್ ರಶೀದ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು, ಅವರ ತಂದೆ ತಮ್ಮ ಕೆಲಸವನ್ನು ತ್ಯಾಗ ಮಾಡಿದರು. ಶೇಖ್ ರಶೀದ್ ಅವರ ತಂದೆ ಶೇಖ್ ಬಾಲಿಶಾ ಖಾಸಗಿ ಬ್ಯಾಂಕಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಮಗ ಅಭ್ಯಾಸ ಮಾಡುವಾಗ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ಶೇಖ್ ರಶೀದ್ ತಮ್ಮ ಕೆಲಸವನ್ನು ತೊರೆದಿದ್ದರು. ಉತ್ತಮ ತರಬೇತಿಗಾಗಿ, ಶೇಖ್ ರಶೀದ್ ಅವರ ತಂದೆ ಅವರನ್ನು ಮಂಗಳಗಿರಿಯಿಂದ ಪ್ರತಿದಿನ 40 ಕಿ.ಮೀ. ದೂರ ಕರೆದೊಯ್ಯುತ್ತಿದ್ದರು. ಶೇಖ್ ರಶೀದ್ 2023 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. ಐಪಿಎಲ್ 2025 ರ ಮೆಗಾ ಹರಾಜಿನ ಸಮಯದಲ್ಲಿ ಸಿಎಸ್‌ಕೆ ಮತ್ತೊಮ್ಮೆ ಅವರ ಮೇಲೆ ಭರವಸೆಯನ್ನು ಇಟ್ಟು 30 ಲಕ್ಷ ರೂ.ಗೆ ಬಿಡ್ ಮಾಡಿತ್ತು.