Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 CSK: ಚೆನ್ನೈ ತಂಡದ ಪರ ಪದಾರ್ಪಣೆ ಮಾಡಲಿರುವ 5 ಆಟಗಾರರು

ಮಾರ್ಚ್‌ 28 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಲು ಎಲ್ಲ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಈ ವೇಳೆ ಎಲ್ಲರ ಕಣ್ಣುಗಳು ದಾಖಲೆಯ ಐಪಿಎಲ್‌ ಪ್ರಶಸ್ತಿಗಳನ್ನು ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮೇಲೆ ನೆಟ್ಟಿವೆ. ಈ ಬಾರಿ ಸಿಎಸ್‌ಕೆ ಬಲಾಢ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಐಪಿಎಲ್‌ ಹರಾಜಿನಲ್ಲಿ ಹಲವು ಆಟಗಾರರನ್ನು ಖರೀದಿಸಿದೆ.

ಹರಾಜಿನಲ್ಲಿ ಚೆನ್ನೈ ತಂಡದ ವಿದೇಶಿ ಹಾಗೂ ದೇಶೀಯ ಆಟಗಾರರಿಗೆ ಮಣೆ ಹಾಕಿದೆ. ಈ ಮೂಲಕ ಸಿಎಸ್‌ಕೆ ಮತ್ತೊಮ್ಮೆ ಪ್ರಶಸ್ತಿಯನ್ನು ಗೆಲ್ಲಲು ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ತಂಡ ಬ್ಯಾಟರ್‌ ಹಾಗೂ ಬೌಲರ್‌ಗಳನ್ನು ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಪರ ಮೊದಲ ಬಾರಿಗೆ ಕಣಕ್ಕೆ ಇಳಿಯಲಿರುವ ಐದು ಆಟಗಾರರ ಪಟ್ಟಿ ಇಲ್ಲಿದೆ.

IPL 2026 CSK

ಸಂಜು ಸ್ಯಾಮ್ಸನ್‌ ಈ ಬಾರಿ ಹಳದಿ ಜೆರ್ಸಿಯಲ್ಲಿ ಆಡಲಿದ್ದಾರೆ. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಇಷ್ಟೇ ಅಲ್ಲದೆ ಇತ್ತೀಚಿಗೆ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸಂಜು ಆಡಿದ ಧಾಟಿಯನ್ನು ನೋಡಿದ ಬಳಿಕ ಅಭಿಮಾನಿಗಳು ಇವರ ಆಟವನ್ನು ವೀಕ್ಷಿಸಲು ಎದುರು ನೋಡುತ್ತಿದ್ದಾರೆ. ಸಿಎಸ್‌ಕೆ ತಂಡವು ಸಂಜು ಅವರನ್ನು ರಾಜಸ್ಥಾನ ರಾಯಲ್ಸ್‌ನಿಂದ ಟ್ರೇಡ್ ಮಾಡಿಕೊಂಡಿದೆ. ಹೀಗಾಗಿ ಇವರು ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಚೆನ್ನೈ ಪರ ಆಡಲಿದ್ದಾರೆ.

ರಾಹುಲ್ ಚಾಹರ್

ಭಾರತೀಯ ಲೆಗ್-ಸ್ಪಿನ್ನರ್ ರಾಹುಲ್ ಚಾಹರ್ ಈ ಋತುವಿನಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಇವರಿಗೆ ಹರಾಜಿನಲ್ಲಿ ಅವರನ್ನು ಸುಮಾರು ₹5.20 ಕೋಟಿ ನೀಡಿತ್ತು. ಚೆನ್ನೈ ಪಿಚ್‌ ಸ್ಪಿನ್ ಬೌಲರ್‌ಗಳಿಗೆ ನೆರವಾಗಲಿದ್ದು, ಇವರು ತಂಡ ಸೇರಿದ್ದು ಆನೆ ಬಲ ಬಂದಂತೆ ಆಗಿದೆ.

ಸರ್ಫರಾಜ್ ಖಾನ್

ದೇಶೀಯ ಟೂರ್ನಿಗಳಲ್ಲಿ ಅಬ್ಬರಿಸಿದ ಸರ್ಫರಾಜ್ ಖಾನ್‌ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ. ಸರ್ಫರಾಜ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಇವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬಲ್ಲ ಪ್ಲೇಯರ್‌.

ಮ್ಯಾಟ್ ಹೆನ್ರಿ

ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ ಈ ಋತುವಿನಲ್ಲಿ ಸಿಎಸ್‌ಕೆ ತಂಡದ ಪರ ಬೌಲ್ ಮಾಡಲಿದ್ದಾರೆ. ಇವರು ತಮ್ಮ ಶಿಸ್ತು ಬದ್ಧ ದಾಳಿಗೆ ಹೆಸರುವಾಸಿ. ಹೆನ್ರಿ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರಿಗೆ ಚೆನ್ನೈ 2 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.

ಅಕೀಲ್ ಹುಸೇನ್

ವೆಸ್ಟ್ ಇಂಡೀಸ್ ಸ್ಪಿನ್ ಆಲ್‌ರೌಂಡರ್ ಅಕೀಲ್ ಹುಸೇನ್ ಈ ಬಾರಿ ಹಳದಿ ಜೆರ್ಸಿಯಲ್ಲಿ ಆಡಲಿರುವ ಮತ್ತೊಬ್ಬ ಆಟಗಾರ. ಇವರು ಪವರ್‌ಪ್ಲೇ ಮತ್ತು ಮಿಡಲ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ.

Story first published: Monday, March 16, 2026, 9:59 [IST]
Other articles published on Mar 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+