IPL 2026: CSK ಪ್ಲೇ ಆಫ್ ಪ್ರವೇಶಿಸಲು ಇನ್ನು ಎಷ್ಟು ಪಂದ್ಯ ಗೆಲ್ಲಬೇಕು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ದಾಖಲೆಯ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), 19ನೇ ಆವೃತ್ತಿಯ ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಆದರೆ ಈಗ ಮತ್ತೆ ಅದು ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಚೆನ್ನೈ ಸೂಪರ್ ಕಿಂಗ್ಸ್ ಈ ತನ್ನ ಪ್ಲೇ ಆಫ್ ಲೆಕ್ಕಾಚಾರವನ್ನು ಆರಂಭಿಸಿದೆ. ಶನಿವಾರ ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿರುವ ಸಿಎಸ್‌ಕೆ ಈ ಲೀಗ್‌ನಲ್ಲಿ 4ನೇ ಗೆಲುವು ದಾಖಲಿಸಿದೆ.
ಚೆನ್ನೈ ತಂಡ ಈ ಬಾರಿ ಆಡಿದ 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಲ್ಲದೆ ಚೆನ್ನೈ ತಂಡದ ರನ್ ರೇಟ್ ಸಹ ಉತ್ತಮವಾಗಿದೆ. ಚೆನ್ನೈ +0.005 ರನ್ ರೇಟ್ ಹೊಂದಿದೆ. ಐದನೇ ಸ್ಥಾನಕ್ಕಿಂತ ಕೆಳಗಿನ ಸ್ಥಾನದಲ್ಲಿರುವ ತಂಡಗಳಲ್ಲಿ ಚೆನ್ನೈ ತಂಡದ ರನ್ ರೇಟ್ ಉತ್ತಮವಾಗಿದೆ. ಹೀಗಾಗಿ ತನ್ನ ಪ್ಲೇ ಆಫ್ ಲೆಕ್ಕಾಚಾರವನ್ನು ಈಗ ಆರಂಭಿಸಿದೆ.

ಲೀಗ್ ಹಂತದಲ್ಲಿ ಪ್ರತಿ ತಂಡಕ್ಕೆ 14 ಪಂದ್ಯಗಳು ಸಿಗುತ್ತವೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದು ಪಂದ್ಯಗಳು ಸಿಗಲಿವೆ. ಒಂದು ವೇಳೆ ಚೆನ್ನೈ ಈ ಐದು ಪಂದ್ಯಗಳನ್ನು ಗೆದ್ದಲ್ಲಿ 18 ಅಂಕಗಳೊಂದಿಗೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಇನ್ನು ಉಳಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿ 16 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಬಹುದು. ಚೆನ್ನೈ ತಂಡ ಮುಂದಿನ 5 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿದರೂ ತಂಡದ ಅಂಕಗಳು 14 ಆಗುತ್ತವೆ. ಆಗಲೂ ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಕಾಣಬಹುದಾಗಿದೆ.
ಚೆನ್ನೈ ಉಳಿದ 5 ಪಂದ್ಯಗಳಲ್ಲಿ ತವರಿನಲ್ಲಿ 2 ಪಂದ್ಯಗಳನ್ನು ಹಾಗೂ 3 ವಿರೋಧಿಗಳ ತವರಿನಲ್ಲಿ ಆಡಲಿದೆ. ಪರಿಸ್ಥಿತಿಗೆ ಅನುಗುಣವಾಗಿ ತಂಡದ ಸಂಯೋಜನೆಯನ್ನು ಮಾಡಿದರೆ ತಂಡದ ಗೆಲುವಿನ ಆಸೆ ಚಿಗುರುತ್ತದೆ. ಇನ್ನು ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಸಹ ಈ ಲೀಗ್‌ನಲ್ಲಿ ಇನ್ನು ಕಣಕ್ಕೆ ಇಳಿದಿಲ್ಲ. ಅವರು ಕಣಕ್ಕೆ ಇಳಿದಾಗ ತಂಡದ ಮನೋಬಲವು ಹೆಚ್ಚುತ್ತದೆ. ಎಂಎಸ್‌ಡಿ ಮೈದಾನಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಚೆನ್ನೈ ತಂಡದ ಉಳಿದ ಪಂದ್ಯಗಳು
ಮೇ 5: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ದೆಹಲಿ, ಸಂಜೆ 7.30ಕ್ಕೆ
ಮೇ 10: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ, ಚೆನ್ನೈ, ಮಧ್ಯಾಹ್ನ 3.30ಕ್ಕೆ
ಮೇ 15: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ, ಲಕ್ನೋ, ಸಂಜೆ 7.30ಕ್ಕೆ
ಮೇ 18: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಚೆನ್ನೈ, ಸಂಜೆ 7.30ಕ್ಕೆ
ಮೇ 21: ಗುಜರಾತ್ ಟೈಟನ್ಸ್ ವಿರುದ್ಧ, ಅಹಮದಾಬಾದ್, ಸಂಜೆ 7.30ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications