ಐಪಿಎಲ್ 2022 ಹರಾಜು: ಕನ್ನಡಿಗರಿಗೆ ಸಿಕ್ಕಿದ್ದು ಎಷ್ಟು ಕೋಟಿ? 16 ಆಟಗಾರರು ಯಾವ ತಂಡಗಳ ಪಾಲು?

ಮುಂಬರಲಿರುವ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಕಳೆದ ಶನಿವಾರ ಹಾಗೂ ಭಾನುವಾರದಂದು ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಿಂದ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದೆ.
ಹೌದು, ಈ 2 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜು ಸದ್ಯ ಕ್ರೀಡಾ ಜಗತ್ತಿನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾದ ಇಶಾನ್ ಕಿಶನ್ ಅತಿ ದೊಡ್ಡ ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿಕೊಂಡರು. ಹೀಗೆ ಇಶಾನ್ ಕಿಶನ್ ಸೇರಿದಂತೆ ಹಲವಾರು ಭಾರತೀಯ ಕ್ರಿಕೆಟಿಗರಿಗೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತ ದಕ್ಕಿದ್ದು, ಕರ್ನಾಟಕದ 14 ಆಟಗಾರರು ಕೂಡ ಯಶಸ್ವಿಯಾಗಿ ಬಿಕರಿಯಾಗುವುದರ ಮೂಲಕ ವಿವಿಧ ತಂಡಗಳನ್ನು ಸೇರಿಕೊಂಡಿದ್ದಾರೆ.
ಕೆಎಲ್ ರಾಹುಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದರೆ, ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿಯೇ ರಿಟೈನ್ ಆಗಿದ್ದರು. ಹೀಗೆ ಈ ಇಬ್ಬರು ಆಟಗಾರರನ್ನೊಳಗೊಂಡಂತೆ ಮೆಗಾ ಹರಾಜಿನ ನಂತರ ಒಟ್ಟು 16 ಕರ್ನಾಟಕದ ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದು ಯಾರು ಯಾವ ತಂಡದ ಪಾಲಾಗಿದ್ದಾರೆ ಮತ್ತು ಕನ್ನಡಿಗರು ಒಟ್ಟು ಎಷ್ಟು ಮೊತ್ತಕ್ಕೆ ಬಿಕರಿಯಾಗಿದ್ದಾರೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಟೂರ್ನಿಯಲ್ಲಿ ಭಾಗವಹಿಸಲಿರುವ ಕರ್ನಾಟಕದ ಆಟಗಾರರು ಮತ್ತು ಬಿಕರಿಯಾದ ಹಣದ ವಿವರ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಕ್ತಾಯವಾದ ನಂತರ ರಿಟೈನ್ ಆಗಿದ್ದ ಆಟಗಾರರೂ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸಲಿರುವ ಕರ್ನಾಟಕದ 16 ಆಟಗಾರರೆಂದರೆ: ಮನೀಷ್ ಪಾಂಡೆ 4.6 ಕೋಟಿ (ಲಕ್ನೋ ಸೂಪರ್ ಜೈಂಟ್ಸ್), ಕೆ ಎಲ್ ರಾಹುಲ್ 17 ಕೋಟಿ (ಲಕ್ನೋ ಸೂಪರ್ ಜೈಂಟ್ಸ್), ಕೃಷ್ಣಪ್ಪ ಗೌತಮ್ 90 ಲಕ್ಷ (ಲಕ್ನೋ ಸೂಪರ್ ಜೈಂಟ್ಸ್), ಪ್ರವೀಣ್ ದುಬೆ 50 ಲಕ್ಷ ( ಡೆಲ್ಲಿ ಕ್ಯಾಪಿಟಲ್ಸ್), ಅಭಿನವ್ ಮನೋಹರ್ 2.6 ಕೋಟಿ (ಗುಜರಾತ್ ಟೈಟಾನ್ಸ್), ಮಯಾಂಕ್ ಅಗರ್ವಾಲ್ 12 ಕೋಟಿ ( ಪಂಜಾಬ್ ಕಿಂಗ್ಸ್ ), ದೇವದತ್ ಪಡಿಕ್ಕಲ್ 7.75 ಕೋಟಿ ( ರಾಜಸ್ಥಾನ್ ರಾಯಲ್ಸ್), ಕೆಸಿ ಕಾರಿಯಪ್ಪ 30 ಲಕ್ಷ ( ರಾಜಸ್ಥಾನ್ ರಾಯಲ್ಸ್ ), ಪ್ರಸಿದ್ಧ್ ಕೃಷ್ಣ 10 ಕೋಟಿ ( ರಾಜಸ್ಥಾನ್ ರಾಯಲ್ಸ್ ), ಕರುಣ್ ನಾಯರ್ 1.4 ಕೋಟಿ ( ರಾಜಸ್ಥಾನ್ ರಾಯಲ್ಸ್) , ರವಿಕುಮಾರ್ ಸಮರ್ಥ್ 20 ಲಕ್ಷ (ಸನ್ ರೈಸರ್ಸ್ ಹೈದರಾಬಾದ್), ಜಗದೀಶ ಸುಚಿತ್ 20 ಲಕ್ಷ ( ಸನ್ ರೈಸರ್ಸ್ ಹೈದರಾಬಾದ್ ) , ಶ್ರೇಯಸ್ ಗೋಪಾಲ್ 75 ಲಕ್ಷ ( ಸನ್ ರೈಸರ್ಸ್ ಹೈದರಾಬಾದ್), ರಾಬಿನ್ ಉತ್ತಪ್ಪ 2 ಕೋಟಿ ( ಚೆನ್ನೈ ಸೂಪರ್ ಕಿಂಗ್ಸ್ ), ಅನೀಶ್ವರ್ ಗೌತಮ್ 20 ಲಕ್ಷ ( ರಾಯಲ್ ಚಾಲೆಂಜರ್ಸ್ ಬೆಂಗಳೂರು ) ಮತ್ತು ಲುವನಿತ್ ಸಿಸೋಡಿಯಾ 20 ಲಕ್ಷ ( ರಾಯಲ್ ಚಾಲೆಂಜರ್ಸ್ ಬೆಂಗಳೂರು )

