IPL 2026: ಸಾಯಿ ಸುದರ್ಶನ್, ಗಿಲ್ ಅರ್ಧಶತಕದ ಸೊಬಗು
ಅಹಮದಾಬಾದ್: ಆರಂಭಿಕ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಗುಜರಾತ್ ಟೈಟಾನ್ಸ್ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 66ನೇ ಪಂದ್ಯದಲ್ಲಿ ಸವಾಲಿನ ಮೊತ್ತದ ಗುರಿಯನ್ನು ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆತಿಥೇಯ ತಂಡ, ಆತ್ಮವಿಶ್ವಾಸದಿಂದ ಆರಂಭಿಕ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ರನ್‌ಗಳನ್ನು ಕಲೆ ಹಾಕುತ್ತಾ ವಿಕೆಟ್ ಕಳೆದುಕೊಳ್ಳದಂತೆ ಆಡಿತು. ಪವರ್ ಪ್ಲೇನಲ್ಲಿ ಗುಜರಾತ್ ಆರಂಭಿಕರು 62 ರನ್ ಸೇರಿಸಿದರು.

ಮೊದಲ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಶತಕದ ಜೊತೆಯಾಟವನ್ನು ನೀಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 10 ಬಾರಿ ಶತಕದ ಜೊತೆಯಾಟವನ್ನು ನೀಡಿ ಮಿಂಚಿತು. ಈ ಜೋಡಿ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 125 ರನ್ ಜೊತೆಯಾಟದ ಕಾಣಿಕೆ ನೀಡಿತು. ನಾಯಕ ಶುಭಮನ್ ಗಿಲ್ 23 ಎಸೆತದಲ್ಲಿ ಅರ್ಧಶತಕದ ನಗೆ ಬೀರಿದರು. ಅಲ್ಲದೆ ಇವರು 37 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 64 ರನ್ ಬಾರಿಸಿ ಔಟ್ ಆದರು.
ಎರಡನೇ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಅವರು ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 37 ಎಸೆತಗಳಲ್ಲಿ 82 ರನ್ ಕಲೆ ಹಾಕಿತು. ಈ ವೇಳೆ ಆರಂಭಿಕ ಆಟಗಾರ ಸಾಯಿ ಸುದರ್ಶನ್ 53 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಿತ 84 ರನ್ ಸಿಡಿಸಿ ಔಟ್ ಆದರು.
ಬಟ್ಲರ್ ಅಬ್ಬರ
ಮೂರನೇ ಕ್ರಮಾಂಕದ ಭರವಸೆಯ ಬ್ಯಾಟರ್ ಜೋಸ್ ಬಟ್ಲರ್ ಅಬ್ಬರಿಸಿದರು. ಇವರು 27 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 57 ರನ್ ಸಿಡಿಸಿದರು. ಈ ಕ್ಲಾಸಿಕ್ ಇನಿಂಗ್ಸ್ ಮೂಲಕ ಬಟ್ಲರ್ ಗುಜರಾತ್ ಟೈಟಾನ್ಸ್ ಪರ 1000 ರನ್ ಪೂರೈಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್ ಸೇರಿಸಿತು. ಸಿಎಸ್‌ಕೆ ತಂಡದ ಸ್ಟಾರ್ ಬೌಲರ್‌ಗಳು ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು.
ಮಹತ್ವದ ಪಂದ್ಯ
ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ಆದರೆ ಅಗ್ರ 2 ಸ್ಥಾನ ಕಾಯ್ದುಕೊಳ್ಳುವ ಕನಸು ಕಾಣುತ್ತಿದೆ. ಇದಕ್ಕಾಗಿ ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಇನ್ನು ಸಿಎಸ್‌ಕೆ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಈ ಗೆಲುವು ಅನಿವಾರ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications