Rishabh Pant ನಾಯಕತ್ವಕ್ಕೆ ಕುತ್ತು? ಸೂಚನೆ ನೀಡಿದ ಎಲ್‌ಎಸ್‌ಜಿ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮತ್ತೊಮ್ಮೆ ನಿರಾಸೆಯನ್ನು ಅನುಭವಿಸಿದೆ. ಈ ಲೀಗ್‌ನಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿರುವ ಎಲ್‌ಎಸ್‌ಜಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ತಂಡದ ನೀರಸ ಪ್ರದರ್ಶನದ ಫಲವಾಗಿ ಮುಂದಿನ ಆವೃತ್ತಿಗೆ ದೊಡ್ಡ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಆವೃತ್ತಿಯಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ರಿಷಭ್ ಪಂತ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ತಂಡದ ಆಡಳಿತ ಮಂಡಳಿಯು ಇತ್ತೀಚೆಗೆ ನೀಡಿದ ಹೇಳಿಕೆಗಳು ಫ್ರಾಂಚೈಸಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದಂತೆ ಕಾಣುತ್ತಿದೆ.
ತವರಿನಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಲ್‌ಎಸ್‌ಜಿ, ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆಯಿತು. 20 ಓವರ್‌ಗಳಲ್ಲಿ 6 ವಿಕೆಟ್‌ಗೆ 196 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲಿ ಎಡವಿದರೂ, ಮಧ್ಯದ ಓವರ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಪಂಜಾಬ್ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿ ಜಯ ಸಾಧಿಸಿತು. ಈ ಸೋಲಿನ ಮೂಲಕ ಎಲ್‌ಎಸ್‌ಜಿ ಲೀಗ್‌ಗೆ ವಿದಾಯ ಹೇಳಿದೆ. ರಿಷಭ್ ಪಂತ್ ಪಡೆ ಆಡಿದ 14 ಪಂದ್ಯಗಳಲ್ಲಿ 4 ಜಯ, 10 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಲೀಗ್ ಹಂತದಲ್ಲಿ ಕೊನೆಯ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್‌ನ ಗ್ಲೋಬಲ್ ಡೈರೆಕ್ಟರ್ ಆಫ್ ಕ್ರಿಕೆಟ್, ಟಾಮ್ ಮೂಡಿ ಮಾತನಾಡಿದ್ದಾರೆ. ಈ ವೇಳೆ ಅವರು ರೀಸೆಟ್‌ನ ಅವಶ್ಯಕತೆ ಇದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾಯಕತ್ವ ಸೇರಿದಂತೆ ಪ್ರತಿಯೊಂದು ವಿಭಾಗವನ್ನೂ ಪರಿಶೀಲಿಸಲಾಗುವುದು ಎಂದರು.
ಪಂತ್ ಸಾಧನೆ ಹೇಗಿದೆ?
ರಿಷಭ್ ಪಂತ್ ಅವರ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಇದುವರೆಗೆ 28 ಪಂದ್ಯಗಳನ್ನು ಆಡಿದ್ದು, ಕೇವಲ 10ರಲ್ಲಿ ಮಾತ್ರ ಜಯಗಳಿಸಿದೆ, ಆದರೆ 18 ಪಂದ್ಯಗಳಲ್ಲಿ ಸೋಲು ಕಂಡಿದೆ. ನಾಯಕತ್ವದ ಒತ್ತಡವು ಪಂತ್ ಅವರ ಬ್ಯಾಟಿಂಗ್ ಮೇಲೂ ಪರಿಣಾಮ ಬೀರುತ್ತಿದೆ ಎಂದು ಟಾಮ್ ಮೂಡಿ ತಿಳಿಸಿದ್ದಾರೆ. "ನಾಯಕತ್ವವು ಪಂತ್‌ಗೆ ಸವಾಲಾಗಿತ್ತು. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಇವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆಯೇ ಎಂದು ನಾವು ನೋಡಬೇಕಾಗಿದೆ. ಈ ಋತುವಿನಲ್ಲಿ ನಾವು ನಿರೀಕ್ಷೆಗಳ ಪ್ರಕಾರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಋತುವು ನಮಗೆ ಕಠಿಣ ಸವಾಲಿನದಾಗಿತ್ತು ಎಂದು ಮೂಡಿ ಹೇಳಿದ್ದಾರೆ.
ಸತತ ಎರಡನೇ ಸೀಸನ್‌ನಲ್ಲಿ ಪಂತ್ ಬ್ಯಾಟಿಂಗ್‌ನಲ್ಲೂ ನಿರಾಶೆ ಮೂಡಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ 2018 ಮತ್ತು 2019ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಪಂತ್, ಎಲ್‌ಎಸ್‌ಜಿ ಪರ ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ 581 ರನ್ ಗಳಿಸಲು ಮಾತ್ರ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications