ಮುಂಬೈ, ಏ. 13: ತವರಿನಲ್ಲಿಯೇ ಮುಂಬೈ ಇಂಡಿಯನ್ಸ್ ಪಂಜಾಬ್ ವಿರುದ್ಧ ಸೋಲು ಅನುಭವಿಸಿದೆ. ಸಂಪೂರ್ಣ ಮನರಂಜನೆ ನೀಡಿದ ಪಂದ್ಯದಲ್ಲಿ ಮುಂಬೈ ಆಟಗಾರ ಹರ್ಭಜನ್ ಸಿಂಗ್ ಬ್ಯಾಟಿಂಗ್ ವೈಭವವೇ ಹೈಲೈಟ್.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲವೆನ್ ಪಂಜಾಬ್ ನೀಡಿದ 178 ರನ್ನುಗಳ ಗುರಿ ಬೆನ್ನತ್ತಿದ ಮುಂಬಯಿ ಇಂಡಿಯನ್ಸ್ ಆರಂಭ ಶೋಚನಿಯವಾಗಿತ್ತು. 59 ರನ್ ಗಳಿಸುವಷ್ಟರಲ್ಲಿ ಮುಂಬೈ ತನ್ನ ಪ್ರಮುಖ ಎಲ್ಲ ಆಟಗಾರರನ್ನು ಕಳೆದುಕೊಂಡಿತ್ತು. ಆದರೆ 6ನೇ ವಿಕೆಟಿಗೆ ಜೊತೆಯಾದ ಹರ್ಭಜನ್ ಸಿಂಗ್ (64) ಹಾಗೂ ಜಗದೀಶ್ ಸುಚಿತ್ (34) 100 ರನ್ ಜತೆಯಾಟ ನೀಡಿ ಗೆಲುವಿನ ಆಸೆ ಚಿಗುರಿಸಿದ್ದರು.[ಬ್ಯಾಟಿಂಗ್ ಮರೆತು ಸೋತ್ರಾ ಪ್ರೀತಿ ಹುಡುಗರು!]

ಅಂತಿಮವಾಗಿ ಮುಂಬಯಿ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟುಗಳನ್ನು ಕಳೆದುಕೊಂಡು 159 ರನ್ ಗಳಿಸಿ18 ರನ್ ಅಂತರಿಂದ ಸೋಲು ಒಪ್ಪಿಕೊಂಡಿತು. ಅರ್ಥ ಶತಕ ಗಳಿಸಿದ ಪಂಜಾಬ್ ನಾಯಕ ಜಾರ್ಜ್ ಬೈಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. [ಆರ್ ಸಿಬಿ vs ಹೈದರಾಬಾದ್ ಕದನಕ್ಕೆ ಸೌರಶಕ್ತಿ]
ನಿಜವಾದ ಟಿ-20 ಧಮಾಕಾ ತೋರಿದ್ದು ಹರ್ಭಜನ್ ಸಿಂಗ್. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಭಜ್ಜಿ ತಮ್ಮ ಬ್ಯಾಟಿಂಗ್ ಕೌಶಲ್ಯ ಪ್ರದರ್ಶನ ಮಾಡಿದರು. ಅನುರೀತ್ ಸಿಂಗ್ ಅವರ ಓವರೊಂದರಲ್ಲಿ ಸತತ 3 ಸಿಕ್ಸರ್ ಗಳನ್ನು ಸಿಡಿಸಿದ್ದು ಅವರ ಸ್ಫೋಟಕ ಆಟಕ್ಕೆ ಮೆರುಗು ನೀಡಿತ್ತು. ಕೊನೆಯ ಓವರ್ ನಲ್ಲಿ ಅನುರೀತ್ ಸಿಂಗ್ ಅವರುಗೆ ವಿಕೆಟ್ ಒಪ್ಪಿಸಿದ ಹರ್ ಭಜನ್ ಗೆ ಎಲ್ಲ ಆಟಗಾರರು ಅಭಿನಂದನೆ ಸಲ್ಲಿಸಿದರು.
