Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ರೆಂಡನ್ ಮೆಕಲಂ ಶತಕದಬ್ಬರಕ್ಕೆ ದಿಕ್ಕು ತಪ್ಪಿದ ಹೈದ್ರಾಬಾದ್

ಚೆನ್ನೈ, ಏ. 12: ಹೈದ್ರಾಬಾದ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದ ಬ್ರೆಂಡನ್ ಮೆಕಲಂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ನಲ್ಲಿ ಸತತ ಎರಡನೇ ಗೆಲುವು ದಕ್ಕಿಸಿಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ ಧೋನಿ ನೇತೃತ್ವದ ತಂಡ 209 ರನ್ ಗಳ ಭರ್ಜರಿ ಮೊತ್ತ ಪೇರಿಸಿತು. ಹೈದ್ರಾಬಾದ್ ತಂಡ 164 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಆರಂಭಿಕರಾಗಿ ಕಣಕ್ಕಿಳಿದ ಬ್ರೆಂಡನ್ ಮೆಕಲಂ ಕೇವಲ 56 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್ ಒಳಗೊಂಡ ಅಜೇಯ 100 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಹೊಂದಿದ್ದ 53 ರನ್ ಗಳಿಸಿ ಮೊತ್ತ ಹಿಗ್ಗಲು ಕಾರಣರಾದರು.[ಕಾಲು ನೋವಿನ ನಡುವೆಯೂ ಪಂದ್ಯ ಗೆಲ್ಲಿಸಿಕೊಟ್ಟ ಗೇಲ್]

ipl 8

ಕೊನೆಯ ಓವರ್ ನಲ್ಲಿ ಶತಕ
ಮೆಕಲಂ ಶತಕ ದಾಖಲೆಗೆ ಕೊನೆಉ 3 ಚೆಂಡುಗಳಲ್ಲಿ 11 ರನ್ ಬೇಕಿತ್ತು. ಬೌಲ್ಟ್ ಬೌಲಿಂಗ್ ನಡೆಸಿತ್ತಿದ್ದರು. ಆದರೆ ಮೆಕಲಂ 4 ನೇ ಚೆಂಡನ್ನು ಬೌಂಡರಿ, 5 ನೇ ಚೆಂಡನ್ನು ಸಿಕ್ಸರ್ ಮತ್ತು ಆರನೇ ಚೆಂಡಲ್ಲಿ ಒಂದು ರನ್ ದಾಖಲಿಸುವ ಮೂಲಕ ಶತಕ ಸಾಧನೆ ಮಾಡಿದರು. ಕರಣ್ ಶರ್ಮಾ ಓವರ್ ನಲ್ಲಿ ಮಹೇಂಧ್ರ ಸಿಂಗ್ ಧೋನಿ 3 ಸಿಕ್ಸರ್ ಬಾರಿಸಿದ್ದು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಹೈದ್ರಾಬಾದ್ ಪರ ನಾಯಕ ಡೇವಿಡ್ ವಾರ್ನರ್ 42 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸೇರಿದಂತೆ 53 ರನ್ ಗಳಿಸಿದರು. ಉಳಿದಂತೆ ಯಾವ ಆಟಗಾರರು ನಿರೀಕ್ಷಿತ ಪ್ರಮಾಣದ ಆಟ ಪ್ರದರ್ಶಿಸಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ತಂಡ ನಿಜ ಸಾಮರ್ಥ್ಯ ತೋರದಿರುವುದು ಚೆನ್ನೈಗೆ ವರದಾನವಾಗಿ ಪರಿಣಮಿಸಿತು.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+