ಕನ್ನಡಿಗರಿಗೆ ಸಿಕ್ಕ ಒಟ್ಟು ಹಣವೆಷ್ಟು
ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 16 ಕರ್ನಾಟಕದ ಆಟಗಾರರು ಕಣಕ್ಕಿಳಿಯುತ್ತಿದ್ದು, ಎಲ್ಲಾ ಆಟಗಾರರು ಸೇರಿದಂತೆ ಒಟ್ಟು 60.60 ಕೋಟಿಗೆ ಬಿಕರಿಯಾಗಿದ್ದಾರೆ. ಕೆಎಲ್ ರಾಹುಲ್ 17 ಕೋಟಿ ಪಡೆದುಕೊಂಡರೆ, ಮಯಾಂಕ್ ಅಗರ್ವಾಲ್ 12 ಕೋಟಿಗೆ ರಿಟೇನ್ ಆಗಿದ್ದಾರೆ ಹಾಗೂ ಮೆಗಾ ಹರಾಜಿನಲ್ಲಿ ಇತ್ತೀಚೆಗಷ್ಟೇ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿರುವ ಪ್ರಸಿದ್ಧ್ ಕೃಷ್ಣ 10 ಕೋಟಿ ಬಾಚಿದ್ದರೆ. ಹೀಗೆ ಈ ಮೂವರು ಆಟಗಾರರು ಕೂಡ ಈ ಬಾರಿಯ ಟೂರ್ನಿಯಲ್ಲಿ 10 ಹಾಗೂ 10 ಕೋಟಿಗಿಂತ ಹೆಚ್ಚು ಹಣ ಪಡೆದಿರುವ ಕರ್ನಾಟಕದ ಆಟಗಾರರು ಎನಿಸಿಕೊಂಡಿದ್ದಾರೆ.

ಮೆಗಾ ಹರಾಜಿನಲ್ಲಿ ಕನ್ನಡಿಗರ ಮೇಲೆ ಹೆಚ್ಚು ಹಣ ಸುರಿದದ್ದು ಈ ಫ್ರಾಂಚೈಸಿ
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮೆಗಾ ಹರಾಜಿಗೂ ಮುನ್ನ ಕನ್ನಡಿಗರ ಮೇಲೆ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದರೆ, ರಾಜಸ್ಥಾನ್ ರಾಯಲ್ಸ್ ಮೆಗಾ ಹರಾಜಿನಲ್ಲಿ ಕನ್ನಡಿಗರ ಮೇಲೆ ಹೆಚ್ಚು ಹಣ ಸುರಿದ ಫ್ರಾಂಚೈಸಿ ಎನಿಸಿಕೊಂಡಿತು. ದೇವದತ್ ಪಡಿಕ್ಕಲ್ ಅವರನ್ನು 7.75 ಕೋಟಿಗೆ ಖರೀದಿಸಿದ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿ ಮತ್ತೋರ್ವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಖರೀದಿಸಲು 10 ಕೋಟಿ ನೀಡಿದೆ. ಹೀಗೆ ಈ ಇಬ್ಬರು ಆಟಗಾರರನ್ನು ಬೃಹತ್ ಮೊತ್ತಕ್ಕೆ ಜಿದ್ದಾಜಿದ್ದಿನ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications