Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಮುಂಬೈನಲ್ಲಿ ಅಬ್ಬರಿಸಿದ ಚೆನ್ನೈ: ಎಂಐ ಬ್ಯಾಟರ್‌ಗಳ ವೈಫಲ್ಯ

ಮುಂಬೈ: ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಬಾರಿಸಿದ ಶತಕ ಹಾಗೂ ಸ್ಪಿನ್ ಬೌಲರ್‌ ಅಕೇಲ್ ಹೊಸೈನ್ ಅವರ ಭರ್ಜರಿ ಪ್ರದರ್ಶನ ಫಲವಾಗಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) 19ನೇ ಆವೃತ್ತಿ ಐಪಿಎಲ್‌ನ 33ನೇ ಪಂದ್ಯದಲ್ಲಿ 103 ರನ್‌ಗಳಿಂದ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಮಣಿಸಿತು. ಈ ಭರ್ಜರಿ ಗೆಲುವಿನ ಮೂಲಕ ಚೆನ್ನೈ ತಂಡ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ಆರಂಭ ಸಾಧಾರಣಾಗಿತ್ತು. ನಾಯಕ ರುತುರಾಜ್ ಗಾಯಕ್ವಾಡ್ 22 ರನ್ ಬಾರಿಸಿ ಔಟ್ ಆದರು. ಆಗ ಚೆನ್ನೈ ಮೊತ್ತ 32 ಆಗಿತ್ತು. ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್‌ ಅವರನ್ನು ಸೇರಿಕೊಂಡ ಸರ್ಫರಾಜ್ ಖಾನ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್‌ ಪ್ಲೇನಲ್ಲಿ ಉತ್ತಮ ಜೊತೆಯಾಟ ನೀಡಿತು. ಈ ಜೋಡಿ 40 ರನ್‌ ಸಿಡಿಸಿದ್ದಾಗ ಸರ್ಫರಾಜ್‌ (14) ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.

IPL 2026

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಶಿವಂ ದುಬೆ (5) ರನ್ ಕಲೆ ಹಾಕುವಲ್ಲಿ ವಿಫಲರಾದರು. 4ನೇ ವಿಕೆಟ್‌ಗೆ ಸಂಜು ಹಾಗೂ ಡೆವಾಲ್ಡ್ ಬ್ರೆವಿಸ್ ಜೋಡಿ 35 ಎಸೆತಗಳಲ್ಲಿ 43 ರನ್ ಸೇರಿಸಿತು. ಈ ಹಂತದಲ್ಲಿ ಬ್ರೆವಿಸ್ 1 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 21 ರನ್ ಸಿಡಿಸಿದರು. ಕಾರ್ತಿಕ್ ಶರ್ಮಾ 18, ಜೇಮಿ ಓವರ್‌ಟನ್ 15 ರನ್‌ ಕಲೆ ಹಾಕಿದರು.

ಸಂಜು ಶತಕದ ಅಬ್ಬರ

ಈ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸುತ್ತಿರುವ ಸಂಜು ಸ್ಯಾಮ್ಸನ್‌ ಮತ್ತೊಮ್ಮೆ ಅಬ್ಬರಿಸಿದರು. ಇವರು 54 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಬಾರಿಸಿದರು. ಇದು ಈ ಲೀಗ್‌ನಲ್ಲಿ ಸಂಜು ಬಾರಿಸಿದ ಎರಡನೇ ಶತಕವಾಗಿದೆ. ಸಿಎಸ್‌ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 207 ರನ್‌ ಕಲೆ ಹಾಕಿತು.

ತವರಿನಲ್ಲಿ ಮುಖಭಂಗ

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗಾರ ಕ್ವಿಂಟನ್ ಡಿಕಾಕ್ (7), ನಮನ್ ಧೀರ್ (0) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಜೋಡಿ 4ನೇ ವಿಕೆಟ್‌ಗೆ 56 ಎಸೆತಗಳಲ್ಲಿ 73 ರನ್‌ ಸೇರಿಸಿತು. ಈ ಹಂತದಲ್ಲಿ 37 ರನ್ ಬಾರಿಸಿದ್ದ ತಿಲಕ್ ವರ್ಮಾ ಔಟ್ ಆದರು. ಸೂರ್ಯಕುಮಾರ್ ಯಾದವ್ 35 ರನ್ ಬಾರಿಸಿ ಅಕೇಲ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು. ನಂತರದ ಬಂದ ಯಾವೊಬ್ಬ ಬ್ಯಾಟರ್ ಎರಡಂಕಿಯ ಮೊತ್ತವನ್ನು ಮುಟ್ಟಲಿಲ್ಲ. ಅಂತಿಮವಾಗಿ ಮುಂಬೈ 19 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಆಯಿತು.

ಸ್ಪಿನ್ ಕಮಾಲ್

ಚೆನ್ನೈ ತಂಡದ ಸ್ಪಿನ್ ಬೌಲರ್‌ಗಳಾದ ಅಕೇಲ್ ಹೊಸೈನ್ ಹಾಗೂ ನೂರ್ ಅಹ್ಮದ್ ಕಮಾಲ್ ಮಾಡಿದರು. ಅಕೇಲ್ ಹೊಸೈನ್ 17 ರನ್‌ ನೀಡಿ 4 ವಿಕೆಟ್ ಪಡೆದರೆ, ನೂರ್ ಅಹ್ಮದ್ 23 ರನ್ ನೀಡಿ 2 ವಿಕೆಟ್‌ ಪಡೆದರು.

Story first published: Thursday, April 23, 2026, 23:59 [IST]
Other articles published on Apr 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+