ಸ್ಯಾಂಟ್ನರ್ ಕನ್ಕಶನ್ ಸಬ್ ವಿವಾದ; ಮುಂಬೈ ಕೋಚ್ ಹೇಳಿದ್ದೇನು?
19ನೇ ಆವೃತ್ತಿ ಐಪಿಎಲ್‌ನ 33 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮುಂಬೈ ಮತ್ತೊಂದು ಸೋಲು ಕಂಡಿತು. ಇದು ಈ ಆವೃತ್ತಿ ಐಪಿಎಲ್‌ನಲ್ಲಿ ಮುಂಬೈ ಕಂಡ ಐದನೇ ಸೋಲಾಗಿದೆ. ಈ ಪಂದ್ಯದಲ್ಲಿ ಮುಂಬೈನ ಆ ಒಂದು ನಡೆ ನಿಜಕ್ಕೂ ವಿವಾದವನ್ನು ಸೃಷ್ಟಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಮಾಡಿತು. ಇನಿಂಗ್ಸ್‌ನ 17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಕಾರ್ತಿಕ್ ಶರ್ಮಾ ಲಾಂಗ್ ಮೇಲೆ ದೊಡ್ಡ ಹೊಡೆತಕ್ಕೆ ಮುಂದಾದರು. ಆಗ ಅಲ್ಲಿಯೇ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಮಿಚೆಲ್ ಸ್ಯಾಂಟ್ನರ್ ಕ್ಯಾಚ್ ಪಡೆದರು. ಈ ಕ್ಯಾಚ್ ಪಡೆದಾಗ ಅವರ ಭುಜಕ್ಕೆ ಗಾಯವಾಯಿತು. ಸ್ಯಾಂಟ್ನರ್ ಭುಜದ ಗಾಯಕ್ಕೆ ಒಳಗಾದಾಗ ತಂಡವು ಕನ್ಕಶನ್ ಸಬ್ ಆಟಗಾರನನ್ನು ಏಕೆ ಬಳಸಿತು ಎಂಬ ಪ್ರಶ್ನೆಗಳು ಈಗ ಉದ್ಭವಿಸಿದೆ.

ಅಂದಹಾಗೆ ಆಟಗಾರನಿಗೆ ತಲೆ ಅಥವಾ ಕುತ್ತಿಗೆಯ ಭಾಗಕ್ಕೆ ಪೆಟ್ಟಾದಾಗ ಮಾತ್ರ ಈ ಕನ್ಕಶನ್ ಸಬ್ ಆಟಗಾರನಿಗೆ ಅವಕಾಶ ನೀಡಲಾಗುತ್ತದೆ. ಆದರೆ ಮಿಚೆಲ್ ಸ್ಯಾಂಟ್ನರ್‌ಗೆ ಆಗಿದ್ದು ಭುಜಕ್ಕೆ ಗಾಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದ ಸಹಜ. ಅಂದಹಾಗೆ ಮುಂಬೈ ಇಂಡಿಯನ್ಸ್ ಹೇಳುವ ಪ್ರಕಾರ ಮಿಚೆಲ್ ಸ್ಯಾಂಟ್ನರ್ ಕ್ಯಾಚ್ ಪಡೆಯುವಾಗ ಭುಜಕ್ಕೆ ಗಾಯವಾಗಿದೆ. ಕ್ಯಾಚ್ ಹಿಡಿಯುವಾಗ ಸ್ಯಾಂಟ್ನರ್ ತಲೆ ನೆಲಕ್ಕೆ ಬಡಿದಿದ್ದರಿಂದ ತಲೆ ತಿರುಗುವಿಕೆ ಕಾಣಿಸಿಕೊಂಡಿತು ಎಂದು ಮುಂಬೈ ಮ್ಯಾನೇಜ್ಮೆಂಟ್ ತಿಳಿಸಿತು. ಇದರ ಆಧಾರದ ಮೇಲೆ ಬದಲಿ ಆಟಗಾರನಿಗೆ ಅವಕಾಶ ನೀಡಲಾಯಿತು ಎಂದು ತಿಳಿದು ಬಂದಿದೆ. ಮುಂಬೈ ಕೋರಿಕೆಯ ಮೇರೆಗೆ, ಶಾರ್ದೂಲ್ ಠಾಕೂರ್ ಅವರನ್ನು ಮ್ಯಾಚ್ ರೆಫರಿ ಮತ್ತು ಅಂಪೈರ್ ಅನುಮತಿಯೊಂದಿಗೆ ಆಡಲು ಅನುಮತಿಸಲಾಯಿತು.
ಕೋಚ್ ಹೇಳಿದ್ದೇನು?
ಇದೇ ವಿಷಯದ ಬಗ್ಗೆ ಮಹೇಲ ಜಯವರ್ಧನೆ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. "ಡ್ರೆಸ್ಸಿಂಗ್‌ರೂಮ್‌ಗೆ ಬಂದ ನಂತರ ತಲೆತಿರುಗುವಿಕೆ ಅನುಭವಿಸಿದ ಕಾರಣ ಅವರು ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಹೀಗಾಗಿಯೇ ತಂಡ ಬದಲಿ ಆಟಗಾರನಿಗೆ ಮನವಿಯನ್ನು ಸಲ್ಲಿಸಿತು ಎಂದು ತಿಳಿಸಿದ್ದಾರೆ.
ಮಿಚೆಲ್ ಸ್ಯಾಂಟ್ನರ್ ಈ ಪಂದ್ಯದಲ್ಲಿ ಗಾಯಕ್ಕೆ ಒಳಗಾಗುವ ಮುನ್ನ 4 ಓವರ್ ಬೌಲ್ ಮಾಡಿ 44 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಇವರ ಸ್ಥಾನದಲ್ಲಿ ಆಡಿದ ಶಾರ್ದೂಲ್ ಠಾಕೂರ್ ಕೇವಲ 6 ರನ್ ಬಾರಿಸಿದರು. ಮುಂಬೈ ಐಪಿಎಲ್ ಇತಿಹಾಸದಲ್ಲೇ ರನ್ ಅಂತರದಲ್ಲಿ ದೊಡ್ಡ ಸೋಲನ್ನು ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications