For Quick Alerts
ALLOW NOTIFICATIONS  
For Daily Alerts
 

PBKS VS GT: ಪಂಜಾಬ್‌ ಕಿಂಗ್ಸ್-ಗುಜರಾತ್ ಟೈಟನ್ಸ್ ಪಂದ್ಯಕ್ಕೆ ಮಳೆ ಭೀತಿ: ಹವಾಮಾನ ಇಲಾಖೆ ಹೇಳೋದೇನು?

IPL 2026 PBKS VS GT: ಐಪಿಎಲ್ 2026ರ ಈ 4ನೇ ಪಂದ್ಯದಲ್ಲಿ ಮಂಗಳವಾರ (ಮಾರ್ಚ್ 31) ಪಂಜಾಬ್ ಕಿಂಗ್ಸ್‌ ಹಾಗೂ ಗುಜರಾತ್ ಟೈಟನ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮುಲ್ಲನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಗಾದ್ರೆ, ಇಲ್ಲಿನ ವಾತಾವರಣ ಹೇಗಿರಲಿದೆ? ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮಂಗಳವಾರ ಮುಲ್ಲನ್‌ಪುರದ ಹೊಸ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 ಸೀಸನ್‌ನ ತಮ್ಮ ಮೊದಲ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸುವ ಮೂಲಕ ತವರಿನಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಇದು ಗುಜರಾತ್ ಟೈಟನ್ಸ್‌ ತಂಡದ ನಾಯಕ ಶುಭಮನ್ ಗಿಲ್ ಅವರ ಸ್ವಂತ ಊರಾಗಿರುವುರಿಂದ ಇಲ್ಲಿ ಚೆನ್ನಾಗಿ ಪಳಗಿದ್ದಾರೆ. ಇದೇ ಕಾರಣದಿಂದ ಗಿಲ್ ಕೂಡ ಇದೇ ಭರವಸೆಯಲ್ಲಿದ್ದಾರೆ.

IPL 2026 Rain Threat Looms Over Punjab Kings vs Gujarat Titans Clash Know Complete details


ಸೋಮವಾರ ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಮಳೆ ಮುಂದುವರೆದಿತ್ತು. ಮಧ್ಯಾಹ್ನದಿಂದ ಸಂಜೆಯವರೆಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಟಾಸ್ ವಿಳಂಬವಾಗಿತ್ತು. ಮಳೆ ನಿಂತ ಬಳಿಕ ಯಾವುದೇ ಅಡ್ಡಿಯಿಲ್ಲದೇ ಸಂಪೂರ್ಣ ಪಂದ್ಯ ನಡೆದಿದ್ದು, ರಾಜಸ್ಥಾನ್ ರಾಯಲ್ಸ್ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ಪಂದ್ಯಕ್ಕೆ ಮಳೆ ಅಡ್ಡಿ ಆತಂಕ

ಇನ್ನೂ ಪಂಜಾಬ್ ಕಿಂಗ್ಸ್ ತಂಡವು ಮಂಗಳವಾರ (ಮಾರ್ಚ್‌ 31) ಸಂಜೆ ಗುಜರಾತ್ ಟೈಟನ್ಸ್‌ ವಿರುದ್ಧ ನಡೆಯಲಿರುವ 4ನೇ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆಯಿದೆ. ಕಳೆದ ಒಂದು ತಿಂಗಳಿನಿಂದ ವಿಶೇಷವಾಗಿ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಚಂಡೀಗಢವು ಹಿಮಾಚಲ ಪ್ರದೇಶದ ಪರ್ವತ ಶ್ರೇಣಿಗಳಿಗೆ ಬಹಳ ಹತ್ತಿರದಲ್ಲಿರುವುದರಿಂದ ಇಲ್ಲಿ ಮಳೆಯಾಗುವ ಸಾಧ್ಯತೆಯಿದೆ ಹೆಚ್ಚಿದೆ ಎನ್ನುವ ಮುನ್ಸೂಚನೆಯಿದೆ.

ಹವಾಮಾನ ಇಲಾಖೆ ಹೇಳೋದೇನು?

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮಂಗಳವಾರ ಸಂಜೆ ಚಂಡೀಗಢದ ಹಲವೆಡೆ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆಯ ವೇಳೆ ಶೇಕಡಾ 95ರಷ್ಟು ಮೋಡ ಕವಿದ ವಾತಾವರಣ ಇರಲಿದ್ದು, ಹಗುವ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು ಎಂಬ ಆತಂಕ ಮನೆ ಮಾಡಿದೆ.

ಮುಲ್ಲನ್‌ಪುರದ ಈ ಕ್ರೀಡಾಂಗಣದ ಪಿಚ್ ಸಂಖ್ಯೆ 4ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್‌ ನಡುವಿನ ಪಂದ್ಯ ನಡೆಯಲಿದೆ. ಇದೇ ಪಿಚ್‌ನಲ್ಲಿ 2025ರ ಐಪಿಎಲ್‌ನಲ್ಲಿ ಆತಿಥೇಯ ಪಂಜಾಬ್ ತಂಡವು ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರ ಚೊಚ್ಚಲ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ 219 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಸಿಎಸ್‌ಕೆ ತಂಡವು 201 ರನ್ ಗಳಿಸಿದ್ದು, ಅಂತಿಮವಾಗಿ ಪಂಜಾಬ್ ತಂಡವೇ ಜಯಭೇರಿ ಬಾರಿಸಿತ್ತು.

ಈ ಬಾರಿ ಪಂಜಾಬ್‌ ಕಿಂಗ್ಸ್ ತಂಡವು ತವರಿನಲ್ಲಿ ಗೆಲುವಿನ ಆರಂಭವನ್ನು ಎದುರು ನೋಡುತ್ತಿದೆ. ಈ ಪಂದ್ಯದ ನಂತರ, ಒಂಜಾಬ್‌ ಮುಂದಿನ ಎರಡು ಪಂದ್ಯಗಳನ್ನು ತವರಿಂದಾಚೆ ಆಡಲಿದೆ. ಏಪ್ರಿಲ್ 3ರಂದು ಸಿಎಸ್‌ಕೆ ವಿರುದ್ಧ ಮತ್ತು ಏಪ್ರಿಲ್ 6 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ನಂತರ ಏಪ್ರಿಲ್ 11ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲು ಮತ್ತೆ ತಮ್ಮ ತವರು ಮೈದಾನಕ್ಕೆ ಮರಳಲಿದ್ದಾರೆ. ಒಟ್ಟಿನಲ್ಲಿ ಇಂದು ನಡೆಯುವ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ವೇಳೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಅಭಿಮಾನಿಗಳು ಹಾಗೂ ತಂಡದ ಆಟಗಾರರು ಯಾವುದೇ ಅಡ್ಡಿಯಾಗದೇ ಪಂದ್ಯ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Story first published: Tuesday, March 31, 2026, 16:57 [IST]
Other articles published on Mar 31, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+