Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಟೀಮ್ ಡೇವಿಡ್‌ ಸ್ಫೋಟಕ ಆಟಕ್ಕೆ ಚೆನ್ನೈ ಕಂಗಾಲು: ದೇವದತ್ ಅರ್ಧಶತಕದ ಆಟ

ಬೆಂಗಳೂರು: ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್‌ ಹಾಗೂ ಭರವಸೆಯ ಬ್ಯಾಟರ್‌ ಟೀಮ್ ಡೇವಿಡ್ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿಯ ಐಪಿಎಲ್‌ನ 11ನೇ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್‌ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 18 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 28 ರನ್‌ ಸಿಡಿಸಿದರು. ಆಗ ಆರ್‌ಸಿಬಿ ತಂಡದ ಮೊತ್ತ 37 ರನ್‌ ಆಗಿತ್ತು.

IPL 2026

ಎರಡನೇ ವಿಕೆಟ್‌ಗೆ ಫಿಲ್ ಸಾಲ್ಟ್ ಹಾಗೂ ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ಕೊಂಚ ನಿಧಾನವಾಗಿ ಆಡಿದ ಜೋಡಿ ಬಳಿಕ ರನ್‌ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿ 37 ಎಸೆತಗಳಲ್ಲಿ 56 ರನ್‌ ಸೇರಿಸಿತು. ಫಿಲ್ ಸಾಲ್ಟ್‌ 30 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 46 ರನ್‌ ಸಿಡಿಸಿದರು.

ದೇವದತ್ ಅರ್ಧಶತಕದ ಆಟ

ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್‌ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸಿದ ದೇವದತ್ ಬಳಿಕ ಅಬ್ಬರಿಸಿದರು. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಮಾಡಿದ ರೀತಿಯಲ್ಲೇ ಬ್ಯಾಟ್ ಮಾಡಿದ ದೇವದತ್ ಆರ್‌ಸಿಬಿ ತಂಡಕ್ಕೆ ಆಧಾರವಾದರು. ಇವರು 29 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 50 ರನ್‌ ಬಾರಿಸಿದ್ದಾಗ ಜೇಮಿ ಓವರ್‌ಟನ್‌ ಎಸೆತದಲ್ಲಿ ಬೋಲ್ಡ್ ಆದರು. ದೇವದತ್ ಪಡಿಕ್ಕಲ್‌ ಅವರು ಔಟ್ ಆಗುವ ಮುನ್ನ ನಾಯಕ ರಜತ್ ಪಾಟಿದಾರ್ ಅವರೊಂದಿಗೆ ಮೂರನೇ ವಿಕೆಟ್‌ಗೆ 21 ಎಸೆತಗಳಲ್ಲಿ 58 ರನ್‌ ಸೇರಿಸಿತು.

ಆರ್‌ಸಿಬಿ ತಂಡದ ದೇವದತ್ ಪಡಿಕ್ಕಲ್ ಹಾಗೂ ಟೀಮ್ ಡೇವಿಡ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಇನಿಂಗ್ಸ್‌ನ 16ನೇ ಓವರ್‌ನಲ್ಲಿ 19 ರನ್‌ ಕಲೆ ಹಾಕಿತು. 17ನೇ ಓವರ್‌ನಲ್ಲಿ 21 ರನ್‌ ಬಾರಿಸಿದ ಜೋಡಿ ಅಬ್ಬರಿಸಿತು.

ಡೇವಿಡ್ ಸ್ಫೋಟಕ ಬ್ಯಾಟಿಂಗ್

ಮಧ್ಯಮ ಕ್ರಮಾಂಕದ ಟೀಮ್ ಡೇವಿಡ್‌ ಅವರು ಸ್ಫೊಟಕ ಬ್ಯಾಟಿಂಗ್ ನಡೆಸಿದರು. ಇವರು 25 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್‌ ಸಹಾಯದಿಂದ 280ರ ಸ್ಟ್ರೈಕ್‌ ರೇಟ್‌ನಲ್ಲಿ ಅಜೇಯ 70 ರನ್‌ ಸಿಡಿಸಿದರು. ನಾಯಕ ರಜತ್‌ ಪಾಟಿದಾರ್‌ ಅಜೇಯ 48 ರನ್‌ ಸಿಡಿಸಿ ಆರ್ಭಟಿಸಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 250 ರನ್‌ ಸೇರಿಸಿತು. ಚೆನ್ನೈ ವಿರುದ್ಧ ಐಪಿಎಲ್‌ನಲ್ಲಿ ಯಾವುದೇ ಒಂದು ತಂಡ ಕಲೆ ಹಾಕಿದ ದೊಡ್ಡ ಮೊತ್ತ ಇದಾಗಿದೆ.

Story first published: Sunday, April 5, 2026, 21:21 [IST]
Other articles published on Apr 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+