ಧೂಮಪಾನ ಮಾಡಿ ಸಿಕ್ಕಿಬಿದ್ದರಾ ಜಿಟಿ ವೇಗಿ ರಬಾಡ? ಇಲ್ಲಿದೆ ವಿಡಿಯೋ
ಕಗಿಸೋ ರಬಾಡ ಅವರ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡುತ್ತಿರುವ ರಬಾಡ, ಧೂಮಪಾನ ಮಾಡುತ್ತಿರುವ ದೃಶ್ಯ ಸದ್ದು ಮಾಡುತ್ತಿದೆ. ಅಪರಿಚಿತ ಸ್ಥಳವೊಂದರಲ್ಲಿ ಸಿಗರೇಟ್ ಸೇದುತ್ತಿರುವಂತೆ ಕಂಡುಬಂದಿದ್ದಾರೆ. ಈ ದೃಶ್ಯಗಳು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ವಿಡಿಯೋ ಸತ್ಯಾಸತ್ಯತೆ ಬಹಿರಂಗವಾಗಿಲ್ಲ. ಈ ವಿಡಿಯೋವನ್ನು ಯಾವಾಗ ಚಿತ್ರಿಕರಿಸಲಾಗಿತ್ತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ವಿಡಿಯೋದಲ್ಲಿ ರಬಾಡ ಅವರೊಂದಿಗೆ ಇನ್ನು ಹಲವರು ಕಾಣಿಸಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡವರನ್ನು ಗುಜರಾತ್ ಟೈಟಾನ್ಸ್ ಸಿಬ್ಬಂದಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವಿಡಿಯೋದಲ್ಲಿ ರಬಾಡ ಅವರನ್ನು ಹೊರತು ಪಡಿಸಿ ಉಳಿದವರ ಗುರುತು ಪತ್ತೆಯಾಗಬೇಕಿದೆ. ಈ ವಿಡಿಯೋ ಸಮಯದ ಬಗ್ಗೆ ಯಾವುದೇ ಖಚಿತತೆ ಇಲ್ಲದಿರುವು ವಿವಾದ ಹುಟ್ಟಲು ಕಾರಣವಾಗಿದೆ.

ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಕಗಿಸೋ ರಬಾಡ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಈ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 6 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಈ ಎಕಾನಮಿ 9.73 ಆಗಿದೆ.
ನೆನಪಾದ ಹಿಂದಿನ ಘಟನೆ
ಕಳೆದ ವರ್ಷ ದಕ್ಷಿಣ ಆಫ್ರಿಕಾದ ಡ್ರಗ್ ಫ್ರೀ ಸ್ಪೋರ್ಟ್ಸ್ ಸಂಸ್ಥೆಯಿಂದ ಒಂದು ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ಅವರು ಋತುವಿನ ಮಧ್ಯದಲ್ಲಿ ಪಂದ್ಯಾವಳಿಯನ್ನು ತೊರೆದರು ಮತ್ತು ನಂತರ ತಂಡವನ್ನು ಮತ್ತೆ ಸೇರಿಕೊಂಡರು. ಡೋಪಿಂಗ್ ಅಪರಾಧದ ನಿಖರವಾದ ವಿವರಗಳನ್ನು ಎಂದಿಗೂ ಬಹಿರಂಗಪಡಿಸಲಾಗಿಲ್ಲ, ಇದು ಊಹಾಪೋಹಗಳಿಗೆ ಅವಕಾಶ ಮಾಡಿಕೊಟ್ಟಿತು.
ಗುಜರಾತ್ ಟೈಟಾನಸ್ ಐಪಿಎಲ್ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಲೆಕ್ಕಾಚಾರವನ್ನು ಮಾಡುತ್ತಿದೆ. ಏಪ್ರಿಲ್ 24 ರಂದು ಟೈಟಾನ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಈ ಋತುವಿನ ಆರಂಭದಲ್ಲಿ ಇದೇ ರೀತಿಯ ವೀಡಿಯೊ ವೈರಲ್ ಆಗಿತ್ತು, ಇದರಲ್ಲಿ ಯುಜ್ವೇಂದ್ರ ಚಾಹಲ್ ಧೂಮಪಾನ ಮಾಡಿ ವಾಹನ ಚಲಾಯಿಸುತ್ತಿರುವುದನ್ನು ತೋರಿಸಲಾಗಿದೆ. ಆ ವೀಡಿಯೊವನ್ನು ಸಹ ಪರಿಶೀಲಿಸದಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications