Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 Final; ಆರ್‌ಸಿಬಿ, ಜಿಟಿ ನಡುವಣ ಫೈನಲ್‌ ಪಂದ್ಯಕ್ಕೆ ಮಳೆ ಕಾಟ ನೀಡಿದರೆ, ಏನಾಗುತ್ತದೆ?

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ 19ನೇ ಆವೃತ್ತಿಯ ಐಪಿಎಲ್‌ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಗೆದ್ದು ಎರಡನೇ ಬಾರಿಗೆ ಪ್ರಶಸ್ತಿ ಎತ್ತುವ ಬಯಕೆ ಎರಡೂ ತಂಡಗಳದ್ದಾಗಿದೆ.

ಆರ್‌ಸಿಬಿ ಈ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್‌ ಪ್ರವೇಶಿಸಿದೆ. ಇನ್ನು ಗುಜರಾತ್ ಟೈಟಾನ್ಸ್‌ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಈ ಪಂದ್ಯದಲ್ಲಿ ಮಳೆ ಬಂದರೆ ಏನಾಗುತ್ತದೆ? ಕಾಯ್ದಿರಿಸಿದ ದಿನ ಇದೆಯಾ? ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಒಳಗೊಂಡ ವರದಿ ಇಲ್ಲಿದೆ.

IPL 2026 Final

ಫೈನಲ್‌ಗೆ ಮೀಸಲು ದಿನ ಇದೆಯಾ?

ಫೈನಲ್‌ಗಾಗಿ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಮಳೆಯಿಂದಾಗಿ ನಿಗದಿತ ಭಾನುವಾರ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ಮರುದಿನ ಸೋಮವಾರ ನಡೆಸಲಾಗುತ್ತದೆ. ಮೀಸಲು ದಿನದಂದು ಸಹ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಅದನ್ನು ರದ್ದುಗೊಳಿಸಲಾಗುವುದು. ಫಲಿತಾಂಶ ನಿರ್ಧರಿಸಲು ಕನಿಷ್ಠ ಐದು ಓವರ್‌ಗಳನ್ನು ಆಡಬೇಕು.

IPL 2026 Winner Prize money: ಚಾಂಪಿಯನ್‌ ತಂಡಕ್ಕೆ 20 ಕೋಟಿ ಬಂಪರ್, ರನ್ನರ್ಸ್-ಅಪ್‌ ತಂಡಕ್ಕೆ 13 ಕೋಟಿ ರೂ

IPL 2026 Winner Prize money: ಚಾಂಪಿಯನ್‌ ತಂಡಕ್ಕೆ 20 ಕೋಟಿ ಬಂಪರ್, ರನ್ನರ್ಸ್-ಅಪ್‌ ತಂಡಕ್ಕೆ 13 ಕೋಟಿ ರೂ

ಮಳೆಯಿಂದ ಪಂದ್ಯ ರದ್ದಾದರೆ ಟ್ರೋಫಿ ಯಾರಿಗೆ?

ಒಂದು ವೇಳೆ ಭಾನುವಾರ ಹಾಗೂ ಮೀಸಲು ಇಟ್ಟ ದಿನದಂದೂ ಸಹ ಪಂದ್ಯ ನಡೆಯದೇ ಇದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿಯನ್ನು ನೀಡಲಾಗುತ್ತದೆ. ಬೆಂಗಳೂರು ಲೀಗ್ ಹಂತವನ್ನು ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ಮುಗಿಸಿದೆ. ಗುಜರಾತ್ ಎರಡನೇ ಸ್ಥಾನದೊಂದಿಗೆ ಲೀಗ್‌ ಹಂತವನ್ನು ಮುಗಿಸಿದೆ. ಆದ್ದರಿಂದ, ಪಂದ್ಯ ರದ್ದಾದರೆ, ಬೆಂಗಳೂರನ್ನು ವಿಜೇತರೆಂದು ಘೋಷಿಸಲಾಗುತ್ತದೆ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ.

RCB vs GT IPL 2026 Final: ಪ್ಲೇಯಿಂಗ್ ಇಲೆವೆನ್‌, ಪಿಚ್‌ ವರದಿ, ಸಮಯ, ನೇರಪ್ರಸಾರದ ಮಾಹಿತಿ

RCB vs GT IPL 2026 Final: ಪ್ಲೇಯಿಂಗ್ ಇಲೆವೆನ್‌, ಪಿಚ್‌ ವರದಿ, ಸಮಯ, ನೇರಪ್ರಸಾರದ ಮಾಹಿತಿ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಾತ್ರ ಸತತ ಎರಡು ಟ್ರೋಫಿಗಳನ್ನು ಗೆದ್ದ ಹಿರಿಮೆಯನ್ನು ಹೊಂದಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ 2010, 2011ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿತ್ತು. ಇನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ 2019, 2020ರಲ್ಲಿ ಈ ಸಾಧನೆ ಮಾಡಿತ್ತು.

ಸತತ ಎರಡನೇ ಟ್ರೋಫಿಯ ಕನಸಿನಲ್ಲಿ ಆರ್‌ಸಿಬಿ

ಸತತ 17 ವರ್ಷಗಳ ಕಾಯುವಿಕೆಯ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈಗ ತಂಡವು ತನ್ನ ಸತತ ಎರಡನೇ ಪ್ರಶಸ್ತಿಯ ಕನಸು ಕಾಣುತ್ತಿದೆ.

Story first published: Sunday, May 31, 2026, 8:45 [IST]
Other articles published on May 31, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+