Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಕ್ಯಾಮರೂನ್‌ ಗ್ರೀನ್‌ ಬಿರುಸಿನ ಆಟ: ಗುಜರಾತ್‌ಗೆ 181 ರನ್‌ ಗುರಿ ನೀಡಿದ ಕೆಕೆಆರ್‌

ಭರವಸೆಯ ಆಲ್‌ರೌಂಡರ್ ಕ್ಯಾಮರೂನ್‌ ಗ್ರೀನ್‌ ಅವರ ಭರ್ಜರಿ ಅರ್ಧಶತಕ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ 19ನೇ ಆವೃತ್ತಿಯ ಐಪಿಎಲ್‌ನ 25ನೇ ಪಂದ್ಯದಲ್ಲಿ 181 ರನ್‌ಗಳ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ ನೀಡಿದೆ. ಕ್ಯಾಮರೂನ್‌ ಗ್ರೀನ್‌, ಗುಜರಾತ್ ವಿರುದ್ಧ ಲಯಕ್ಕೆ ಮರಳಿದರು.

ಅಹಮದಾಬಾದ್‌ನಲ್ಲಿ ಟಾಸ್‌ ಗೆದ್ದ ಕೆಕೆಆರ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ನಾಯಕನೇ ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಇವರು ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಭರವಸೆಯ ಮಧ್ಯಮ ಕ್ರಮಾಂಕದ ಆಟಗಾರ ಅಂಗ್‌ಕ್ರಿಷ್‌ ರಘುವಂಶಿ (8) ಕಗಿಸೊ ರಬಾಡ ಅವರಿಗೆ ವಿಕೆಟ್‌ ಒಪ್ಪಿಸಿದರು. ಆರಂಭಿಕ ವಿಕೆಟ್‌ ಕೀಪರ್ ಬ್ಯಾಟರ್‌ ಟಿಮ್‌ ಸಿಫರ್ಟ್‌ (19) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಕೆಕೆಆರ್‌ ಪವರ್‌ ಪ್ಲೇನಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

IPL 2026

ನಾಲ್ಕನೇ ವಿಕೆಟ್‌ಗೆ ರೋವನ್ ಪೊವೆಲ್ ಹಾಗೂ ಕ್ಯಾಮರೂನ್ ಗ್ರೀನ್‌ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ಸಂಕಷ್ಟದಲ್ಲಿದ್ದ ತಂಡವನ್ನು ಪಾರು ಮಾಡಿತು. ಈ ಜೋಡಿ 43 ಎಸೆತಗಳಲ್ಲಿ 55 ರನ್‌ ಸೇರಿಸಿತು. ರೋವನ್‌ ಪೊವೆಲ್‌ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್‌ ಬಾರಿಸಿ ಅಶೋಕ್‌ ಶರ್ಮಾಗೆ ವಿಕೆಟ್‌ ಒಪ್ಪಿಸಿದರು.

ಗ್ರೀನ್‌ ಕಮಾಲ್‌

ಮಧ್ಯಮ ಕ್ರಮಾಂಕದಲ್ಲಿ ಅನುಕೂಲ್‌ ರಾಯ್‌ (9) ಹಾಗೂ ಕ್ಯಾಮರೂನ್ ಗ್ರೀನ್‌ ಜೋಡಿ 23 ಎಸೆತಗಳಲ್ಲಿ 60 ರನ್‌ ಸೇರಿಸಿತು. ಈ ಜೋಡಿ ಜೊತೆಯಾಟದಲ್ಲಿ ಗ್ರೀನ್‌ ಅವರ ಕಾಣಿಕೆ ಅಪಾರ.

ಮಧ್ಯಮ ಕ್ರಮಾಂಕದಲ್ಲಿ ಕ್ಯಾಮರೂನ್‌ ಗ್ರೀನ್‌ ಸೊಗಸಾದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಇವರು ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿದರು. ಇವರು 55 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 79 ರನ್‌ ಬಾರಿಸಿದರು. ಅಂತಿಮವಾಗಿ ಕೆಕೆಆರ್‌ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್ ಆಯಿತು.

ಗುಜರಾತ್‌ ಟೈಟಾನ್ಸ್ ಪರ ಕಗಿಸೋ ರಬಾಡ 3, ಮೊಹಮ್ಮದ್‌ ಸಿರಾಜ್‌, ಅಶೋಕ್‌ ಶರ್ಮಾ ತಲಾ 2 ವಿಕೆಟ್‌ ಕಬಳಿಸಿದರು.

Story first published: Friday, April 17, 2026, 21:44 [IST]
Other articles published on Apr 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+