IPL 2026: ಪ್ಲೇಆಫ್ ಪ್ರವೇಶಿಸುವ ಸಿಎಸ್‌ಕೆ ಕನಸಿಗೆ ಪೆಟ್ಟು: ಮಹತ್ವದ ಪಂದ್ಯದ ವೇಳೆ ವೇಗಿಗೆ ಗಾಯ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈಗ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ತಂಡದ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿ ಅರಿತು ಆಟವನ್ನು ಆಡುತ್ತಿದ್ದಾರೆ. ಚೆನ್ನೈ ತಂಡ ಪ್ಲೇ ಆಫ್ ಕನಸಿನಲ್ಲೂ ಇದೆ. ಈ ವೇಳೆ ಮಹತ್ವದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಚೆನ್ನೈ ತಂಡದ ಸ್ಟಾರ್ ಆಲ್‌ರೌಂಡರ್ ಜೇಮೀ ಓವರ್‌ಟನ್ ಗಾಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ಮರಳಿದ್ದಾರೆ. ಈ ಸಮಯದಲ್ಲಿ ಅವರು ತಂಡದ ಭಾಗವಾಗಿಲ್ಲದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇವರು ಬಲ ತೊಡೆಯ ಗಾಯಕ್ಕೆ ತುತ್ತಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಯುಕೆಗೆ ಹಾರಿದ್ದಾರೆ ಎಂದು ಸಿಎಸ್‌ಕೆ ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದೆ. ಆದರೆ ಇದೇ ವೇಳೆ ಓವರ್‌ಟನ್ ಎಷ್ಟು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂಬ ಬಗ್ಗೆ ಮಾತ್ರ ಇನ್ನೂ ಮಾಹಿತಿ ಸ್ಪಷ್ಟವಾಗಿಲ್ಲ. ಆದರೂ ಸಹ ಇವರು ಮುಂಬರುವ ಮಹತ್ವದ ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಓವರ್ಟನ್ ಈ ಋತುವಿನಲ್ಲಿ ಚೆನ್ನೈನ ಅತ್ಯಂತ ಪ್ರಭಾವಿ ಆಟಗಾರರಲ್ಲಿ ಒಬ್ಬರು. ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡಿದ ಆಟಗಾರ. ಸಿಎಸ್‌ಕೆ ತಂಡದ ಪರ ಈ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಓವರ್ಟನ್ ಇತ್ತೀಚೆಗೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರ ಪ್ರದರ್ಶನದ ಬಲದಿಂದಲೇ ಚೆನ್ನೈ ಗೆಲುವು ದಾಖಲಿಸಿತ್ತು.
ವೇಗದ ಬೌಲರ್ ಸಾಧನೆ
32 ವರ್ಷದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮಿ ಓವರ್‌ಟನ್ ಸಿಎಸ್‌ಕೆ ತಂಡದ ಭರವಸೆಯ ಬೌಲರ್. ಇವರನ್ನು ಚೆನ್ನೈ ತಂಡ 1.50 ಕೋಟಿ ರೂ. ಮೂಲ ಬೆಲೆಗೆ 2025ರ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ಇವರು 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದು ತಂಡಕ್ಕೆ ಆಧಾರವಾಗಿದ್ದರ. ಆಡಿದ 10 ಪಂದ್ಯಗಳಲ್ಲಿ ಜೇಮಿ 14 ವಿಕೆಟ್ ಉರುಳಿಸಿದ್ದಾರೆ.

ಸಿಎಸ್‌ಕೆ ಸಾಧನೆ
ಚೆನ್ನೈ ಸೂಪರ್ ಕಿಂಗ್ಸ್ ಈ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 6 ಜಯ, 5 ಸೋಲು ಕಂಡಿದೆ. ಈ ವೇಳೆ 12 ಅಂಕಗಳನ್ನು ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅಲ್ಲದೆ ಕಳೆದ ಮೂರು ಪಂದ್ಯಗಳನ್ನು ಸತತ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇನ್ನು ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಅನಿವಾರ್ಯತೆ ಚೆನ್ನೈ ತಂಡದ್ದಾಗಿದೆ. ಚೆನ್ನೈ ಮೇ 15 ರಂದು ಎಲ್‌ಎಸ್‌ಜಿ ವಿರುದ್ಧ, ಮೇ 18 ರಂದು ಎಸ್‌ಆರ್‌ಎಚ್ ವಿರುದ್ಧ, ಮೇ 21 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ.
ಗಾಯದ ಬರೆ
ಚೆನ್ನೈ ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಮಾಜಿ ನಾಯಕ ಧೋನಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮಹೇಂದ್ರ ಸಿಂಗ್ ಧೋನಿ ಈ ಆವೃತ್ತಿಯಲ್ಲಿ ಇನ್ನು ಒಂದೇ ಒಂದು ಪಂದ್ಯದಲ್ಲೂ ಕಣಕ್ಕೆ ಇಳಿದಿಲ್ಲ. ಇವರು ಮೈದಾನಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಸಹ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲದೆ ನಾಥನ್ ಎಲ್ಲಿಸ್ ಮತ್ತು ಸ್ಪೆನ್ಸರ್ ಜಾನ್ಸನ್ ಈ ಆವೃತ್ತಿಯಿಂದಲೇ ಹೊರ ನಡೆದಿದ್ದಾರೆ. ಆಯುಷ್ ಮ್ಹಾತ್ರೆ, ಖಲೀಲ್ ಅಹ್ಮದ್ ಮತ್ತು ವೇಗದ ಬೌಲರ್ ರಾಮಕೃಷ್ಣ ಘೋಷ್ ಗಾಯಕ್ಕೆ ತುತ್ತಾಗಿದ್ದು, ಲೀಗ್ ನಿಂದ ಹೊರ ನಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications