Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಹಾಲಿ ಚಾಂಪಿಯನ್‌ ಆರ್‌ಸಿಬಿ ಸೋಲಿಗೆ ಕಾರಣವೇನು?

ಅಹಮದಾಬಾದ್: 19ನೇ ಆವೃತ್ತಿ ಐಪಿಎಲ್‌ನ 42ನೇ ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಯಿತು. ಈ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್‌ (ಜಿಟಿ) ತಂಡಗಳು ಕಣಕ್ಕೆ ಇಳಿದವು. ಈ ಪಂದ್ಯಕ್ಕೂ ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟರ್‌ ಫಿಲ್ ಸಾಲ್ಟ್ ಕಣಕ್ಕೆ ಇಳಿಯಲಿಲ್ಲ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಜಾಕೊಬ್ ಬೆಥೆಲ್ (5), ವಿರಾಟ್‌ ಕೊಹ್ಲಿ (28), ದೇವದತ್ ಪಡಿಕ್ಕಲ್ (40) ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ 15.5 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್‌ ಸೇರಿಸಿ ಜಯ ಸಾಧಿಸಿತು.

IPL 2026

ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ಕಾರಣವಾದ ಅಂಶಗಳು ಯಾವವು ಎಂಬ ಬಗ್ಗೆ ಅವಲೋಕಿಸಿದಾಗ, ನಿಜಕ್ಕೂ ಟಾಪ್‌ ಆರ್ಡರ್ ಬ್ಯಾಟರ್‌ಗಳ ವೈಫಲ್ಯ ಎದ್ದು ಕಾಣುತ್ತದೆ. ಆದರೆ ಈ ಬ್ಯಾಟರ್‌ಗಳು ರನ್‌ ರೇಟ್‌ ಹಿಗ್ಗಿಸುವ ಭರದಲ್ಲೇ ಔಟ್ ಆಗಿರುವುದು ತಂಡದ ಯೋಜನೆಯನ್ನೇ ತೊರಿಸುವಂತಿದೆ. ಎಲ್ಲ ಆಟಗಾರರು ದೊಡ್ಡ ಹಿಟ್ ಬಾರಿಸಲು ಹೋದರೆ ಹೊರತು ನಿಂತು ಆಡುವ ಗೋಜಿಗೆ ಹೋಗಲಿಲ್ಲ. ಅಲ್ಲದೆ ಈ ಪಂದ್ಯದಲ್ಲಿ ಜೊತೆಯಾಟಗಳು ಬಾರದೆ ಇರುವುದು ಸಹ ದೊಡ್ಡ ಮೊತ್ತದ ಆಸೆಗೆ ಪೆಟ್ಟು ನೀಡಿತು.

ಆರ್‌ಸಿಬಿ ಸೋಲಿಗೆ ಇದುವೇ ನಿಜವಾದ ಕಾರಣ

ಗುಜರಾತ್ ಟೈಟಾನ್ಸ್ ತಂಡದ ಬೌಲರ್‌ಗಳು ಆರ್‌ಸಿಬಿ ಬ್ಯಾಟರ್‌ಗಳ ವಿರುದ್ಧ ಭರ್ಜರಿ ಯೋಜನೆಯನ್ನು ಹೆಣೆದುಕೊಂಡು ಬಂದಿದ್ದರು. ಅಂತೆಯೇ ಮೈದಾನದಲ್ಲಿ ಇದನ್ನು ಕಾರ್ಯರೂಪಕ್ಕೂ ಸಹ ತಂದರು. ಆರ್‌ಸಿಬಿ ಈ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಜವಾಬ್ದಾರಿ ಮರೆತಿರುವದೇ ದೊಡ್ಡ ಕಾರಣ. ಜಿತೇಶ್‌ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್‌, ಇಂಪ್ಯಾಕ್ಟ್ ಪ್ಲೇಯರ್ ಆದ ವೆಂಕಟೇಶ್‌ ಅಯ್ಯರ್‌ ಟೈಟಾನ್ಸ್ ಬೌಲರ್‌ಗಳು ಹೇರಿದ್ದ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಪರಿಣಾಮ ಆರ್‌ಸಿಬಿ ಮೂರನೇ ಸೋಲು ಕಾಣಲು ಕಾರಣರಾದರು.

ಆರ್‌ಸಿಬಿ ಈ ಪಂದ್ಯದಲ್ಲಿ ಸೋಲು ಅನುಭವಿಸಿದರೂ ಸಹ ನೆಟ್‌ ರನ್‌ ರೇಟ್‌ ಉತ್ತಮವಾಗಿದ್ದು, 12 ಅಂಕಗಳನ್ನು ಹೊಂದಿದೆ. ಹೀಗಾಗಿ ಈಗಲೂ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.

ಸಂಕ್ಷಿಪ್ತ ಸ್ಕೊರ್‌

ಆರ್‌ಸಿಬಿ 19.2 ಓವರ್‌ಗಳಲ್ಲಿ 155: ದೇವದತ್ ಪಡಿಕ್ಕಲ್ 40, ವಿರಾಟ್ ಕೊಹ್ಲಿ 28, ಅರ್ಷದ್ ಖಾನ್ 22ಕ್ಕೆ 3, ರಶೀದ್ ಖಾನ್‌ 15ಕ್ಕೆ 2, ಜೇಸನ್ ಹೋಲ್ಡರ್ 29ಕ್ಕೆ 2

ಗುಜರಾತ್ ಟೈಟಾನ್ಸ್ 15.5 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್‌: ಶುಭಮನ್‌ ಗಿಲ್ 43, ಜೋಸ್ ಬಟ್ಲರ್ 39, ರಾಹುಲ್ ತೆವಟಿಯಾ 27, ಭುವನೇಶ್ವರ್ ಕುಮಾರ್ 28ಕ್ಕೆ 3, ರೊಮಾರಿಯೋ ಶೆಫರ್ಡ್‌ 30ಕ್ಕೆ 2

ಪಂದ್ಯದ ಫಲಿತಾಂಶ: ಗುಜರಾತ್‌ ಟೈಟಾನ್ಸ್‌ಗೆ 4 ವಿಕೆಟ್‌ ಜಯ

Story first published: Friday, May 1, 2026, 7:05 [IST]
Other articles published on May 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+