ಐಪಿಎಲ್ ಹರಾಜು: ಒಟ್ಟು 113 ಐಪಿಎಲ್ ರನ್ ಗಳಿಸಿರುವ ಆಟಗಾರನ ಮೇಲೆ 11.5 ಕೋಟಿ ಸುರಿದ ಪಂಜಾಬ್!

ಬೆಂಗಳೂರಿನಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನ ಎರಡನೇ ದಿನವಾದ ಇಂದು ಇಂಗ್ಲೆಂಡ್ ಮೂಲದ ಕ್ರಿಕೆಟಿಗ ಲಿಯಾಮ್ ಲಿವಿಂಗ್‌ಸ್ಟನ್ ಬರೋಬ್ಬರಿ 11.50 ಕೋಟಿಗೆ ಬಿಕರಿಯಾಗಿದ್ದಾರೆ.
ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಲಿಯಾಮ್ ಲಿವಿಂಗ್‌ಸ್ಟನ್ ಬಲಗೈ ಲೆಗ್ ಬ್ರೇಕ್ ಬೌಲರ್ ಕೂಡ ಹೌದು. ಹೀಗೆ ಬ್ಯಾಟಿಂಗ್ ವಿಭಾಗದ ಜೊತೆಗೆ ಬೌಲಿಂಗ್ ವಿಭಾಗದಲ್ಲಿಯೂ ಕೂಡ ತನ್ನನ್ನು ತಾನು ತೊಡಗಿಸಿಕೊಳ್ಳುವಂತಹ ಸಾಮರ್ಥ್ಯವಿರುವ ಲಿಯಾಮ್ ಲಿವಿಂಗ್‌ಸ್ಟನ್ ಮೇಲೆ ಪಂಜಾಬ್ ಕಿಂಗ್ಸ್ 11.50 ಕೋಟಿ ಹೂಡಿಕೆ ಮಾಡಿದೆ. ಇನ್ನು ಕಳೆದೆರಡು ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ಲಿಯಾಮ್ ಲಿವಿಂಗ್‌ಸ್ಟನ್ ಒಟ್ಟು 9 ಪಂದ್ಯಗಳನ್ನಾಡಿ 113 ರನ್ ಕಲೆಹಾಕಿದ್ದಾರೆ ಹಾಗೂ ಈ ಪಂದ್ಯಗಳ ಪೈಕಿ 1 ಓವರ್ ಬೌಲಿಂಗ್ ಮಾಡಿರುವ ಲಿಯಾಮ್ ಲಿವಿಂಗ್‌ಸ್ಟನ್ ಯಾವುದೇ ವಿಕೆಟ್ ಪಡೆಯದೇ 13 ರನ್ ನೀಡಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹೇಳಿಕೊಳ್ಳುವಂತಹ ಉತ್ತಮ ಅಂಕಿಅಂಶವನ್ನು ಹೊಂದಿಲ್ಲದೇ ಇರುವ ಲಿಯಾಮ್ ಲಿವಿಂಗ್‌ಸ್ಟನ್ ಮೇಲೆ ಇಷ್ಟು ದೊಡ್ಡ ಮೊತ್ತದ ಹರಾಜು ನೆಡೆದದ್ದು ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications