IPL 2026: ಇನಿಂಗ್ಸ್‌ನ ಮೂರನೇ ಎಸೆತದಲ್ಲಿ ಮಾಡಿದ ಆ ಒಂದು ತಪ್ಪಿಗೆ ದಂಡ ತೆತ್ತ ಗುಜರಾತ್
19ನೇ ಆವೃತ್ತಿ ಐಪಿಎಲ್‌ನ 34ನೇ ಪಂದ್ಯದಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಕಣಕ್ಕೆ ಇಳಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಜಿಟಿ ಆರಂಭಿಕರಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿದರು. ಈ ಜೋಡಿಯ ಆಟ ನೋಡಿದ ಅಭಿಮಾನಿಗಳು ಆರ್‌ಸಿಬಿ ಸವಾಲಿನ ಮೊತ್ತ ಬೆನ್ನಟ್ಟಬಹುದು ಎಂದೇ ಭಾವಿಸಿದ್ದರು.
ಶುಭಮನ್ ಗಿಲ್ 32 ರನ್ ಬಾರಿಸಿದ್ದಾಗ ಸುಯಶ್ ಶರ್ಮಾ ಅವರು ಖೆಡ್ಡಾ ತೋಡಿದರು. ಸಾಯಿ ಸುದರ್ಶನ್ ಶತಕ ಬಾರಿಸಿದರು. ಉಳಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಒಂದು ಹಂತದಲ್ಲಿ ಜಿಟಿ 16 ಓವರ್‌ಗಳಲ್ಲಿ 2 ವಿಕೆಟ್‌ಗೆ 170 ರನ್ ಸೇರಿಸಿ ಸುಸ್ಥಿತಿಯಲ್ಲಿತ್ತು. ಆದರೆ ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಮಿಂಚಿದರು. ಆದರೆ ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯ 18 ರನ್ ನೀಡಿದರು. ಪರಿಣಾಮ ಗುಜರಾತ್ 205 ರನ್ ಕಲೆ ಹಾಕುವಂತೆ ಆಯಿತು. ಇದು ಸಹ ಪಂದ್ಯಕ್ಕೆ ತಿರುವು ನೀಡಿದ ಅಂಶಗಳಲ್ಲಿ ಒಂದಾಗಿದೆ.

ಆರ್‌ಸಿಬಿ ತಂಡದ ಪರ ಇನಿಂಗ್ಸ್ ಆರಂಭಿಸಿದ ಜಾಕೋಬ್ ಬೆಥೆಲ್ 14 ರನ್ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಜೊತೆಯಾಟವನ್ನು ನೀಡಿದರು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿತು. ಅಲ್ಲದೆ ಉಭಯ ಆಟಗಾರರ ಅರ್ಧಶತಕ ಬಾರಿಸಿ ಮಿಂಚಿದರು. ಇವರ ಜೊತೆಯಾಟ ಪಂದ್ಯಕ್ಕೆ ತಿರುವು ನೀಡಿತು. ಆದರೆ ನಿಜಕ್ಕೂ ಗುಜರಾತ್ ಪಂದ್ಯವನ್ನು ಸೋತಿದ್ದು ಇನಿಂಗ್ಸ್‌ನ ಮೂರನೇ ಎಸೆತದಲ್ಲೇ.
ಆ ಒಂದು ತಪ್ಪು...
ಇನಿಂಗ್ಸ್ ಮೊದಲ ಓವರ್ ಮಾಡಲು ಮೊಹಮ್ಮದ್ ಸಿರಾಜ್ ಮುಂದಾದರು. ಎರಡನೇ ಎಸೆತದಲ್ಲಿ ಜಾಕೋಬ್ ಬೆಥೆಲ್ ಒಂದು ರನ್ ಪಡೆದರು. ಮೂರನೇ ಎಸೆತವನ್ನು ವಿರಾಟ್ ಕೊಹ್ಲಿ ಎದುರಿಸಿದರು. ಸಿರಾಜ್ ಅವರ ಎಸೆದ ಲೆಂಥ್ ಎಸೆತವನ್ನು ವಿರಾಟ್ ಮಿಡ್ ವಿಕೆಟ್‌ಗೆ ತಳ್ಳಿದರು. ವಾಷಿಂಗ್ಟನ್ ಸುಂದರ್ ಕೈಗೆ ಬಂದ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು. ವಾಷಿಂಗ್ಟನ್ ಸುಂದರ್ ಕ್ಯಾಚ್ ಬಿಡುತ್ತಲೇ ಚಿನ್ನಸ್ವಾಮಿ ಮೈದಾನದಲ್ಲಿದ್ದ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಬಿಟ್ಟರು. ನಿಜಕ್ಕೂ ಇದುವೇ ಪಂದ್ಯ ಗುಜರಾತ್ ಸೋಲಿಗೆ ಪ್ರಮುಖ ಕಾರಣವಾಯಿತು.
ಪಂದ್ಯದ ಫಲಿತಾಂಶ
ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 205 ರನ್; ಸಾಯಿ ಸುದರ್ಶನ್ 100, ಶುಭಮನ್ ಗಿಲ್ 32, ಭುವನೇಶ್ವರ್ ಕುಮಾರ್ 31ಕ್ಕೆ 1, ಸುಯಶ್ ಶರ್ಮಾ 36ಕ್ಕೆ 1
ಆರ್‌ಸಿಬಿ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 206 ರನ್: ವಿರಾಟ್ ಕೊಹ್ಲಿ 81, ದೇವದತ್ ಪಡಿಕ್ಕಲ್ 55, ಕೃನಾಲ್ ಪಾಂಡ್ಯ ಅಜೇಯ 23, ರಶೀದ್ ಖಾನ್ 49ಕ್ಕೆ 2
ಪಂದ್ಯದ ಫಲಿತಾಂಶ: ಆರ್‌ಸಿಬಿಗೆ 5 ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications