ಗುಜರಾತ್ ಟೈಟಾನ್ಸ್ ಸೇರಿದ ಗನ್ ವೇಗಿ ಅಶೋಕ್ ಶರ್ಮಾ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಹರಾಜು ಅಬುಧಾಬಿಯಲ್ಲಿ ಮಂಗಳವಾರ ನಡೆಯಿತು. ಈ ವೇಳೆ ಹಲವು ಸ್ಟಾರ್ ಆಟಗಾರರಿಗೆ ತಂಡಗಳು ಭಾರೀ ಮೊತ್ತವನ್ನು ನೀಡಿ ಖರೀದಿಸಿವೆ. ಇನ್ನು ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರರಿಗೂ ಹರಾಜಿನಲ್ಲಿ ಜಾಕ್‌ಪಾಟ್ ಹೊಡೆದಿದೆ. ಈ ಬಾರಿಯ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಅಶೋಕ್ ಶರ್ಮಾ ಸೇರಿಕೊಂಡಿದ್ದಾರೆ.
ಅಶೋಕ್ ಶರ್ಮಾ ರಾಜಸ್ಥಾನದ ಪರ ದೇಶೀಯ ಟೂರ್ನಿಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರಸಕ್ತ ವರ್ಷದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 23 ವರ್ಷದ ಯುವ ಬೌಲರ್ ಅಶೋಕ್ ದಾಖಲೆ ಬರೆದಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ 15.63ರ ಸರಾಸರಿಯಲ್ಲಿ 22 ವಿಕೆಟ್ ಪಡೆದು ಬೀಗಿದ್ದಾರೆ. ಈ ಮೂಲಕ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಈ ಮೊದಲು ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೋಡಾದ ಲುಕ್ಮನ್ ಮೇರಿವಾಲಾ ಅವರದ್ದಾಗಿತ್ತು. ಇವರು 2013-14ರ ಋತುವಿನಲ್ಲಿ ಒಟ್ಟು 21 ವಿಕೆಟ್ ಪಡೆದಿದ್ದರು. ಈಗ ಈ ದಾಖಲೆಯನ್ನು ಅಶೋಕ್ ಶರ್ಮಾ ಅಳಿಸಿದ್ದಾರೆ. 2025 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ಟಿ 20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಆಡಿದ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಅಶೋಕ್ ಶರ್ಮಾ ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ, ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸರಾಸರಿ 145 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ ಇವರು, ಗರಿಷ್ಠ 150.3 ಕಿಮೀ ವೇಗ ಮುಟ್ಟುವ ಮೂಲಕ ಗಮನ ಸೆಳೆದರು. ಇವರು ಎರಡು ಬದಿಯಲ್ಲೂ ಚೆಂಡನ್ನು ಸ್ವಿಂಗ್ ಮಾಡುವ ಬೌಲರ್. ಅಲ್ಲದೆ ಯಾರ್ಕರ್, ಹಾಗೂ ಸ್ಲೋವರ್ ಒನ್ ಎಸೆತಗಳ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಬಲ್ಲರು.
ಅಶೋಕ್ ಶರ್ಮಾಗೆ ಬಂಪರ್
ಅಶೋಕ್ ಶರ್ಮಾ ಈ ಮೊದಲೇ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದ ಆಟಗಾರ. ಇವರು ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಲ್ಲ. ಇನ್ನು ಇದಕ್ಕೂ ಮೊದಲು ಇವರು 2022ರಲ್ಲಿ ಕೆಕೆಆರ್ ನೆಟ್ ಬೌಲರ್ ಆಗಿ ಪ್ರಾರಂಭಿಸಿ, 55 ಲಕ್ಷ ರೂ.ಗೆ ತಂಡ ಸೇರಿದರು. ಈ ಬಾರಿಯ ಹರಾಜಿನಲ್ಲಿ ಅಶೋಕ್ ಶರ್ಮಾ ಇವರನ್ನು ಕೊಳ್ಳಲು ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಮನಸ್ಸು ಮಾಡಿದ್ದವು. ಹರಾಜಿನಲ್ಲಿ ಇವರ ಮೂಲ ಬೆಲೆ 30 ಲಕ್ಷ ಆಗಿತ್ತು. ಕೊನೆಗೆ ಟೈಟಾನ್ಸ್ ಬಾಜಿ ಗೆಲ್ಲುವಲ್ಲಿ ಸಫಲವಾಗಿದೆ. ಇವರಿಗೆ ಗುಜರಾತ್ 90 ಲಕ್ಷ ನೀಡಿದೆ. ಈ ಬಾರಿಯಾದ್ರೂ ಅಶೋಕ್ ಶರ್ಮಾ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯುತ್ತಾರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications