For Quick Alerts
ALLOW NOTIFICATIONS  
For Daily Alerts
 

IPL 2022 Auction Live Updates: ಅಂತಿಮ ಹಂತದ ಹರಾಜು ಪ್ರಕ್ರಿಯೆ ಶುರು

By ಪ್ರತಿನಿಧಿ

ಐಪಿಎಲ್ 2022ರ ಆವೃತ್ತಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಒಟ್ಟು 590 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಇವರಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ಫ್ರಾಂಚೈಸಿಗಳು ಲೆಕ್ಕಾಚಾರವನ್ನು ನಡೆಸುತ್ತಿದೆ. ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದ್ದು 370 ಭಾರತೀಯರು ಹಾಗೂ 220 ವಿದೇಶಿ ಆಟಗಾರರು ಹರಾಜಿಗಾಗಿ ಎದುರು ನೋಡುತ್ತಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರರ ಹೆಸರಿದ್ದು ಈ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಶ್ರೇಯಸ್ ಐಯ್ಯರ್, ಇಶಾನ್ ಕಿಶನ್, ಆರ್ ಅಶ್ವಿನ್ ಮುಂತಾದ ಆಟಗಾರರ ಹರಾಜಿನ ಮೇಲೆ ತೀವ್ರ ಕುತೂಹಲವಿದೆ.

Feb 13, 2022, 9:22 pm IST

ಇಲ್ಲಿಗೆ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, 66 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 203 ಆಟಗಾರರು ಹರಾಜಾಗಿದ್ದಾರೆ ಹಾಗೂ ಈ ಪೈಕಿ 108 ಆಟಗಾರರು 1 ಕೋಟಿಗಿಂತ ಅಧಿಕ ಬೆಲೆಗೆ ಬಿಕರಿಯಾಗಿದ್ದಾರೆ.

Feb 13, 2022, 9:17 pm IST

ರಾಹುಲ್ ಚಂದ್ರೋಲ್ ಮತ್ತು ಆಕಾಶ್ ಮಧ್ವಾಲ್ ಕೊನೆಯ ಸುತ್ತಿನಲ್ಲಿಯೂ ಕೂಡ ಹರಾಜಾಗಲಿಲ್ಲ

Feb 13, 2022, 9:17 pm IST

ಶಿವಾಂಕ್ ವಶಿಷ್ಟ್ ಕೊನೆಯ ಸುತ್ತಿನಲ್ಲಿಯೂ ಕೂಡ ಹರಾಜಾಗದೆ ಹೊರಬಿದ್ದಿದ್ದಾರೆ

Feb 13, 2022, 9:17 pm IST

ಅಮನ್ ಖಾನ್ 20 ಲಕ್ಷಕ್ಕೆ ಕೋಲ್ಕತಾ ನೈಟ್ ರೈಡರ್ಸ್ ಸೇರಿದ್ದಾರೆ

Feb 13, 2022, 9:16 pm IST

ಡೇವಿಡ್ ವಿಲ್ಲೆ 2 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆಕ್ಕೆಗೆ ಬಿದ್ದಿದ್ದಾರೆ

Feb 13, 2022, 9:15 pm IST

ಫ್ಯಾಬಿಯನ್ ಅಲೆನ್ 75 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಸೇರಿದ್ದಾರೆ

Feb 13, 2022, 9:15 pm IST

ಲುವ್ನಿತ್ ಸಿಸೋಡಿಯಾ 20 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ

Feb 13, 2022, 9:14 pm IST

ಆರ್ಯನ್ ಜುಯಲ್ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ

Feb 13, 2022, 9:13 pm IST

ಸಮೀರ್ ರಿಜ್ವಿ ಮತ್ತೊಮ್ಮೆ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 9:13 pm IST

ಯುವ ಆಟಗಾರ ವಿಕ್ಕಿ ಓಸ್ತ್ವಲ್ 20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ

Feb 13, 2022, 9:10 pm IST

ರೋಹನ್ ಕದಂ ಕೂಡ ಅಂತಿಮ ಹಂತದಲ್ಲಿ ಹರಾಜಾಗುವಲ್ಲಿ ವಿಫಲರಾಗಿದ್ದಾರೆ

Feb 13, 2022, 9:09 pm IST

ಆ್ಯಂಡ್ರ್ಯೂ ಟೈ ಅಂತಿಮ ಹರಾಜು ಹಂತದಲ್ಲಿಯೂ ಕೂಡ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 9:08 pm IST

ಸಿದ್ಧಾರ್ಥ್ ಕೌಲ್ 75 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ

Feb 13, 2022, 9:04 pm IST

ಡೆರಿಲ್ ಮಿಚೆಲ್ 75 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 9:03 pm IST

ದಕ್ಷಿಣ ಆಫ್ರಿಕಾದ ವಾನ್ ಡರ್ ಡಸನ್ 1 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 9:02 pm IST

ಕ್ವೀಸ್ ಅಹ್ಮದ್ ಮತ್ತೊಮ್ಮೆ ಹರಾಜಾಗದೆ ಹೊರಬಿದ್ದಿದ್ದಾರೆ

Feb 13, 2022, 9:02 pm IST

ಇಶಾಂತ್ ಶರ್ಮಾ ಕೊನೆಯ ಹಂತದ ಹರಾಜಿನಲ್ಲಿಯೂ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 9:01 pm IST

ನಾಥನ್ ಕೌಲ್ಟರ್ ನೈಲ್ 2 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ

Feb 13, 2022, 9:01 pm IST

ಜೇಮ್ಸ್ ನೀಶಮ್ 1.5 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 9:00 pm IST

ಭಾರತದ ವೇಗಿ ಉಮೇಶ್ ಯಾದವ್ 2 ಕೋಟಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 8:59 pm IST

ಆಲ್ ರೌಂಡರ್ ಮುಹಮ್ಮದ್ ನಬಿ ಕೊನೆಯ ಹಂತದ ಹರಾಜು ಪ್ರಕ್ರಿಯೆಯಲ್ಲಿ 1 ಕೋಟಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೇರಿದ್ದಾರೆ

Feb 13, 2022, 8:55 pm IST

ಅಂತಿಮ ಹಂತದ ಹರಾಜು ಪ್ರಕ್ರಿಯೆ ಶುರು

Feb 13, 2022, 8:42 pm IST

ಮೊದಲನೇ ದಿನದ ಹರಾಜಿನ ಸಂದರ್ಭದಲ್ಲಿ ಕಡಿಮೆ ರಕ್ತದೊತ್ತಡದಿಂದ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದ ಹರಾಜುಗಾರ ಹಗ್ ಎಡ್ಮೀಡ್ಸ್ ಇದೀಗ ಮತ್ತೆ ಪೋಡಿಯಂಗೆ ಆಗಮಿಸಿದ್ದಾರೆ. ಹಗ್ ಎಡ್ಮೀಡ್ಸ್ ಅನುಪಸ್ಥಿತಿಯಲ್ಲಿ ಮೆಗಾ ಹರಾಜನ್ನು ಸುಸೂತ್ರವಾಗಿ ನಡೆಸಿಕೊಟ್ಟ ವೀಕ್ಷಕ ವರದಿಗಾರ ಚಾರು ಶರ್ಮಾಗೆ ಎಲ್ಲಾ ಫ್ರಾಂಚೈಸಿಗಳ ಸಿಬ್ಬಂದಿಗಳು ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

Feb 13, 2022, 8:39 pm IST

ರೋಹನ್ ರಾಣಾ ಕೂಡ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:39 pm IST

ಕಿಝರ್ ದಫೇದಾರ್ ಈ ಬಾರಿಯೂ ಕೂಡ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:39 pm IST

ಡ್ಯುನ್ ಜಾನ್ಸೆನ್ ಮತ್ತೊಮ್ಮೆ ಹರಾಜಾಗದೆ ಹೊರಗುಳಿದಿದ್ದಾರೆ

Feb 13, 2022, 8:38 pm IST

ಶುಭಂ ಘರ್ವಾಲ್ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 8:37 pm IST

ಅರ್ಜುನ್ ತೆಂಡೂಲ್ಕರ್ 30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಸೇರಿದ್ದಾರೆ

Feb 13, 2022, 8:35 pm IST

ಭರತ್ ಶರ್ಮಾ ಕೂಡ ಹರಾಜಾಗದೆ ವಿಫಲರಾಗಿದ್ದಾರೆ

Feb 13, 2022, 8:35 pm IST

ಚಿನ್ಟ್ಲಾ ರೆಡ್ಡಿ ಮತ್ತೊಮ್ಮೆ ಹರಾಜಾಗದೆ ಹೊರಬಿದ್ದಿದ್ದಾರೆ

Feb 13, 2022, 8:34 pm IST

ಕೆ ಭರತ್ ವರ್ಮಾ 20 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 8:33 pm IST

ಶುಭಂ ಶರ್ಮ ಕೂಡ ಹರಾಜಾಗದೇ ಹೊರಬಿದ್ದಿದ್ದಾರೆ

Feb 13, 2022, 8:33 pm IST

ಪ್ರತ್ಯುಷ್ ಸಿಂಗ್ ಹರಾಜಾಗುವಲ್ಲಿ ಈ ಬಾರಿಯೂ ಕೂಡ ವಿಫಲರಾಗಿದ್ದಾರೆ

Feb 13, 2022, 8:32 pm IST

ಹೃತಿಕ್ ಶೋಕಿನ್ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ

Feb 13, 2022, 8:31 pm IST

ಗೆರಾಲ್ಡ್ ಕೊಯ್ಟ್ಜಿ ಮತ್ತೊಮ್ಮೆ ಹರಾಜಾಗುವಲ್ಲಿ ವಿಫಲರಾಗಿದ್ದಾರೆ

Feb 13, 2022, 8:30 pm IST

ರಮೇಶ್ ಕುಮಾರ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 20 ಲಕ್ಷಕ್ಕೆ ಬಿಕರಿಯಾಗಿದ್ದಾರೆ

Feb 13, 2022, 8:30 pm IST

ಶಿವಾಂಕ್ ವಶಿಷ್ಟ್ ಕೂಡ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:29 pm IST

ಬ್ಲೆಸಿಂಗ್ ಮುಜರಬಾನಿ ಮತ್ತೆ ಹರಾಜಾಗದೆ ಉಳಿದಿದ್ದಾರೆ

Feb 13, 2022, 8:25 pm IST

ವರುಣ್ ಆ್ಯರನ್ 50 ಲಕ್ಷಕ್ಕೆ ಗುಜರಾತ್ ಟೈಟನ್ಸ್ ತೆಕ್ಕೆಗೆ ಬಿದ್ದಿದ್ದಾರೆ

Feb 13, 2022, 8:24 pm IST

ಕಾಲಿನ್ ಮುನ್ರೊ ಈ ಸುತ್ತಿನಲ್ಲಿಯೂ ಕೂಡ ಹರಾಜಾಗಲಿಲ್ಲ

Feb 13, 2022, 8:24 pm IST

ಕುಲ್ ದೀಪ್ ಯಾದವ್ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 8:23 pm IST

ಮಹಿಷಾ ಪತಿರಾಣಾ ಈ ಬಾರಿಯೂ ಕೂಡ ಹರಾಜಾಗಲಿಲ್ಲ

Feb 13, 2022, 8:23 pm IST

ಉತ್ಕರ್ಷ್ ಸಿಂಗ್ ಈ ಬಾರಿಯೂ ಕೂಡ ಹರಾಜಾಗಲಿಲ್ಲ

Feb 13, 2022, 8:23 pm IST

ರಾಹುಲ್ ಬುದ್ಧಿ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ

Feb 13, 2022, 8:20 pm IST

ಟಿಮ್ ಸೌದಿ 1.5 ಕೋಟಿಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 8:19 pm IST

