For Quick Alerts
ALLOW NOTIFICATIONS  
For Daily Alerts
 

ಅನ್‌ಸೋಲ್ಡ್ ಆಗಿದ್ದ ಕರುಣ್ ನಾಯರ್ ಕೊನೆಗೂ ಹರಾಜು: 1.4 ಕೋಟಿಗೆ ರಾಜಸ್ತಾನ್ ರಾಯಲ್ಸ್‌ಗೆ ಹರಾಜು

Karun Nair

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನಲ್ಲಿ ಅನ್‌ಸೋಲ್ಡ್ ಆಗಿ ಉಳಿದಿದ್ದ ಕನ್ನಡಿಗ ಕರುಣ್ ನಾಯರ್ ಕೊನೆಗೂ ಹರಾಜಾಗುವಲ್ಲಿ ಯಶಸ್ವಿಯಾಗಿದ್ದು, ರಾಜಸ್ತಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.

ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಅನ್‌ಸೋಲ್ಡ್ ಆಗಿ ಉಳಿದಿದ್ದ ಕರುಣ್ ನಾಯರ್ ಅಂತಿಮ ಸುತ್ತಿನಲ್ಲಿ ರಾಜಸ್ತಾನ್ ರಾಯಲ್ಸ್ ಮತ್ತು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸತತ ಬಿಡ್ ಮಾಡುವ ಮೂಲಕ ಪಡೆಯುವ ಪ್ರಯತ್ನ ನಡೆಸಿದವು. ಆದ್ರೆ ಅಂತಿಮ ಹಂತದಲ್ಲಿ ರಾಜಸ್ತಾನ್ ರಾಯಲ್ಸ್ ಬಿಡ್‌ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ನಾಯರ್ 1.4 ಕೋಟಿ ರೂಪಾಯಿಗೆ ರಾಜಸ್ತಾನ್ ರಾಯಲ್ಸ್ ಪರ ಆಡಲಿದ್ದಾರೆ.

50 ಲಕ್ಷ ಮೂಲ ಬೆಲೆ ಹೊಂದಿರುವ ಕರುಣ್ ಕಳೆದ ಕೆಲವು ಸೀನಸ್‌ಗಳಲ್ಲಿ ಪಂಜಾಬ್ ಕಿಂಗ್ಸ್ ಪರ ಸಿಕ್ಕ ಅವಕಾಶಗಳನ್ನ ಕೈ ಚೆಲ್ಲಿದ್ದರು. ಆದ್ರೀಗ 2022ರ ಸೀಸನ್‌ನಲ್ಲಿ ರಾಯಲ್ಸ್ ಪರ ಆಡಲಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಆರ್‌ಆರ್‌ ಫ್ರಾಂಚೈಸಿ ''ತುಂಬಾ ಸಮಯವಾಯ್ತು, ಪುನಃ ಸ್ವಾಗತ'' ಎಂದು ಕರುಣ್ ನಾಯರ್ ಆರ್ ಆರ್ ಪರ ಆಡಿದ್ದ ಫೋಟೋವೊಂದನ್ನ ಶೇರ್ ಮಾಡಿದೆ.

ಕರುಣ್ ನಾಯಕರ್ ಇದುವರೆಗೂ 73 ಐಪಿಎಲ್ ಪಂದ್ಯಗಳನ್ನ ಆಡಿದ್ದು, 24.66ರ ಬ್ಯಾಟಿಂಗ್ ಸರಾಸರಿಯಲ್ಲಿ 1480 ರನ್ ಕಲೆಹಾಕಿದ್ದಾರೆ. ಅಲ್ಲದೆ 10 ಅರ್ಧಶತಕಗಳು ಇವರ ಬ್ಯಾಟ್‌ನಿಂದ ಸಿಡಿದಿವೆ.

ಆರ್‌ಸಿಬಿ ಮೂಲಕ ಐಪಿಎಲ್ ಜರ್ನಿ ಆರಂಭ

IPL Auction 2022 : Royal Challengers Bangalore Full Squad | Oneindia Kannada

2013ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಜರ್ನಿ ಆರಂಭಿಸಿದ್ದ ಕರುಣ್ ಕೇವಲ ಎರಡು ಪಂದ್ಯ ಆಡಿದ್ರು. ಆದ್ರೆ 2014ರ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಕರುಣ್‌ ನಾಯರ್‌ನನ್ನ ಹರಾಜಿನಲ್ಲಿ ಕೊಂಡುಕೊಂಡಿತು. ನಾಲ್ಕು ವರ್ಷಗಳ ಕಾಲ ರಾಜಸ್ತಾನ್ ಪರ ಆಡಿದ್ದ ಕರುಣ್ 2016ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ್ರು. ನಂತರ 2018ರ ಸೀಸನ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಇವರನ್ನ ಖರೀದಿಸಿತು. ಈ ಸೀಸನನ್‌ನಲ್ಲಿ ಕರುಣ್ 300ಕ್ಕೂ ಹೆಚ್ಚು ರನ್ ಕಲೆಹಾಕಿದ್ರು.

Story first published: Monday, February 14, 2022, 9:32 [IST]
Other articles published on Feb 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+