Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಗುಜರಾತ್ ಟೈಟಾನ್ಸ್‌ ವಿರುದ್ಧ 29 ರನ್‌ ಜಯ ಸಾಧಿಸಿದ ಕೆಕೆಆರ್‌ ಪ್ಲೇ ಆಫ್‌ ಆಸೆ ಜೀವಂತ

ಕೋಲ್ಕತ್ತಾ: ಸಂಘಟಿತ ಆಟದ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌) 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 60ನೇ ಪಂದ್ಯದಲ್ಲಿ ಗುಜರಾಟ್‌ ಟೈಟಾನ್ಸ್ ತಂಡವನ್ನು 29 ರನ್‌ಗಳಿಂದ ಮಣಿಸಿ, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ಅಜಿಂಕ್ಯ ರಹಾನೆ (14) ಹಾಗೂ ಫಿನ್ ಅಲೆನ್ ಜೋಡಿ ಮೊದಲ ವಿಕೆಟ್‌ಗೆ 44 ರನ್‌ ಜೊತೆಯಾಟದ ಕಾಣಿಕೆ ನೀಡಿದರು.

IPL 2026

ಎರಡನೇ ವಿಕೆಟ್‌ಗೆ ಫಿನ್ ಅಲೆನ್ ಸೇರಿಕೊಂಡ ಭರವಸೆಯ ಯುವ ಆಟಗಾರ ಅಂಗ್‌ಕ್ರಿಷ್‌ ರಘುವಂಶಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮಧ್ಯದ ಓವರ್‌ಗಳಲ್ಲಿ ಗುಜರಾತ್ ಟೈಟಾನ್ಸ್ ಬೌಲರ್‌ಗಳನ್ನು ದಂಡಿಸುತ್ತಾ ರನ್‌ ವೇಗವನ್ನು ಹೆಚ್ಚಿಸುತ್ತಾ ಸಾಗಿತು. ಪರಿಣಾಮ ಈ ಜೋಡಿ 41 ಎಸೆತಗಳಲ್ಲಿ 95 ರನ್ ಸೇರಿಸಿತು. ಸ್ಟಾರ್ ಆಟಗಾರ ಫಿನ್ ಅಲೆನ್ 35 ಎಸೆತಗಳಲ್ಲಿ 4 ಬೌಂಡರಿ, 10 ಸಿಕ್ಸರ್ ಸಹಾಯದಿಂದ 93 ರನ್‌ ಬಾರಿಸಿ ಔಟ್ ಆದರು.

ಅಂಗ್‌ಕ್ರಿಷ್‌, ಗ್ರೀನ್ ಶತಕದ ಜೊತೆಯಾಟ

ಮೂರನೇ ವಿಕೆಟ್‌ಗೆ ಅಂಗ್‌ಕ್ರಿಷ್ ಜೊತೆಗೂಡಿ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್‌ ಕ್ಲಾಸ್ ಆಟವನ್ನು ಆಡಿದರು. ಈ ಜೋಡಿಗೆ ಬ್ರೇಕ್ ಹಾಕಲು ಗುಜರಾತ್ ತಂಡದ ಅನುಭವಿ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಈ ಜೋಡಿ 58 ಎಸೆತಗಳಲ್ಲಿ ಅಜೇಯ 108 ರನ್‌ ಕಲೆ ಹಾಕಿತು. ಅಂಗ್‌ಕ್ರಿಷ್‌ ಅಜೇಯ 82 ರನ್ ಬಾರಿಸಿದರೆ, ಗ್ರೀನ್ ಅಜೇಯ 52 ರನ್‌ ಬಾರಿಸಿ ತಂಡ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು. ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 247 ರನ್‌ ಸೇರಿಸಿತು.

ಭರ್ಜರಿ ಆರಂಭ

ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್ 42 ರನ್‌ಗಳ ಜೊತೆಯಾಟವನ್ನು ಆಡಿದ್ದಾಗ ಸಾಯಿ ಸುದರ್ಶನ್‌ ಗಾಯದ ಕಾರಣದಿಂದ ಮೈದಾನದಿಂದ ಹೊರ ನಡೆದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ನಿಶಾಂತ್ ಸಿಂಧು (1) ರನ್‌ ಕಲೆ ಹಾಕುವಲ್ಲಿ ವಿಫಲರಾದರು.

IPL 2026

ಎರಡನೇ ವಿಕೆಟ್‌ಗೆ ಶುಭಮನ್‌ ಗಿಲ್ ಅವರನ್ನು ಸೇರಿಕೊಂಡ ಜೋಸ್ ಬಟ್ಲರ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಈ ಜೋಡಿ 73 ಎಸೆತಗಳಲ್ಲಿ 128 ರನ್‌ ನೀಡಿತು. ಈ ಹಂತದಲ್ಲಿ ಶುಭಮನ್ ಗಿಲ್ 5 ಬೌಂಡರಿ, 7 ಸಿಕ್ಸರ್ ಸಹಾಯದಿಂದ 85 ರನ್‌ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಬಟ್ಲರ್‌ 57 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಸಾಯಿ ಸುದರ್ಶನ್ ಬಳಿಕ ಮತ್ತೆ ಬ್ಯಾಟಿಂಗ್ ಬಂದರು. ಇವರು ಅಜೇಯ 53 ರನ್ ಬಾರಿಸಿದರೂ ತಂಡಕ್ಕೆ ಗೆಲುವಿನ ಮಾಲೆ ತೊಡಿಸಲು ಸಾಧ್ಯವೇ ಆಗಲಿಲ್ಲ. ಅಂತಿಮವಾಗಿ ಜಿಟಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 218 ರನ್‌ ಸೇರಿಸಿ ಸೋಲು ಕಂಡಿತು.

ಕೆಕೆಆರ್‌ ಈ ಪಂದ್ಯದಲ್ಲಿ ಜಯ ಸಾಧಿಸಿದೆ. ಈ ಮೂಲಕ ಕೋಲ್ಕತ್ತಾ ಆಡಿದ 12 ಪಂದ್ಯಗಳಲ್ಲಿ 5 ಜಯ, 6 ಸೋಲು, 1 ಪಂದ್ಯ ರದ್ದಾಗಿದ್ದರಿಂದ 11 ಅಂಕ ಕಲೆ ಹಾಕಿ 7ನೇ ಸ್ಥಾನದಲ್ಲಿದೆ.

Story first published: Saturday, May 16, 2026, 23:55 [IST]
Other articles published on May 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+