Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ದಂಡ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಮಭವಾಗಿದೆ. ಮಂಗಳವಾರ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ ಮಣಿಸಿದ ಪಂಜಾಬ್ ಕಿಂಗ್ಸ್ ಶುಭಾರಂಭ ಮಾಡಿದೆ. ಕಳೆದ ಬಾರಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಪಂಜಾಬ್, ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಪಂಜಾಬ್ ಜಯ ಸಾಧಿಸಿದರೂ, ನಾಯಕ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಶಾಕ್ ನೀಡಿದೆ.

ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ ತಂಡದ ನಾಯಕ ಶ್ರೇಯಸ್ ಅಯ್ಯರ್ ಜೇಬಿಗೆ 12 ಲಕ್ಷ ರೂಪಾಯಿಯ ಕತ್ತರಿ ಬಿದ್ದಿದೆ. ಈ ಬಗ್ಗೆ ಐಪಿಎಲ್‌ ಹೇಳಿಕೆ ಬಿಡುಗಡೆ ಮಾಡಿದೆ.

IPL 2026

ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಾಟಾ ಐಪಿಎಲ್ 2026 ರ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಿಧಾನಗತಿಯ ಬ್ ಕಿಂಗ್ಸ್‌ ಬೌಲಿಂಗ್ ನಡೆಸಿದ್ದಕ್ಕಾಗಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ದಂಡ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೇಯಸ್ ಅಯ್ಯರ್ ಅವರಿಗೆ ದಂಡ ವಿಧಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು 18ನೇ ಆವೃತ್ತಿಯ ವೇಳೆಯೂ ನಿಧಾನಗತಿಯ ಬೌಲಿಂಗ್ ನಡೆಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಈಗಾಗಲೇ ನಿಧಾನಗತಿಯ ಬೌಲಿಂಗ್‌ ನಡೆಸಿದ್ದಕ್ಕಾಗಿ ಎರಡು ಶ್ರೇಯಸ್ ಅಯ್ಯರ್ 12 ಲಕ್ಷ ದಂಡವನ್ನು ತುಂಬಿದ್ದಾರೆ. ಇನ್ನು ಮುಂದೆ ಶ್ರೇಯಸ್ ಅಯ್ಯರ್ ಈ ತಪ್ಪು ಮಾಡಿದಲ್ಲಿ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಇನ್ನು 2024ರಲ್ಲಿ ರಿಷಭ್ ಪಂತ್ ಮೂರು ಬಾರಿ ನಿಧಾನಗತಿಯ ಬೌಲಿಂಗ್ ನಡೆಸಿದ್ದಕ್ಕಾಗಿ ಒಂದು ಪಂದ್ಯ ನಿಷೇಧ ಹಾಗೂ 30 ಲಕ್ಷ ದಂಡಕ್ಕೆ ಗುರಿಯಾಗಿದ್ದರು. ಆಗ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು.

ಪಂದ್ಯದ ಫಲಿತಾಂಶ

4ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಆರಂಭ ಕಳಪೆಯಾಗಿತ್ತು. ಸಾಯಿ ಸುದರ್ಶನ್ ಜವಾಬ್ದಾರಿ ಮರೆತರು. ಶುಭಮನ್‌ ಗಿಲ್ 39, ಜೋಸ್ ಬಟ್ಲರ್‌ 38 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಜಿಟಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್‌ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಪರ ಪ್ರಭಸಿಮ್ರನ್ ಸಿಂಗ್ 37, ಕೂಪರ್ ಕೊನೊಲಿ ಅಜೇಯ 72 ರನ್‌ ಸಿಡಿಸಿ ಅಬ್ಬರಿಸಿದರು. ಪಂಜಾಬ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ 165 ರನ್‌ ಸೇರಿಸಿತು.

Story first published: Wednesday, April 1, 2026, 15:44 [IST]
Other articles published on Apr 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+