IPL 2026: ಮಿನಿ ಹರಾಜು ನಡೆಯುವುದು ಯಾವಾಗ? ರಿಟೇನ್ ಲೀಸ್ಟ್ ನೀಡಲು ಕೊನೆಯ ದಿನಾಂಕ ಯಾವುದು?
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಿದ್ಧತೆಗಳು ಭರದಿಂದ ಸಾಗಿವೆ. ಇನ್ನು 19ನೇ ಆವೃತ್ತಿಯ ಐಪಿಎಲ್‌ಗೆ ಇನ್ನು ತಿಂಗಳುಗಳೇ ಬಾಕಿ ಇದೆ. ಇದಕ್ಕೂ ಮೊದಲು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಅಲ್ಲದೆ ಐಪಿಎಲ್ ತಂಡಗಳು ಉಳಿಸಿಕೊಂಡ ಆಟಗಾರರು, ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಿದೆ. ಮುಂದಿನ ಐಪಿಎಲ್ ಹರಾಜು ನಡೆಯುವುದು ಯಾವಾಗ? ರಿಟೇನ್ ಲೀಸ್ಟ್ ನೀಡಲು ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ವರದಿ.
ಈ ಬಾರಿ ಐಪಿಎಲ್ ಹರಾಜು ಮೆಗಾ ಇರುವುದಿಲ್ಲ. ಈ ಬಾರಿ ಮಿನಿ ಹರಾಜು ನಡೆಯಲಿದೆ. ಈ ಹರಾಜು ಪ್ರಕ್ರಿಯೆ ಡಿಸೆಂಬರ್ 13 ರಿಂದ 15ರ ಒಳಗೆ ನಡೆಯುವ ಸಾಧ್ಯತೆ ಇದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಆದರೆ ಈ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್‌ನಿಂದ ಇನ್ನು ಅಧಿಕೃತ ದಿನಾಂಕಗಳು ಹೊರ ಬಂದಿಲ್ಲ. ಆದರೆ ನಂಬುವುದಾದರೆ ಈ ದಿನಾಂಕದಲ್ಲಿ ಒಂದನ್ನು ಅಂತಿಮ ಗೊಳಿಸುವ ಸಾಧ್ಯತೆ ಇದೆ.

ಕಳೆದ ಎರಡು ಐಪಿಎಲ್ ಹರಾಜುಗಳು ದೇಶದ ಹೊರಗಡೆ ನಡೆದಿತ್ತು. ಆದರೆ ಈ ಬಾರಿ ಎಲ್ಲಿ ನಡೆಯುತ್ತದೆ ಎಂಬ ಬಗ್ಗೆ ಇನ್ನು ಯಾವುದೇ ಸ್ಪಷ್ಟ ಉತ್ತರವಿಲ್ಲ. ಈ ಬಾರಿ ಮಿನಿ ಹರಾಜು ಭಾರತದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಾರಿ ಹರಾಜನ್ನು ಬೆಂಗಳೂರು ಅಥವಾ ಕೋಲ್ಕತ್ತಾದಲ್ಲಿ ನಡೆಸುವ ಸಾಧ್ಯತೆ ಇದೆ. ಈ ಎರಡು ನಗರಗಳನ್ನು ಬಿಟ್ಟು ಬೇರೆ ನಗರಗಳಲ್ಲೂ ಈ ಹರಾಜು ನಡೆದರೆ ಅಚ್ಚರಿಯಿಲ್ಲ.
ಆಟಗಾರರ ಪಟ್ಟಿ
19ನೇ ಆವೃತ್ತಿಯ ಐಪಿಎಲ್ ಸಿದ್ಧತೆಗಳು ನಡೆದಿವೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಐಪಿಎಲ್ ತಂಡಹಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನೀಡಲು ನವೆಂಬರ್ 15 ಕೊನೆಯ ದಿನವಾಗಬಹುದು. ಇನ್ನು ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ. ಯಾರನ್ನು ಬಿಡುಗಡೆ ಮಾಡುತ್ತದೆ ಎಂಬ ವಿವರಗಳು ಬಹಿರಂಗೊಳ್ಳುವ ಸಾಧ್ಯತೆ ಇದೆ. ಇನ್ನು ಪ್ರಮುಖ ತಂಡಗಳು ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.

ಐಪಿಎಲ್ ಅಭಿಮಾನಿಗಳ ಕಣ್ಣುಗಳು ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮೇಲೆ ನೆಟ್ಟಿವೆ. ಈ ತಂಡಗಳು ಯಾರನ್ನು ಉಳಿಸಿಕೊಳ್ಳುತ್ತವೆ. ಯಾರನ್ನು ಕೈ ಬಿಡುತ್ತವೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ ಉಳಿಸಿಕೊಳ್ಳುತ್ತಾ ಎಂಬ ಚರ್ಚೆಗಳು ಆರಂಭವಾಗಿವೆ. ಇನ್ನು ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡ ಯಾರಿಗೆ ಮಣೆ ಹಾಕಲಿದೆ ಎಂಬ ಕುತೂಹಲ ಮೂಡಿಸಿದೆ. 18ನೇ ಆವೃತ್ತಿಯ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದ ಪಂಜಾಬ್ ಕಿಂಗ್ಸ್ ತಂಡದ ಸಂಯೋಜನೆ ಹೇಗಿರಲಿದೆ ಎಂಬ ಪ್ರಶ್ನೆಗಳು ಎದ್ದಿವೆ. ಸನ್ ರೈಸರ್ಸ್ ತಂಡದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಕಾಣಬಹುದು ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications