ಐಪಿಎಲ್ 2026 ರಿಟೆನ್ಷನ್ ಲೀಸ್ಟ್ ನೀಡಲು ಶನಿವಾರ (ನವೆಂಬರ್ 15) ಡೆಡ್‌ಲೈನ್ ನೀಡಲಾಗಿದ್ದು, ಎಲ್ಲರ ಕಣ್ಣುಗಳು ಫ್ರಾಂಚೈಸಿಗಳು ರಿಲೀಸ್ ಮಾಡುವ ಪಟ್ಟಿಯ ಮೇಲೆ ನೆಟ್ಟಿದೆ. ಈ ವೇಳೆ ಕೈ ಬಿಟ್ಟ ಆಟಗಾರರು ಮಿನಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯುವ ಸಾಧ್ಯತೆ ಇದೆ.
ಐಪಿಎಲ್ ಫ್ರಾಂಚೈಸಿಗಳು ಲೆಕ್ಕಾಚಾರ ಹಾಕಿಕೊಂಡು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು 18ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಆರ್‌ಸಿಬಿ ತಂಡ ಸಹ ಸ್ಟಾರ್ ಆಟಗಾರರನ್ನು ಹರಾಜು ಅಂಗಳಕ್ಕೆ ಬಿಡುವ ಸಾಧ್ಯತೆ ಇದೆ. ಈ ಬಾರಿ ಆರ್‌ಸಿಬಿ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ತಂಡ ಕೈ ಬಿಡುವ ಸಾಧ್ಯತೆ ಇದೆ. ಇನ್ನು ಕನ್ನಡಿಗ ಮಯಾಂಕ್ ಅಗರ್‌ವಾಲ್, ಬ್ಲೆಸಿಂಗ್ ಮುಜರಬಾನಿ, ರಾಸಿಖ್ ದಾರ್ ಅವರನ್ನು ಹರಾಜು ಅಂಗಳಕ್ಕೆ ಇಳಿಸುವ ಸಾಧ್ಯತೆ ಇದೆ.

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ ಭಾರೀ ಮೊತ್ತವನ್ನು ನೀಡಿ ಖರೀದಿಸಿತ್ತು. ಇವರು ತಂಡಕ್ಕೆ ಹೊರೆ ಆದಂತೆ ಕಾಣುತ್ತಿದೆ. ಹೀಗಾಗಿ ವೆಂಕಟೇಶ್ ಅಯ್ಯರ್ ಅವರನ್ನು ರಿಲೀಸ್ ಮಾಡಲು ಕೆಕೆಆರ್ ಪ್ಲ್ಯಾನ್ ಮಾಡಿಕೊಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ಡೇವಿಡ್ ಮಿಲರ್ ಅವರನ್ನು, ಡೆಲ್ಲಿ ಕ್ಯಾಪಿಟಲ್ಸ್ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ರನ್ನು, ಪಂಜಾಬ್ ತಂಡ ಗ್ಲೇನ್ ಮ್ಯಾಕ್ಸ್‌ವೆಲ್‌ರನ್ನು, ಚೆನ್ನೈ ತಂಡ ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ರಚಿನ್ ರವೀಂದ್ರ, ದೀಪಕ್ ಹೂಡಾ ಅವರನ್ನು, ಸನ್‌ರೈಸರ್ಸ್ ತಂಡ ಹ್ಯಾನ್ರಿಕ್ ಕ್ಲಾಸೇನ್, ಹರ್ಷಲ್ ಪಟೇಲ್ ರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ.
KKR: ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ಅನ್ರಿಚ್ ನಾರ್ಟ್ಜೆ
LSG: ರವಿ ಬಿಷ್ಣೋಯ್, ಡೇವಿಡ್ ಮಿಲ್ಲರ್, ಆಕಾಶ್ ದೀಪ್, ಶಮರ್ ಜೋಸೆಫ್
DC: ಟಿ ನಟರಾಜನ್, ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್
RCB: ಮಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಬ್ಲೆಸಿಂಗ್ ಮುಜರಬಾನಿ, ರಾಸಿಖ್ ದಾರ್
PBKS: ಗ್ಲೇನ್ ಮ್ಯಾಕ್ಸ್‌ವೆಲ್, ಆರನ್ ಹಾರ್ಡಿ
MI: ವಿಲ್ ಜಾಕ್ಸ್
RR: ಲುವಾನ್-ಡ್ರೆ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ಫಜಲ್ಹಕ್ ಫಾರೂಕಿ, ಕ್ವೆನಾ ಮಫಕಾ
CSK: ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ರಚಿನ್ ರವೀಂದ್ರ, ದೀಪಕ್ ಹೂಡಾ, ವಿಜಯ್ ಶಂಕರ್, ಜೇಮೀ ಓವರ್ಟನ್
GT: ಕುಸಾಲ್ ಮೆಂಡಿಸ್, ಶೆರ್ಫೇನ್ ರುದರ್‌ಫೋರ್ಡ್, ದಸುನ್ ಶನಕ, ಜೆರಾಲ್ಡ್ ಕೋಟ್ಜಿ,
SRH: ಹ್ಯಾನ್ರಿಕ್ ಕ್ಲಾಸೇನ್, ಹರ್ಷಲ್ ಪಟೇಲ್, ಸಚಿನ್ ಬೇಬಿ, ಜಯದೇವ್ ಉನಾದ್ಕಟ್, ರಾಹುಲ್ ಚಹಾರ್