ಕೇನ್ ರಿಚರ್ಡ್ಸನ್ ಈ ಬಾರಿಯೂ ಕೂಡ ಹರಾಜಾಗಲಿಲ್ಲ

Feb 13, 2022, 8:19 pm IST

ಗುರುಕೀರತ್ ಸಿಂಗ್ 50 ಲಕ್ಷಕ್ಕೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ

Feb 13, 2022, 8:18 pm IST

ಸ್ಕಾಟ್ ಕುಗ್ಗೆಲಿಜಿನ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:18 pm IST

ಅಖಿಲ್ ಹುಸೇನ್ ಮತ್ತೊಮ್ಮೆ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:17 pm IST

ಮೊಯ್ಸಿಸ್ ಹೆನ್ರಿಕ್ಸ್ ಹರಾಜಾಗದೆ ಉಳಿದಿದ್ದಾರೆ

Feb 13, 2022, 8:17 pm IST

ಭನುಕಾ ರಾಜಪಕ್ಸ 50 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 8:15 pm IST

ತೇಜಸ್ ಬರೋಕಾ 20 ಲಕ್ಷಕ್ಕೆ ರಾಜಸ್ತಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 8:15 pm IST

ಮಯಾಂಕ್ ಯಾದವ್ 20 ಲಕ್ಷಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ

Feb 13, 2022, 8:14 pm IST

ಧ್ರುವ್ ಜುರೆಲ್ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 8:12 pm IST

ಅಥರ್ವ ತೈದೆ 20 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 8:10 pm IST

ಬಿ ಸಾಯಿ ಸುದರ್ಶನ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:09 pm IST

ರಮಣದೀಪ್ ಸಿಂಗ್ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಸೇರಿದ್ದಾರೆ

Feb 13, 2022, 8:08 pm IST

ಸಮೀರ್ ರಿಜ್ವಿ ಕೂಡ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:08 pm IST

ಆ್ಯಂಡ್ರ್ಯೂ ಟೈ ಕೂಡ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:07 pm IST

ರೀಸ್ ಟಾಪ್ಲೆ ಮತ್ತೆ ಹರಾಜಾಗದೇ ಉಳಿದಿದ್ದಾರೆ

Feb 13, 2022, 8:07 pm IST

ಫಜಲ್ ಹಕ್ ಫರೂಕಿ 50 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಸೇರಿದ್ದಾರೆ

Feb 13, 2022, 8:05 pm IST

ಟಿಮ್ ಸೈಫರ್ಟ್ 50 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದಾರೆ

Feb 13, 2022, 8:03 pm IST

ಗ್ಲೆನ್ ಫಿಲಿಪ್ಸ್ 1.5 ಕೋಟಿಗೆ ಸನ್ ರೈಸರ್ಸ್ ಹೈದರಾ ಬಾದ್ ಪಾಲಾಗಿದ್ದಾರೆ

Feb 13, 2022, 8:02 pm IST

ಬೆನ್ ಮೆಕ್‌ಡರ್ಮೆಟ್ ಮತ್ತೆ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 8:01 pm IST

ಅಫ್ಘಾನಿಸ್ತಾನದ ರಹ್ಮನುಲ್ಲ ಗುರ್ಬಜ್ ಮತ್ತೆ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 8:00 pm IST

ಚರಿತ ಅಸಲಂಕ ಮತ್ತೆ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 7:59 pm IST

ಕರುಣ್ ನಾಯರ್ 1.4 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ

Feb 13, 2022, 7:57 pm IST

ಎವಿನ್ ಲೆವಿಸ್ 2 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ

Feb 13, 2022, 7:56 pm IST

ಅಲೆಕ್ಸ್ ಹೇಲ್ಸ್ 1.5 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 7:55 pm IST

ಮುಜ್ತಾಬಾ ಯೂಸುಫ್ ಈ ಬಾರಿಯೂ ಕೂಡ ಹರಾಜಾಗದೆ ಉಳಿದಿದ್ದಾರೆ

Feb 13, 2022, 7:54 pm IST

ಕುಲ್ ದೀಪ್ ಸೇನ್ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 7:53 pm IST

ಹರ್ನೂರ್ ಸಿಂಗ್ ಮತ್ತೆ ಹರಾಜಾಗದೇ ಉಳಿದಿದ್ದಾರೆ

Feb 13, 2022, 7:52 pm IST

ಕರ್ಣ್ ಶರ್ಮ 50 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ

Feb 13, 2022, 7:52 pm IST

ಕ್ಯೂಸ್ ಅಹ್ಮದ್ ಮತ್ತೆ ಹರಾಜಾಗದೇ ಉಳಿದಿದ್ದಾರೆ

Feb 13, 2022, 7:51 pm IST

ಲುಂಗಿ ಎನ್ ಗಿಡಿ 50 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ

Feb 13, 2022, 7:49 pm IST

ಶೆಲ್ಡಾನ್ ಕಾಟ್ರೆಲ್ ಕೂಡ ಹರಾಜಾಗದೇ ಉಳಿದಿದ್ದಾರೆ

Feb 13, 2022, 7:49 pm IST

ಜೇಮ್ಸ್ ನೀಶಮ್ ಈ ಬಾರಿಯೂ ಕೂಡ ಹರಾಜಾಗದೇ ಹೊರಬಿದ್ದಿದ್ದಾರೆ

Feb 13, 2022, 7:49 pm IST

ಕ್ರಿಸ್ ಜೋರ್ಡಾನ್ 3.6 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ

Feb 13, 2022, 7:48 pm IST

ವಿಷ್ಣು ವಿನೋದ್ 50 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದಾರೆ

Feb 13, 2022, 7:47 pm IST

ಎನ್ ಜಗದೀಶನ್ 20 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 7:46 pm IST

ಅನ್ಮೋಲ್ ಪ್ರೀತ್ ಸಿಂಗ್ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ

Feb 13, 2022, 7:44 pm IST

ಸಿ ಹರಿ ನಿಶಾಂತ್ ತನ್ನ ಮೂಲ ಬೆಲೆ 20 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 7:43 pm IST

