
ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ರಾಜಸ್ತಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
ಆರಂಭದಿಂದಲೂ ಪಡಿಕ್ಕಲ್‌ಗೆ ಹಲವು ಫ್ರಾಂಚೈಸಿಗಳು ನಿರಂತರ ಪ್ರಯತ್ನ ನಡೆಸಿದವು. ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ತಾನ್ ರಾಯಲ್ಸ್ ನಿರಂತರ ಬಿಡ್ ಮಾಡುವ ಮೂಲಕ ಪಡಿಕ್ಕಲ್ ಪಡೆಯಲು ಪ್ರಯತ್ನ ನಡೆಸಿದವು. ಆದ್ರೆ ಕೊನೆಯಲ್ಲಿ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿ ದೇವದತ್ ಪಡಿಕ್ಕಲ್‌ರನ್ನ 7.75 ಕೋಟಿ ರೂಪಾಯಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಕಳೆದ ಎರಡು ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಆಡಿದ್ದ ದೇವದತ್ ಪಡಿಕ್ಕಲ್ ಈ ಬಾರಿ ರಾಜಸ್ತಾನ್ ರಾಯಲ್ಸ್ ಪರ ಆಡಲಿದ್ದಾರೆ.