For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ತನ್ನನ್ನು ಖರೀದಿಸಿದ ಫ್ರಾಂಚೈಸಿಗೆ ಕನ್ನಡದಲ್ಲಿಯೇ ನಮಸ್ಕರಿಸಿದ ಆಟಗಾರ

IPL Auction 2022: Anuj Rawat thanked Royal Challengers Bangalore in Kannada

ಬೆಂಗಳೂರಿನಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನ ಮೊದಲನೇ ದಿನ ಮುಕ್ತಾಯವಾಗಿದ್ದು ಸದ್ಯ ಎರಡನೇ ದಿನದ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಮೊದಲನೇ ದಿನದ ಹರಾಜಿನಲ್ಲಿ 74 ಆಟಗಾರರು ಬಿಕರಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 8 ಆಟಗಾರರನ್ನು ಮೊದಲನೇ ದಿನದ ಹರಾಜಿನಲ್ಲಿ ತೆಕ್ಕೆಗೆ ಹಾಕಿಕೊಂಡಿತು.

ಹೌದು, ಮೊದಲನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಶಹಬಾಜ್ ಅಹಮದ್, ಅನುಜ್ ರಾವತ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್ ಮತ್ತು ಆಕಾಶ್ ದೀಪ್ ಈ 8 ಆಟಗಾರರನ್ನು ಖರೀದಿಸಿದೆ. ಈ ಪೈಕಿ ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಮೊದಲನೇ ದಿನದಂದು ಅತಿ ಹೆಚ್ಚು ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದ ಆಟಗಾರರು ಎನಿಸಿಕೊಂಡರು. ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಇಬ್ಬರೂ ಸಹ ತಲಾ 10.75 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಾದರು.

ಇವರ ಜತೆಗೆ ಇನ್ನೂ ಸಹ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಕೂಡ ಆಡದೆ ಇರುವಂತಹ ಅನೂಜ್ ರಾವತ್ 3.4 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದಾರೆ. ಮೂಲತಃ ಉತ್ತರಾಖಂಡ್ ರಾಜ್ಯದ ರಾಮನಗರದವನಾಗಿರುವ ಅನುಜ್ ರಾವತ್ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ ಆಗಿದ್ದಾರೆ. ಹೀಗೆ ತನ್ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿರುವುದರ ಕುರಿತು ಮಾತನಾಡಿರುವ ಅನೂಜ್ ರಾವತ್ ತನ್ನ ಮೇಲೆ ನಂಬಿಕೆ ಇಟ್ಟು ಖರೀದಿ ಮಾಡಿದ ಫ್ರಾಂಚೈಸಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಈ ವಿಶೇಷ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಇದಕ್ಕೆ ಅನೂಜ್ ರಾವತ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರತ್ಯುತ್ತರವನ್ನು ನೀಡಿದ್ದಾರೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೋಸ್ಟ್ ಮಾಡಿರುವ ವಿಡಿಯೋಗೆ ನಮಸ್ಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಅನುಜ್ ರಾವತ್ ಕನ್ನಡದಲ್ಲಿಯೇ ಬರೆದುಕೊಂಡಿದ್ದಾರೆ. ಈ ಮೂಲಕ ಕನ್ನಡ ಜನರ ಮೆಚ್ಚುಗೆಗೆ ಅನೂಜ್ ರಾವತ್ ಪಾತ್ರರಾಗಿದ್ದಾರೆ.

ಇನ್ನು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಮೊತ್ತ ಪಡೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿರುವ ಅನುಜ್ ರಾವತ್ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸದಸ್ಯನಾಗಿದ್ದರು ಹಾಗೂ ಆ ಆವೃತ್ತಿಯಲ್ಲಿ ಒಟ್ಟು 2 ಪಂದ್ಯಗಳನ್ನಾಡಿರುವ ಅನುಜ್ ರಾವತ್ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡಿರಲಿಲ್ಲ.

Story first published: Sunday, February 13, 2022, 16:34 [IST]
Other articles published on Feb 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+