ಭಾರತದ ವೇಗಿ ಉಮೇಶ್ ಯಾದವ್ ಅನ್ ಸೋಲ್ಡ್ ಔಟ್ ಆಗಿದ್ದಾರೆ

Feb 13, 2022, 7:42 pm IST

ಮ್ಯಾಥ್ಯೂ ವೇಡ್ 2.40 ಕೋಟಿಗೆ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದಾರೆ

Feb 13, 2022, 7:40 pm IST

ವೃದ್ಧಿಮಾನ್ ಸಹಾ 1.90 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ

Feb 13, 2022, 7:38 pm IST

ಇಂಗ್ಲೆಂಡ್ ಮೂಲದ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ ಸ್ಯಾಮ್ ಬಿಲ್ಲಿಂಗ್ಸ್ 2 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 7:37 pm IST

ಮೊದಲನೇ ಸುತ್ತಿನಲ್ಲಿ ಹರಾಜಾಗದೇ ಉಳಿದಿದ್ದ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಈ ಬಾರಿಯೂ ಕೂಡ ಬಿಕರಿಯಾಗದೇ ಹರಾಜಿನಿಂದ ಹೊರಬಿದ್ದಿದ್ದಾರೆ

Feb 13, 2022, 7:37 pm IST

ಇಂಗ್ಲೆಂಡ್ ಮೂಲದ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ ಸ್ಯಾಮ್ ಬಿಲ್ಲಿಂಗ್ಸ್ 2 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 7:32 pm IST

ಮೊದಲನೇ ದಿನ ಹರಾಜಾಗದೇ ಉಳಿದಿದ್ದ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 3 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ

Feb 13, 2022, 7:30 pm IST

ಬಿಕರಿಯಾಗದೇ ಉಳಿದಿದ್ದ ಆಟಗಾರರ ಮರುಹರಾಜು ಆರಂಭ

Feb 13, 2022, 6:27 pm IST

ಅರುಣಾಯ್ ಸಿಂಗ್ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

Feb 13, 2022, 6:26 pm IST

ಅಶುತೋಷ್ ಶರ್ಮ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 6:25 pm IST

ಅಶೋಕ್ ಶರ್ಮಾ 55 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 6:25 pm IST

ಅನ್ಷ್ ಪಟೇಲ್ 20 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 6:25 pm IST

ಮಹಮ್ಮದ್ ಹರ್ಷದ್ ಖಾನ್ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ

Feb 13, 2022, 6:24 pm IST

ಲಲಿತ್ ಯಾದವ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 6:23 pm IST

ಸೌರವ್ ದುಬೆ 20 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ

Feb 13, 2022, 6:22 pm IST

ಬಾಲ್ ತೇಜ್ ದಂಡ 20 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 6:20 pm IST

ಕರಣ್ ಶರ್ಮಾ 20 ಲಕ್ಷಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ

Feb 13, 2022, 6:19 pm IST

ಅಮಿತ್ ಅಲಿ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 6:19 pm IST

ಕೈಲ್ ಮೇಯರ್ಸ್ 50 ಲಕ್ಷಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ

Feb 13, 2022, 6:17 pm IST

ಶಶಾಂಕ್ ಸಿಂಗ್ 20 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ

Feb 13, 2022, 6:17 pm IST

ಹೃತಿಕ್ ಶೋಕಿನ್ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 6:16 pm IST

ನಿನಾದ್ ರಾತ್ವಾ ಅನ್ ಸೋಲ್ಡ್ ಆಗಿದ್ದಾರೆ

Feb 13, 2022, 6:16 pm IST

ವೃತ್ತಿಕ್ ಚಟರ್ಜಿ 20 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

Feb 13, 2022, 6:13 pm IST

ಪ್ರಥಮ್ ಸಿಂಗ್ 20 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 6:12 pm IST

ಮುಕೇಶ್ ಕುಮಾರ್ ಸಿಂಗ್ ಕೂಡ ಹರಾಜಾಗದೆ ಉಳಿದಿದ್ದಾರೆ

Feb 13, 2022, 6:12 pm IST

ಕೌಶಾಲ್ ತಾಂಬೆ ಹರಾಜಾಗದೆ ಉಳಿದಿದ್ದಾರೆ

Feb 13, 2022, 6:12 pm IST

ಅಭಿಜಿತ್ ತೋಮರ್ 40 ಲಕ್ಷಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 6:09 pm IST

ಮೈಸೂರಿನ ರವಿಕುಮಾರ್ ಸಮರ್ಥ್ 20 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ

Feb 13, 2022, 6:08 pm IST

ಬ್ಲೆಸಿಂಗ್ ಮುಜರಬಾನಿ ಬಿಕರಿಯಾಗದೇ ಉಳಿದಿದ್ದಾರೆ

Feb 13, 2022, 6:08 pm IST

ಡೇವಿಡ್ ವಿಲ್ಲೆ ಹರಾಜಾಗದೇ ಉಳಿದಿದ್ದಾರೆ

Feb 13, 2022, 6:06 pm IST

ಶ್ರೀಲಂಕಾದ ಚಮಿಕಾ ಕರುಣರತ್ನೆ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ

Feb 13, 2022, 6:05 pm IST

ಭಾರತೀಯ ಕ್ರಿಕೆಟಿಗ ಸುಶಾಂತ್ ಮಿಶ್ರಾ ಹರಾಜಾಗದೆ ಉಳಿದಿದ್ದಾರೆ

Feb 13, 2022, 6:05 pm IST

ಡೇವಿಡ್ ವೈಸ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 6:04 pm IST

ಗುಜರಾತ್ ಆಲ್ ರೌಂಡರ್ ಅತೀತ್ ಶೇಟ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 6:03 pm IST

ಭಾರತೀಯ ಕ್ರಿಕೆಟಿಗ ಧೃವ್ ಪಟೇಲ್ ಬಿಕರಿಯಾಗದೆ ಉಳಿದಿದ್ದಾರೆ

Feb 13, 2022, 6:02 pm IST

ಭಾರತೀಯ ಕ್ರಿಕೆಟಿಗ ಶಾಮ್ಸ್ ಮುಲಾನಿ ಕೂಡ ಬಿಕರಿಯಾಗದೇ ಉಳಿದಿದ್ದಾರೆ

Feb 13, 2022, 6:01 pm IST

ಸ್ಪಿನ್ನರ್ ಸೌರಭ್ ಕುಮಾರ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 6:00 pm IST

ಹೇಡನ್ ಕೇರ್ ಬಿಕರಿಯಾಗದೇ ಉಳಿದಿದ್ದಾರೆ

Feb 13, 2022, 5:59 pm IST

ಇಂಗ್ಲೆಂಡ್ ವೇಗಿ ಬೆನ್ನಿ ಹೊವೆಲ್ ಬಿಕರಿಯಾಗದೇ ಉಳಿದಿದ್ದಾರೆ

Feb 13, 2022, 5:58 pm IST

ಕನ್ನಡಿಗ ಅನೀಶ್ವರ್ ಗೌತಮ್ 20 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ

Feb 13, 2022, 5:57 pm IST

ಆಯುಷ್ ಬಡೋನಿ 20 ಲಕ್ಷಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ್ದಾರೆ

Feb 13, 2022, 5:56 pm IST

ಇಂಗ್ಲೆಂಡ್ ಮೂಲದ ಲೌರೀ ಇವನ್ಸ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 5:54 pm IST

ಆಂಧ್ರಪ್ರದೇಶ ಮೂಲದ ಕ್ರಿಕೆಟಿಗ ರಾಹುಲ್ ಬುದ್ದಿ ಬಿಕರಿಯಾಗದೇ ಉಳಿದಿದ್ದಾರೆ

Feb 13, 2022, 5:51 pm IST

ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಹರಾಜಾಗದೇ ಉಳಿದಿದ್ದಾರೆ

Feb 13, 2022, 5:51 pm IST

ಆಸ್ಟ್ರೇಲಿಯಾದ ಆಟಗಾರ ರಿಲೆ ಮೆರೆಡಿತ್ 1 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ

Feb 13, 2022, 5:48 pm IST

ಮಹಾರಾಷ್ಟ್ರ ಮೂಲದ ಕ್ರಿಕೆಟಿಗ ಧವಲ್ ಕುಲಕರ್ಣಿ ಬಿಕರಿಯಾಗದೆ ಉಳಿದಿದ್ದಾರೆ

Feb 13, 2022, 5:46 pm IST

2.40 ಕೋಟಿಗೆ ಗುಜರಾತ್‌ ಟೈಟನ್ಸ್‌ಗೆ ಹರಾಜಾದ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಅಲ್ಜಾರಿ ಜೋಸೆಫ್

Feb 13, 2022, 5:42 pm IST

ಆಸ್ಟ್ರೇಲಿಯಾದ ವೇಗದ ಬೌಲರ್ ಸೇನ್ ಅಬೋಟ್ 2.40 ಕೋಟಿಗೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ ಹರಾಜು

Feb 13, 2022, 5:36 pm IST

ಆಲ್‌ರೌಂಡರ್ ಪವನ್ ನೇಗಿ ಅನ್‌ಸೋಲ್ಡ್ ಆಗಿ ಉಳಿದಿದ್ದಾರೆ

Feb 13, 2022, 5:35 pm IST

ರೋಸ್ಟನ್ ಚೇಸ್, ಬೆನ್ ಕಟ್ಟಿಂಗ್ ಅನ್‌ಸೋಲ್ಡ್‌

Feb 13, 2022, 5:34 pm IST

ಶ್ರೀಲಂಕಾದ ಭಾನುಕ ರಾಜಪಕ್ಸ ಅನ್‌ಸೋಲ್ಡ್‌

Feb 13, 2022, 5:34 pm IST

ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್‌ ಅನ್‌ಸೋಲ್ಡ್‌

Feb 13, 2022, 5:21 pm IST

ಅನ್‌ಕ್ಯಾಪ್ಡ್‌ ಮಿಧುನ್ ಸುಧೇಶನ್ ಅನ್‌ಸೋಲ್ಡ್‌

Feb 13, 2022, 5:21 pm IST

ಪ್ರಶಾಂತ್ ಸೋಲಂಕಿ 1.20 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹರಾಜು

Feb 13, 2022, 5:17 pm IST

ಮಯಾಂಕ್ ಯಾದವ್, ತೇಜಸ್ ಬರೂಕ, ಯುವರಾಜ್ ಚುಡಾಸಮ ಅನ್‌ಸೋಲ್ಡ್‌

Feb 13, 2022, 5:16 pm IST

ಚಾಮ ಮಿಲಿಂದ್ 25 ಲಕ್ಷ ರೂಪಾಯಿ: ಆರ್‌ಸಿಬಿಗೆ ಹರಾಜು

Feb 13, 2022, 5:14 pm IST

ಮೊಹ್ಸಿನ್ ಖಾನ್ 20 ಲಕ್ಷ ರೂಪಾಯಿಗೆ ಲಕ್ನೋ ತಂಡಕ್ಕೆ ಹರಾಜು

Feb 13, 2022, 5:13 pm IST

ಆಸ್ಟ್ರೇಲಿಯದ ಬೆನ್ ದ್ವಾರ್ಶುಯಿಸ್, ಪಂಕಜ್ ಜಸ್ವಾಲ್ ಅನ್‌ಸೋಲ್ಡ್‌

Feb 13, 2022, 5:12 pm IST

ರಶಿಕ್ ಧಾರ್ 20 ಲಕ್ಷ ರೂಪಾಯಿ: ಕೆಕೆಆರ್

Feb 13, 2022, 5:12 pm IST

ಮುಕೇಶ್ ಚೌಧರಿ 20 ಲಕ್ಷ ರೂಪಾಯಿ: ಚೆನ್ನೈ ಸೂಪರ್ ಕಿಂಗ್ಸ್‌

Feb 13, 2022, 5:10 pm IST

2 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ ಪಾಲಾದ ಅನ್‌ಕ್ಯಾಪ್ಡ್‌ ಬೌಲರ್ ವೈಭವ್ ಅರೋರ

Feb 13, 2022, 5:07 pm IST

ಅನ್‌ಸೋಲ್ಡ್‌ ಆದವರು: ರಮಣದೀಪ್ ಸಿಂಗ್, ಬಿ ಸಾಯಿ ಸುದರ್ಶನ್, ಅಥರ್ವ ಟೈಡೆ, ಪ್ರಶಾಂತ್ ಚೋಪ್ರಾ, ವಿಕೆಟ್ ಕೀಪರ್ ಧ್ರುವ್ ಜುರೆಲ್, ಆರ್ಯನ್ ಜುಯಲ್

Feb 13, 2022, 5:06 pm IST

ಸುಯಾಶ್ ಪ್ರಭುದೇಸಾಯಿ 30 ಲಕ್ಷ ರೂಪಾಯಿ: ಆರ್‌ಸಿಬಿ

Feb 13, 2022, 5:06 pm IST

ಪ್ರೇರಕ್ ಮಂಕಡ್ 20 ಲಕ್ಷ ರೂಪಾಯಿ: ಪಂಜಾಬ್‌ ಕಿಂಗ್ಸ್‌

Feb 13, 2022, 5:04 pm IST

ಪ್ರವೀಣ್ ದುಬೆ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹರಾಜು

Feb 13, 2022, 4:56 pm IST

ಸಿಂಗಾಪುರದ ಕ್ರಿಕೆಟಿಗ, ಆಲ್‌ರೌಂಡರ್ ಟಿವ್ ಡೇವಿಡ್‌ 8.25 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್‌ಗೆ ಹರಾಜು. ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಪರ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟಿಮ್ ಡೇವಿಡ್

Feb 13, 2022, 4:50 pm IST

ಅನ್‌ಸೋಲ್ಡ್‌ ಆದ ಯುವ ಆಟಗಾರರು : ಬ್ಯಾಟ್ಸ್‌ಮನ್ ತನ್ಮಯ್ ಅಗರ್ವಾಲ್, ಇಂಗ್ಲೆಂಡ್‌ನ ಟಾಮ್ ಕೊಹ್ಲರ್-ಕಾಡ್ಮೋರ್ , ಸಮೀರ್ ರಿಜ್ವಿ , ಅಪೂರ್ವ ವಾಂಖಡೆ, ಅಥರ್ವ ಅಂಕೋಲೇಕರ್

Feb 13, 2022, 4:48 pm IST

ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಸುಭ್ರಾಂಶು ಸೇನಾಪತಿ 20 ಲಕ್ಷಕ್ಕೆ ಹರಾಜು

Feb 13, 2022, 4:45 pm IST

ಆ್ಯಡಂ ಮಿಲ್ನೆ 1.90 ಕೋಟಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಹರಾಜು

Feb 13, 2022, 4:44 pm IST

ರೀಸ್ ಟೋಪ್ಲಿ, ಆಂಡ್ರ್ಯೂ ಟೈ, ವೇಗಿ ಸಂದೀಪ್ ವಾರಿಯರ್ ಅನ್‌ಸೋಲ್ಡ್‌

Feb 13, 2022, 4:44 pm IST

ರೀಸ್ ಟೋಪ್ಲಿ, ಆಂಡ್ರ್ಯೂ ಟೈ, ವೇಗಿ ಸಂದೀಪ್ ವಾರಿಯರ್ ಅನ್‌ಸೋಲ್ಡ್‌

Feb 13, 2022, 4:40 pm IST

ಇಂಗ್ಲೆಂಡ್‌ನ ಬೌಲರ್ ಟೈಮಲ್‌ ಮಿಲ್ಸ್‌ 1.50 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್‌ಗೆ ಹರಾಜು

Feb 13, 2022, 4:39 pm IST

75 ಲಕ್ಷ ರೂಪಾಯಿಗೆ ರಾಜಸ್ತಾನ್ ರಾಯಲ್ಸ್‌ಗೆ ಹರಾಜಾದ ಓಬೆಡ್ ಮೆಕಾಯ್

Feb 13, 2022, 4:38 pm IST

ಜೇಸನ್ ಬೆಹ್ರೆನ್ಡಾರ್ಫ್ 75 ಲಕ್ಷ ರೂಪಾಯಿಗೆ ಆರ್‌ಸಿಬಿಗೆ ಹರಾಜು

Feb 13, 2022, 4:37 pm IST

ಗ್ಲೆನ್ ಫಿಲಿಪ್ಸ್, ಆಸ್ಟ್ರೇಲಿಯಾದ ಬೌಲರ್ ನಥಾನ್ ಎಲ್ಲಿಸ್, ಅಫ್ಘಾನಿಸ್ತಾನದ ಫಜಲಕ್ ಫರೂಕಿ, ಭಾರತದ ಸಿದ್ಧಾರ್ಥ್‌ ಕೌಲ್‌ ಅನ್‌ಸೋಲ್ಡ್‌

Feb 13, 2022, 4:32 pm IST

ಗಯಾನೀಸ್ ಕ್ರಿಕೆಟಿಗ ರೊಮಾರಿಯೋ ಶೆಫರ್ಡ್‌ 7.75 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ ಹರಾಜು

Feb 13, 2022, 4:24 pm IST

ನ್ಯೂಜಿಲೆಂಡ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್‌ 1.90 ಕೋಟಿ ಗೆ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಹರಾಜು

Feb 13, 2022, 4:20 pm IST

ಆರ್‌ಸಿಬಿಗೆ 1 ಕೋಟಿ ರೂಪಾಯಿಗೆ ಹರಾಜಾದ ವಿಂಡಿಸ್‌ನ ಶೆರ್ಫೇನ್ ರುದರ್ಫೋರ್ಡ್

Feb 13, 2022, 4:19 pm IST

ಡ್ವೈನ್ ಪ್ರಿಟೋರಿಯಸ್ 50 ಲಕ್ಷ ರೂಪಾಯಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಹರಾಜು

Feb 13, 2022, 4:17 pm IST

ಪಂಜಾಬ್ ಕಿಂಗ್ಸ್‌ಗೆ 55 ಲಕ್ಷ ರೂಪಾಯಿಗೆ ಹರಾಜಾದ ರಿಷಿ ಧವನ್

Feb 13, 2022, 4:14 pm IST

ಇಂಗ್ಲೆಂಡ್‌ನ ಖ್ಯಾತ ಬೌಲರ್ ಜೊಫ್ರಾ ಆರ್ಚರ್‌ 8 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್‌ಗೆ ಹರಾಜು

Feb 13, 2022, 4:08 pm IST

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡರ್‌ ಡುಸ್ಸೆನ್ ಅನ್‌ಸೋಲ್ಡ್‌

Feb 13, 2022, 4:07 pm IST

ಜಮೈಕಾದ ಆಲ್‌ರೌಂಡರ್ ರೋವ್ಮನ್ ಪೊವೆಲ್ 2.80 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹರಾಜು

Feb 13, 2022, 4:04 pm IST

ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅನ್‌ಸೋಲ್ಡ್‌

Feb 13, 2022, 4:03 pm IST

ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎವಿನ್ ಲಿವಿಸ್ ಅನ್‌ಸೋಲ್ಡ್‌

Feb 13, 2022, 4:03 pm IST

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್‌ ಅನ್‌ಸೋಲ್ಡ್

Feb 13, 2022, 4:02 pm IST

ಡೆವಾನ್ ಕಾನ್ವೆ ಮೂಲ ಬೆಲೆ 1 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹರಾಜು

Feb 13, 2022, 4:01 pm IST

ಯುವ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಅಲೆನ್ 80 ಲಕ್ಷ ರೂಪಾಯಿಗೆ ಆರ್‌ಸಿಬಿಗೆ ಹರಾಜು

Feb 13, 2022, 3:46 pm IST

ಮುಜ್ತಾಬಾ ಯೂಸುಫ್ ಅನ್‌ಸೋಲ್ಡ್ ಆಗಿದ್ದಾರೆ

Feb 13, 2022, 3:45 pm IST

ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ಲಕ್ಷ ರೂಪಾಯಿಗೆ ಹರಾಜಾದ ಸಿಮರ್‌ಜೀತ್ ಸಿಂಗ್

Feb 13, 2022, 3:43 pm IST

20 ಲಕ್ಷ ಮೂಲ ಬೆಲೆಯ ಯಶ್‌ ದಯಾಲ್ 3.20 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್‌ಗೆ ಹರಾಜು

Feb 13, 2022, 3:41 pm IST

ಯುವ ಬೌಲರ್‌ಗಳಾದ ಯಶ್ ಠಾಕೂರ್ ಮತ್ತು ಅರ್ಜಾನ್ ನಾಗ್ವಾಸ್ವಾಲ್ಲಾ ಅನ್‌ಸೋಲ್ಡ್‌

Feb 13, 2022, 3:39 pm IST

ಅನ್‌ಕ್ಯಾಪ್ಡ್ ವೇಗದ ಬೌಲರ್‌ ವಾಸು ವತ್ಸ್‌ ಅನ್‌ಸೋಲ್ಡ್‌

Feb 13, 2022, 3:36 pm IST

1.50 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದ ಅಂಡರ್ 19 ಆಟಗಾರ ರಾಜ್ಯವರ್ಧನ್ ಹಂಗರ್ಗೇಕರ್

Feb 13, 2022, 3:32 pm IST

ಅಂಡರ್ 19 ಆಟಗಾರ ರಾಜ್ ಅಂಗದ್ ಬಾವಾ 2 ಕೋಟಿ ರೂಪಾಯಿಗೆ ಪಂಜಾಬ್‌ ಕಿಂಗ್ಸ್‌ಗೆ ಹರಾಜು

Feb 13, 2022, 3:27 pm IST

ಸಂಜಯ್ ಯಾದವ್ 50 ಲಕ್ಷ ರೂಪಾಯಿಗೆ ಮುಂಬೈ ಇಂಡಿಯನ್ಸ್‌ಗೆ ಹರಾಜು

Feb 13, 2022, 3:25 pm IST

20 ಲಕ್ಷ ರೂಪಾಯಿಗೆ ಕೆಕೆಆರ್‌ ತಂಡಕ್ಕೆ ಹರಾಜಾದ ಅಂಕುಲ್ ರಾಯ್

Feb 13, 2022, 3:24 pm IST

ಮಹಿಪಾಲ್ ಲೋಮರ್ 95 ಲಕ್ಷ ರೂಪಾಯಿಗೆ ಆರ್‌ಸಿಬಿಗೆ ಹರಾಜು

Feb 13, 2022, 3:19 pm IST

ಮುಂಬೈ ಇಂಡಿಯನ್ಸ್ ಪಾಲಾದ ಯುವ ಆಲ್‌ರೌಂಡರ್ ಎನ್. ತಿಲಕ್ ವರ್ಮಾ 1.70 ಕೋಟಿ ರೂಪಾಯಿಗೆ ಹರಾಜು

Feb 13, 2022, 3:14 pm IST

ಭಾರತ ಅಂಡರ್-19 ವಿಶ್ವಕಪ್ ಗೆಲುವಿನ ತಂಡದ ನಾಯಕ ಯಶ್ ಧುಲ್ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹರಾಜು

Feb 13, 2022, 3:12 pm IST

20 ಲಕ್ಷ ರೂಪಾಯಿಗೆ ಆಲ್‌ರೌಂಡರ್ ರಿಪಲ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹರಾಜು

Feb 13, 2022, 3:10 pm IST

ಅನ್‌ಕ್ಯಾಪ್ಡ್‌ ಆಲ್‌ರೌಂಡರ್ ಲಲಿತ್ ಯಾದವ್ 65 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹರಾಜು

Feb 13, 2022, 2:24 pm IST

ಭೋಜನ ವಿರಾಮದ ನಂತರ ಉಳಿದ ಆಟಗಾರರ ಹರಾಜು ಪ್ರಕ್ರಿಯೆ ಮುಂದುವರಿಯಲಿದೆ

Feb 13, 2022, 2:18 pm IST

ಮನನ್ ವೋಹ್ರಾ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ. 20 ಲಕ್ಷ ಮೂಲಬೆಲೆಗೆ ಫ್ರಾಂಚೈಸಿ ಖರೀದಿಸಲು ಯಶಸ್ವಿಯಾಗಿದೆ.

