Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 Qualifier 1: ಮಳೆ ಬಂದರೆ ಮೀಸಲು ದಿನ ಇದೆಯಾ? ಆರ್‌ಸಿಬಿಗೆ ವರವಾಗುತ್ತಾ ನಿಯಮ?

ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗಳವಾರ ಹೈ-ವೋಲ್ಟೇಜ್ ಕದನ ಏರ್ಪಟ್ಟಿದ್ದು, ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಫೈನಲ್ ಟಿಕೆಟ್‌ಗಾಗಿ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಎರಡೂ ತಂಡಗಳದ್ದಾಗಿದೆ. ಧರ್ಮಶಾಲಾದಲ್ಲಿ ಇದೇ ಮೊದಲ ಬಾರಿಗೆ ಗುಜರಾತ್‌ ಟೈಟಾನ್ಸ್ ಆಡಲಿದ್ದು, ಈ ಪಿಚ್‌ ಮರ್ಮ ಆರ್‌ಸಿಬಿಗೆ ಚೆನ್ನಾಗಿ ತಿಳಿದಿದೆ.

ಹವಾಮಾನ ವರದಿಗಳ ಪ್ರಕಾರ ಮಳೆಯ ಸಾಧ್ಯತೆ ಕಡಿಮೆ ಇದೆ. ಆದರೆ ಒಂದು ವೇಳೆ ಮಳೆ ಬಂದರೆ ಏನು ಹೇಳುತ್ತದೆ ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ನಿಯಮ? ಕಾಯ್ದಿರಿಸಿದ ದಿನ ಈ ಪಂದ್ಯಕ್ಕೆ ಇದೆಯಾ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಅದಕ್ಕೆ ಉತ್ತರ ಇಲ್ಲಿದೆ.

IPL 2026 Qualifier 1

ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಕನಸಿನಲ್ಲಿರುವ ಆರ್‌ಸಿಬಿ ಹಾಗೂ ಎರಡನೇ ಬಾರಿಗೆ ಪ್ರಶಸ್ತಿಯನ್ನು ಎತ್ತುವ ಕನಸಿನಲ್ಲಿರುವ ಜಿಟಿ ತಂಡಗಳು ಲೀಗ್‌ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿವೆ. ಅಲ್ಲದೆ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿದ್ದು, ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿವೆ.

ಮಳೆ ಬಂದರೆ ಏನು ಕಥೆ?

ಮೊದಲ ಕ್ವಾಲಿಫೈಯರ್ ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಅರ್ಧ ಗಂಟೆ ಮೊದಲು, ಸಂಜೆ 7 ಗಂಟೆಗೆ ಟಾಸ್ ನಡೆಯಲಿದೆ. ಈ ಆವೃತ್ತಿಯ ಐಪಿಎಲ್‌ನ ಕೆಲವು ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದೆ. ಈ ಪಂದ್ಯದಲ್ಲೂ ಅದೇ ರೀತಿ ಸಂಭವಿಸಿದರೆ ಹೆಚ್ಚುವರಿ ಸಮಯವನ್ನು ಮೀಸಲಿಡಲಾಗಿದೆ. ಇದರರ್ಥ ಹೆಚ್ಚುವರಿಯಾಗಿ ಒಂದೂವರೆ ರಿಂದ ಎರಡು ಗಂಟೆಗಳ ಕಾಲ ಸೇರಿಸಲಾಗುತ್ತದೆ. ಅಲ್ಲದೆ ಓವರ್‌ಗಳಿಗೆ ಕತ್ತರಿ ಸಹ ಹಾಕಲಾಗುತ್ತದೆ. ಸಮಯವನ್ನು ನೋಡಿಕೊಂಡು ಫಲಿತಾಂಶ ಅರಿಯಲು ಓವರ್‌ಗಳ ಸಂಖ್ಯೆಯನ್ನು ಕನಿಷ್ಠ 5 ಓವರ್‌ಗಳಿಗೆ ಸೀಮಿತಗೊಳಿಸುವ ಪ್ರಯತ್ನವಿರುತ್ತದೆ.

ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮೀಸಲು ದಿನ ಇದೆಯಾ?

ಈ ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ.

ಮಳೆಯಿಂದ ಪಂದ್ಯ ರದ್ದಾದರೆ ಯಾರಿಗೆ ಲಾಭ?

ಪಂದ್ಯ ನಡೆಯದಷ್ಟು ಮಳೆ ಬಂದು, ಒಂದು ಎಸೆತವೂ ಮಾಡದಿದ್ದರೆ, ಆರ್‌ಸಿಬಿಯನ್ನು ವಿಜೇತರೆಂದು ಪರಿಗಣಿಸಲಾಗುತ್ತದೆ ಮತ್ತು ಫೈನಲ್‌ಗೆ ಮುನ್ನಡೆಯುತ್ತದೆ. ಈ ಸನ್ನಿವೇಶದಲ್ಲಿ ಗುಜರಾತ್ ಟೈಟಾನ್ಸ್ ಕ್ವಾಲಿಫೈಯರ್ 2 ಅನ್ನು ಆಡಬೇಕಾಗುತ್ತದೆ. ಒಂದು ವೇಳೆ ಒಂದೇ ಒಂದು ಚೆಂಡು ಬೌಲ್ ಮಾಡದಿದ್ದರೆ, ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ವಿಜೇತರೆಂದು ಪರಿಗಣಿಸಲಾಗುತ್ತದೆ ಎಂಬುದು ನಿಯಮ.

Story first published: Tuesday, May 26, 2026, 5:05 [IST]
Other articles published on May 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+