ಐಪಿಎಲ್ ಮೆಗಾ ಹರಾಜು: ಕಳಪೆ ಫಾರ್ಮ್‌ನಿಂದ ಹರಾಜಾಗದೇ ಉಳಿದ ಮೂವರು ಅನುಭವಿ ಆಟಗಾರರು

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಸದ್ಯ ಬೆಂಗಳೂರು ನಗರದಲ್ಲಿ ಈ ಟೂರ್ನಿಗೆ ಸಂಬಂಧಿಸಿದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ನಿನ್ನೆ ( ಫೆಬ್ರವರಿ 12 ) ಆರಂಭವಾದ ಈ ಮೆಗಾ ಹರಾಜು, ಇಂದು ( ಫೆಬ್ರವರಿ 13 ) ಮುಕ್ತಾಯವಾಗಲಿದೆ. ಹರಾಜಿನ ಎರಡನೇ ದಿನವಾದ ಇಂದು ಆರಂಭದಲ್ಲಿಯೇ ಏಡನ್ ಮಾರ್ಕ್ರಮ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾದರೆ, ದೊಡ್ಡ ಮೊತ್ತಕ್ಕೆ ಲಿಯಾಮ್ ಲಿವಿಂಗ್‌ಸ್ಟನ್ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಹೀಗೆ ಯುವ ಕ್ರಿಕೆಟಿಗರು ಎರಡನೇ ದಿನದ ಹರಾಜಿನಲ್ಲಿ ಕೋಟಿ ಕೋಟಿ ಬಾಚಿದರೆ ಅತ್ತ ಅನುಭವಿ ಆಟಗಾರರು ಯಾವುದೇ ಬಿಡ್ ಪಡೆದುಕೊಳ್ಳದೇ ಅನ್ ಸೋಲ್ಡ್ ಆಗಿದ್ದಾರೆ.
ಹೌದು, ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸದಸ್ಯನಾಗಿದ್ದ ಚೇತೇಶ್ವರ್ ಪೂಜಾರ ಈ ಬಾರಿಯ ಮೆಗಾ ಹರಾಜಿನಲ್ಲಿ 50 ಲಕ್ಷ ಮೂಲಬೆಲೆಯೊಂದಿಗೆ ಭಾಗವಹಿಸಿದ್ದು ಯಾವುದೇ ಫ್ರಾಂಚೈಸಿಯಿಂದ ಖರೀದಿಸಲ್ಪಡದೇ ಅನ್ ಸೋಲ್ಡ್ ಆಗಿದ್ದಾರೆ. ಆಸ್ಟ್ರೇಲಿಯಾ ಮೂಲದ ಆ್ಯರನ್ ಫಿಂಚ್ 1.5 ಕೋಟಿ ಮೂಲಬೆಲೆಯೊಂದಿಗೆ ಭಾಗವಹಿಸಿ ಬಿಕರಿಯಾಗದೇ ಉಳಿದುಕೊಂಡಿದ್ದಾರೆ. ಹಾಗೂ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ 1.5 ಮುಖಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದು ಅನ್ ಸೋಲ್ಡ್ ಆಗಿ ಉಳಿದಿದ್ದಾರೆ. ಹೀಗೆ ಈ ಮೂವರು ಆಟಗಾರರು ಸಹ ಆಟದಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದರೂ ಕೂಡ ಉತ್ತಮ ಫಾರ್ಮ್ ಇಲ್ಲದಿರುವ ಕಾರಣದಿಂದಾಗಿ ಯಾವುದೇ ಫ್ರಾಂಚೈಸಿಯಿಂದ ಬಿಡ್ ಪಡೆದುಕೊಳ್ಳಲಾಗದೇ ನಿರಾಸೆಗೊಳಗಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications