ಹರಾಜು ಕೂಗುತ್ತಲೇ ಕುಸಿದುಬಿದ್ದ ಹರಾಜುಗಾರ; ಮತ್ತೆ ಮುಂದುವರಿಯುತ್ತಾ ಐಪಿಎಲ್ 2022 ಹರಾಜು?

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬೃಹತ್ ಮೆಗಾ ಹರಾಜು ಕಾರ್ಯಕ್ರಮ ಇಂದು ( ಫೆಬ್ರವರಿ 12 ) ಮತ್ತು ನಾಳೆ ( ಫೆಬ್ರವರಿ 13 ) 2 ದಿನಗಳ ಕಾಲ ನಡೆಯಬೇಕಿದೆ. ಹೀಗೆ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರಂಭವಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹರಾಜುಗಾರನಾಗಿ ಬ್ರಿಟನ್ ಮೂಲದ ಹಗ್ ಎಡ್ಮೀಡ್ಸ್ ಕಾರ್ಯಕ್ರಮವನ್ನು ಆರಂಭಿಸಿದ್ದರು.
20ಕ್ಕೂ ಹೆಚ್ಚು ಆಟಗಾರರ ಹೆಸರನ್ನು ಯಾವುದೇ ಅಡೆತಡೆ ಇಲ್ಲದೆ ಸರಾಗವಾಗಿ ಕೂಗಿ ಯಶಸ್ವಿಯಾಗಿ ಹರಾಜನ್ನು ನಡೆಸುತ್ತಿದ್ದ ಹಗ್ ಎಡ್ಮೀಡ್ಸ್ ಶ್ರೀಲಂಕಾ ಮೂಲದ ವನಿಂದು ಹಸರಂಗ ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಏಕಾ ಏಕಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ. ಹರಾಜು ಪ್ರಕ್ರಿಯೆ ಆರಂಭವಾಗಿ 2 ಗಂಟೆಗಳಲ್ಲಿಯೇ ಹಗ್ ಎಡ್ಮೀಡ್ಸ್ ಈ ರೀತಿ ಕುಸಿದುಬಿದ್ದಿರುವುದು ಸದ್ಯ ಐಪಿಎಲ್ ಫ್ರಾಂಚೈಸಿ ಮಾಲೀಕರು, ಅಲ್ಲಿ ನೆರೆದಿದ್ದ ಸಿಬ್ಬಂದಿ ವರ್ಗದವರು, ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಇದೀಗ ಆತಂಕ ಮೂಡಿಸಿದೆ. ಅಷ್ಟೇ ಅಲ್ಲದೆ ಇಂದು ನಡೆಯಬೇಕಿದ್ದ ಮೆಗಾ ಹರಾಜು ಮತ್ತೆ ಆರಂಭವಾಗಲಿದೆಯಾ ಎಂಬ ಅನುಮಾನವನ್ನು ಮೂಡಿಸಿದೆ. ಮೂಲಗಳು ತಿಳಿಸಿರುವ ಪ್ರಕಾರ ಮಧ್ಯಾಹ್ನ 3.30ಕ್ಕೆ ಮೆಗಾ ಹರಾಜು ಮತ್ತೆ ಮುಂದುವರಿಯಲಿದೆ.

2018ರ ನಂತರ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದ ಹಗ್ ಎಡ್ಮೀಡ್ಸ್
ಬ್ರಿಟನ್ ಮೂಲದ ಹಗ್ ಎಡ್ಮೀಡ್ಸ್ ಪ್ರಪಂಚದಾದ್ಯಂತ ಸುಮಾರು 2500ಕ್ಕೂ ಹೆಚ್ಚು ಹರಾಜು ಪ್ರಕ್ರಿಯೆಗಳಲ್ಲಿ ಹರಾಜುಗಾರನಾಗಿ ಕೆಲಸ ನಿರ್ವಹಿಸಿರುವ ದೊಡ್ಡ ಅನುಭವವನ್ನು ಹೊಂದಿದ್ದಾರೆ. 2018ರಲ್ಲಿ ಜೈಪುರದಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಹರಾಜುಗಾರನಾಗಿ ಆಗಮಿಸಿದ್ದ ಹಗ್ ಎಡ್ಮೀಡ್ಸ್ 4 ವರ್ಷಗಳ ಬಳಿಕ ಮತ್ತೆ ಭಾರತೀಯ ಕ್ರಿಕೆಟ್‍ಗೆ ಸಂಬಂಧಿಸಿದ ಹರಾಜಿನಲ್ಲಿ ಭಾಗವಹಿಸಿದ್ದಾರೆ.

ಸದ್ಯ ಚಿಕಿತ್ಸೆ ಪಡೆಯುತ್ತಿರುವ ಹಗ್ ಎಡ್ಮೀಡ್ಸ್
ಹೀಗೆ ದಿಢೀರನೇ ಕುಸಿದು ಬಿದ್ದಿರುವ ಹಗ್ ಎಡ್ಮೀಡ್ಸ್ ಅಗತ್ಯ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಸಮಯಕ್ಕೆ ಎಲ್ಲಾ ಫ್ರಾಂಚೈಸಿಗಳ ಸದಸ್ಯರು, ಸಿಬ್ಬಂದಿವರ್ಗದವರು ಹಾಗೂ ತಾಂತ್ರಿಕ ವರ್ಗದವರು ಭೋಜನವನ್ನು ಸೇವಿಸಿದ್ದಾರೆ. ಈ ಭೋಜನ ಮುಕ್ತಾಯವಾಗುತ್ತಿದ್ದಂತೆ ಮಧ್ಯಾಹ್ನ 3.30ಕ್ಕೆ ಈ ಮೆಗಾ ಹರಾಜು ಪ್ರಕ್ರಿಯೆ ಪುನಃ ಮುಂದುವರಿಯಲಿದೆ.

ಮೆಗಾ ಹರಾಜಿನ ಆಶ್ಚರ್ಯಕರ ಸಂಗತಿಗಳು
ಇನ್ನು ಹಗ್ ಎಡ್ಮೀಡ್ಸ್ ಕುಸಿದು ಬೀಳುವ ಸಮಯದವರೆಗೂ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತೀವ್ರ ಆಶ್ಚರ್ಯವನ್ನು ಉಂಟು ಮಾಡಿದ ಸಂಗತಿಗಳೆಂದರೆ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿಯನ್ನು ಪಡೆದಿರುವ ಸುರೇಶ್ ರೈನಾ ಯಾವುದೇ ಬಿಡ್ ಪಡೆದುಕೊಳ್ಳದೆ ಅನ್ ಸೋಲ್ಡ್ ಆಗಿ ಉಳಿದದ್ದು ಮತ್ತು ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಕೂಡ ಯಾವುದೇ ಬಿಡ್ ಪಡೆದುಕೊಳ್ಳದೇ ಉಳಿದದ್ದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications