For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು; ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರು ಯಾರು?

ವಿದೇಶಿ ಆಟಗಾರರ ಮೇಲೆ ಊಹಿಸದಷ್ಟು ಹಣ ಸುರಿದ IPL | Oneindia Kannada
IPL Auction 2020; Top Buys Of Auction

ಐಪಿಎಲ್ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದೆ. ಅಂತರಾಷ್ಟ್ರೀಯ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಪೈಪೋಟಿಯನ್ನು ನಡೆಸುತ್ತಿವೆ. ಕೆಲ ಆಟಗಾರರಂತೂ ಅನಿರೀಕ್ಷಿತವಾಗಿ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದಾರೆ.

ಐಪಿಎಲ್ ಹರಾಜು; ವಿಶೇಷ ಪುಟ

ಅದರಲ್ಲೂ ಈ ಬಾರಿ ಬೌಲರ್‌ಗಳ ಮೇಲೆ ಫ್ರಾಂಚೈಸಿಗಳು ದೊಡ್ಡ ಮೊತ್ತವನ್ನು ಹೂಡಯತ್ತಿರುವುದು ಈ ಬಾರಿಯ ಹರಾಜಿನ ಹೈಲೈಟ್ಸ್‌ ಆಗಿದೆ. ಇಲ್ಲಿವರೆಗಿನ ಹರಾಜಿನಲ್ಲಿ ಬೌಲರ್‌ಗಳು ಸಿಂಹಪಾಲನ್ನು ಪಡೆದುಕೊಂಡಿದ್ದಾರೆ

ಆಸ್ಟ್ರೇಲಿಯಾ ಆಟಗಾರರು ಉತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಹತ್ತು ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ವೇಗಿ ಕ್ರಿಸ್ ಮೋರಿಸ್ ಕೂಡ ಅತ್ಯುತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ. ಅದರಲ್ಲೂ ಪ್ಯಾಟ್‌ ಕಮ್ಮಿನ್ಸ್ 15.50 ಕೋಟಿಗೆ ಹರಾಜಾಗಿದ್ದು, ಐಪಿಎಲ್ ಇತಿಹಾಸದಲ್ಲಿ ವಿದೇಶಿ ಆಟಗಾರ ಪಡೆದಿರುವ ದೊಡ್ಡ ಮೊತ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ಯಾಟ್ ಕಮ್ಮಿನ್ಸ್

ಪ್ಯಾಟ್ ಕಮ್ಮಿನ್ಸ್

ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಈ ಬಾರಿಯ ಹರಾಜಿನಲ್ಲಿ ದಾಖಲೆಯನ್ನು ಮಾಡಿದ್ದಾರೆ. 15.50 ಕೋಟಿ ಮೊತ್ತಕ್ಕೆ ಹರಾಜಾಗಿದ್ದು ವಿದೇಶಿ ಆಟಗಾರ ಪಡೆದಿರುವ ದೊಡ್ಡ ಮೊತ್ತವಾಗಿದೆ. ಕೊಲ್ಕತ್ತಾ ತಂಡ ಪ್ಯಾಟ್ ಕಮಿನ್ಸ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿದೆ.

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಹಾಗೂ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದೊಡ್ಡ ಮೊತ್ತಕ್ಕೆ ಹರಾಜಾಗಿರುವ ಮತ್ತೋರ್ವ ಆಟಗಾರ. ಪಂಜಾಬ್ ತಂಡ ಮ್ಯಾಕ್ಸ್‌ವೆಲ್ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು 10.75 ಕೋಟಿ ನೀಡಿದೆ. ಮ್ಯಾಕ್ಸ್‌ವೆಲ್ 2 ಕೋಟಿ ಮೂಲ ಬೆಲೆಯನ್ನು ಹೊಂದಿದ್ದರು.

ಐಪಿಎಲ್ 2020: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಸಂಪೂರ್ಣ ಪಟ್ಟಿ

ಕ್ರಿಸ್ ಮೋರಿಸ್

ಕ್ರಿಸ್ ಮೋರಿಸ್

1.50 ಕೋಟಿ ಮೂಲ ಬೆಲೆಯನ್ನು ಹೊಂದಿದ್ದ ಕ್ರಿಸ್ ಮೋರಿಸ್ ಕೂಡ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಆರ್‌ಸಿಬಿ ಪಾಲಾಗಿರುವ ದಕ್ಷಿಣ ಆಫ್ರಿಕಾದ ವೇಗಿ 10 ಕೋಟಿ ಮೊತ್ತವನ್ನು ಜೇಬಿಗಿಳಿಸಿದ್ದಾರೆ.

ಶೆಲ್ಡನ್ ಕಾಟ್ರೆಲ್

ಶೆಲ್ಡನ್ ಕಾಟ್ರೆಲ್

ವೆಸ್ಟ್‌ ಇಂಡೀಸ್‌ನ ಮಾರಕ ವೇಗಿ ಶೆಲ್ಡನ್ ಕಾಟ್ರೆಲ್ ಈ ಬಾರಿಯ ಹರಾಜಿನಲ್ಲಿ ಗಮನ ಸೆಳೆದಿದ್ದರು. ಇಂದಿನ ಹರಾಜಿನಲ್ಲಿ ಕಾಟ್ರೆಲ್ ನಿರೀಕ್ಷೆಯಂತೆಯೇ ಉತ್ತಮ ಮೊತ್ತವನ್ನು ಪಡೆದುಕೊಂಡಿದ್ದಾರೆ. ಕೇವಲ 50 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದ ಕಾಟ್ರೆಲ್ ಬರೊಬ್ಬರಿ 8.50 ಕೋಟಿ ಮೊತ್ತಕ್ಕೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ.

ನಥನ್ ಕೌಲ್ಟರ್ ನೈಲ್

ನಥನ್ ಕೌಲ್ಟರ್ ನೈಲ್

ಮತ್ತೋರ್ವ ಆಸಿಸ್ ವೇಗಿ ನಥನ್ ಕೌಲ್ಟರ್ ನೇಲ್ ಕೂಡ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದಾರೆ. ಕೌಲ್ಟರ್ ನೈಲ್ 1 ಕೋಟಿ ಮೂಲ ಬೆಲೆಯನ್ನು ಹೊಂದಿದ್ದರು. ಇವರನ್ನು ಮುಂಬೈ ಇಂಡಿಯನ್ಸ್ ತಂಡ 8 ಕೋಟಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ.

Story first published: Friday, December 20, 2019, 9:03 [IST]
Other articles published on Dec 20, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+