IPL 2022: ಐಪಿಎಲ್ ಹರಾಜು ಪಟ್ಟಿಗೆ ಹೆಚ್ಚುವರಿ 10 ಆಟಗಾರರನ್ನ ಸೇರಿಸಿದ ಬಿಸಿಸಿಐ

ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ಬಿಸಿಸಿಐ 10 ಹೆಚ್ಚುವರಿ ಆಟಗಾರರನ್ನ ಹರಾಜು ಪಟ್ಟಿಗೆ ಸೇರಿಸಿದೆ. ಇದರಲ್ಲಿ ಮೂರು ವಿದೇಶಿ ಆಟಗಾರರು ಮತ್ತು ಏಳು ಸ್ವದೇಶಿ ಆಟಗಾರರು ಒಳಗೊಂಡಿದ್ದಾರೆ.
ಇದಕ್ಕೂ ಮೊದಲು ಈ ಬಾರಿ 10 ಫ್ರಾಂಚೈಸಿಗಳು 590 ಆಟಗಾರರ ಮೇಲೆ ಬಿಡ್ ಮಾಡಬೇಕಿತ್ತು. ಆದ್ರೀಗ ಈ ಪಟ್ಟಿಯಲ್ಲಿರುವ ಆಟಗಾರರ ಸಂಖ್ಯೆಯು 600ಕ್ಕೇ ಏರಿಕೆಗೊಂಡಿದೆ. ಇವರಲ್ಲಿ 229 ಕ್ಯಾಪ್ಡ್ ಆಟಗಾರರು, 364 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ. ಆದ್ರೆ ಇದ್ರ ಜೊತೆಗೆ 10 ಆಟಗಾರರು ಕೊನೆಯ ಹಂತದಲ್ಲಿ ಸೇರ್ಪಡೆಗೊಂಡಿದ್ದು, ಮೆಗಾ ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ವಿಭಿನ್ನ ತಂತ್ರದೊಂದಿಗೆ ಕಣಕ್ಕಿಳಿದಿವೆ. ಯಾವ ಆಟಗಾರನ ಮೇಲೆ ಬಿಡ್ ಮಾಡಬೇಕು, ಎಷ್ಟು ಖರ್ಚು ಮಾಡಬೇಕು ಎಂಬ ನಿಖರವಾದ ಲೆಕ್ಕಾಚಾರ ಹಾಕಿಕೊಂಡಿವೆ.
ಹೊಸದಾಗಿ ಐಪಿಎಲ್ ಹರಾಜು ಪಟ್ಟಿಗೆ ಸೇರ್ಪಡೆಗೊಂಡ 10 ಆಟಗಾರರು:
ಅಗ್ನಿವೇಶ್ ಅಯಾಚಿ, ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ರೋಹನ್ ರಾಣಾ, ಕೆ ನಿತೀಶ್ ರೆಡ್ಡಿ, ಹಾರ್ದಿಕ್ ತಮೋರ್, ಮಿಹಿರ್ ಹಿರ್ವಾನಿ, ಸಾಯಿರಾಜ್ ಪಾಟೀಲ್, ಮೋನು ಸಿಂಗ್. ಹೊಸದಾಗಿ ಸೇರ್ಪಡೆಯಾದ ಎಲ್ಲಾ ಆಟಗಾರರ ಮೂಲ ಬೆಲೆ 20 ಲಕ್ಷ ರೂ. ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications