ಐಪಿಎಲ್ ಹರಾಜು: ಮುಂಬೈ ತೆಕ್ಕೆಗೆ ಬಲಿಷ್ಠ ಬೌಲರ್; ಈತ ಮತ್ತು ಬುಮ್ರಾ ಜೋಡಿ ಮಾಡಲಿದೆ ಮೋಡಿ

ಬೆಂಗಳೂರಿನಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನ ಎರಡನೇ ದಿನವಾದ ಇಂದು ಮುಂಬೈ ಇಂಡಿಯನ್ಸ್ ಇಬ್ಬರು ಪ್ರಮುಖ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹೌದು, ಚುಟುಕು ಕ್ರಿಕೆಟ್ ಕದನಗಳಲ್ಲಿ ಡೇಂಜರಸ್ ಆಟಗಾರರು ಎನಿಸಿಕೊಂಡಿರುವ ಬೌಲರ್ ಜೋಫ್ರಾ ಆರ್ಚರ್ ಮತ್ತು ಅನ್ ಕ್ಯಾಪ್ಡ್ ಆಲ್ರೌಂಡರ್ ಟಿಮ್ ಡೇವಿಡ್ ಈ ಇಬ್ಬರು ಆಟಗಾರರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ.
ಇಂಗ್ಲೆಂಡ್ ಮೂಲದ ವೇಗಿ ಜೋಫ್ರಾ ಆರ್ಚರ್ ಅವರನ್ನು ಬರೋಬ್ಬರಿ 8 ಕೋಟಿಗೆ ಖರೀದಿಸಿದ ಮುಂಬೈ ಇಂಡಿಯನ್ಸ್ ಇನ್ನೂ ಸಹ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಡದೇ ಇರುವಂತಹ ಆಲ್ ರೌಂಡರ್ ಆಟಗಾರ ಟಿಮ್ ಡೇವಿಡ್ ಅವರನ್ನು 8.25 ಕೋಟಿಗೆ ಖರೀದಿಸಿದೆ. ಈಗಾಗಲೇ ತಂಡದಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಬಲ್ಲ ಬೌಲರ್ ಜಸ್ಪ್ರೀತ್ ಬುಮ್ರಾ ಇದ್ದು ಇದೀಗ ಜೋಫ್ರಾ ಆರ್ಚರ್ ಮತ್ತು ಆಲ್ ರೌಂಡರ್ ಟಿಮ್ ಡೇವಿಡ್ ಸೇರ್ಪಡೆಯಾಗಿರುವುದು ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗವನ್ನು ಸಿಕ್ಕಾಪಟ್ಟೆ ಬಲಿಷ್ಠಗೊಳಿಸಿದೆ. ಸದ್ಯ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗದ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಚರ್ಚೆಗಳನ್ನು ನಡೆಸುತ್ತಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ ಇತರೆ ಎಲ್ಲಾ ತಂಡಗಳಿಗಿಂತ ಬಲಿಷ್ಠವಾಗಿರಲಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications