
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡುಪ್ಲೆಸಿಸ್‌ರನ್ನ ಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸ್ಫೋಟಕ ಆಟಗಾರ ಮತ್ತು ಅತ್ಯಂತ ಕನ್ಸಿಸ್ಟೆನ್ಸಿ ಹೊಂದಿರುವ ಫಾಫ್ ಡುಪ್ಲೆಸಿಸ್‌ರನ್ನ ಕೊಂಡುಕೊಳ್ಳಲು ಸಖತ್ ಬಿಡ್ ನಡೆಸಿದವು. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮಾಜಿ ಆಟಗಾರರನ್ನ ಮತ್ತೆ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿತು. ಆದ್ರೆ ಅಂತಿಮವಾಗಿ ಡುಪ್ಲೆಸಿಸ್ ಬೆಲೆಯನ್ನ ಏಳು ಕೋಟಿ ರೂಪಾಯಿಗೆ ಆರ್‌ಸಿಬಿ ಬಿಡ್ ಮಾಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಬಿಡ್ ನಿಂದ ಹಿಂದೆ ಸರಿಯಿತು.
ಪರಿಣಾಮ ಅಂತಿಮವಾಗಿ ಫಾಫ್ ಡುಪ್ಲೆಸಿಸ್ 7 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಾಗಿದ್ದಾರೆ. ಈ ಮೂಲಕ ಐಪಿಎಲ್ 15ನೇ ಸೀಸನ್‌ನಲ್ಲಿ ಆರ್‌ಸಿಬಿ ಓಪನಿಂಗ್ ಸ್ಲಾಟ್‌ನಲ್ಲಿ ಬಲಿಷ್ಠ ಆಟಗಾರನೊಬ್ಬ ಸೇರ್ಪಡೆಯಾದಂತಿದೆ.
ಕಳೆದ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಲು ಫಾಫ್ ಡುಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ಓಪನಿಂಗ್ ಜೋಡಿ ಸಾಕಷ್ಟು ಕೊಡುಗೆ ನೀಡಿತ್ತು.