Feb 13, 2022, 2:17 pm IST

ಮಧ್ಯಮ ಕ್ರಮಾಂಕದ ಎಡಗೈ ದಾಂಡಿಗ ರಿಂಕು ಸಿಂಗ್ ಅವರನ್ನು ಕೆಕೆಆರ್ 55 ಲಕ್ಷ ರೂಪಾಯಿ ನೀಡಿ ಖರೀದಿಸಿದೆ

Feb 13, 2022, 2:11 pm IST

1 ಕೋಟಿ ರೂಪಾಯಿ ಮೂಲಬೆಲೆ ಹೊಂದಿರುವ ಪಿಯೂಷ್ ಚಾವ್ಲಾ ಕೂಡ ಯಾವುದೇ ತಂಡಕ್ಕೆ ಹರಾಜಾಗದೆ ಉಳಿದುಕೊಂಡಿದ್ದಾರೆ.

Feb 13, 2022, 2:10 pm IST

ಕರ್ಣ್ ಶರ್ಮಾ ಹಾಗೂ ಇಶ್ ಸೋಧಿ ಕೂಡ ಹರಾಜಾಗದೆ ಉಳಿದುಕೊಂಡವರ ಪಟ್ಟಿಗೆ ಸೇರಿಕೊಂಡಿದ್ದಾರೆ.

Feb 13, 2022, 2:09 pm IST

ಶ್ರೀಲಂಕಾದ ಆಟಗಾರ ಮಹೀಶ್ ತೀಕ್ಷಣ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 70 ಲಕ್ಷ ರೂಪಾಯಿ ಮೊತ್ತಕ್ಕೆ ಹರಾಜಾಗಿದ್ದಾರೆ

Feb 13, 2022, 2:08 pm IST

ಶಹಬಾಜ್ ನದೀಮ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಖರೀದಿಸಿದೆ

Feb 13, 2022, 2:07 pm IST

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಟಬ್ರೈಜ್ ಶಂಶಿ ಮೊದಲ ಸುತ್ತಿನ ಹರಾಜಿನಲ್ಲಿ ಹರಾಜಾಗದೆ ಉಳಿದುಕೊಂಡಿದ್ದಾರೆ

Feb 13, 2022, 2:06 pm IST

ಮಯಾಂಕ್ ಮಾರ್ಖಂಡೆ ಕೂಡ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. 65 ಲಕ್ಷ ಮೊತ್ತಕ್ಕೆ ಮಯಾಂಕ್ ಮಾರ್ಕಾಂಡೆ ಹರಾಜಾಗಿದ್ದಾರೆ.

Feb 13, 2022, 2:05 pm IST

ವೇಗದ ಬೌಲರ್ ಜಯದೇವ್ ಉನಾದ್ಕಟ್ 1.30 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಈ ಮೂಲಕ ಮತ್ತೋರ್ವ ವೇಗಿಯನ್ನು ಎಂಐ ವಶಕ್ಕೆ ಪಡೆದುಕೊಂಡಿದೆ

Feb 13, 2022, 1:56 pm IST

ನವದೀಪ್ ಸೈನಿ

Feb 13, 2022, 1:54 pm IST

ವೇಗಿ ನವದೀಪ್ ಸೈನಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ 2.60 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ.

Feb 13, 2022, 1:50 pm IST

ಚೇತನ್ ಸಕಾರಿಯಾ

Feb 13, 2022, 1:48 pm IST

ಪಂಜಾಬ್ ಕಿಂಗ್ಸ್ ತಂಡ ವೇಗಿ ಸಂದೀಪ್ ಶರ್ಮಾ ಅವರನ್ನು ಮೂಲಬೆಲೆ 50 ಲಕ್ಷಕ್ಕೆ ಖರೀದಿಸಿದ್ದಾರೆ.

Feb 13, 2022, 1:47 pm IST

ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೇತನ್ ಸಹಾರಿಯಾ ಅವರನ್ನು 4.20 ಕೋಟಿ ನೀಡಿ ಖರೀದಿಸಿದೆ.

Feb 13, 2022, 1:39 pm IST

ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಹರಾಜಾಗದೆ ಉಳಿದುಕೊಂಡಿದ್ದಾರೆ

Feb 13, 2022, 1:38 pm IST

ಶ್ರೀಲಂಕಾ ವೇಗಿ ದುಷ್ಮಂತ ಚಮೀರಾ 2 ಕೋಟಿ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.

Feb 13, 2022, 1:33 pm IST

ವೇಗದ ಬೌಲರ್ ಖಲೀಲ್ ಅಹಮದ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 5.25 ಕೋಟಿಗೆ ಖರೀದಿಸಿದೆ.

Feb 13, 2022, 1:26 pm IST

ಅನುಭವಿ ಬೌಲರ್ ಇಶಾಂತ್ ಶರ್ಮಾ ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದುಕೊಂಡಿದ್ದಾರೆ. 1.5 ಕೋಟಿ ಮೂಲಬೆಲೆ ಹೊಂದಿದ್ದಾರೆ ಶರ್ಮಾ.

Feb 13, 2022, 1:20 pm IST

ಕೆ ಗೌತಮ್

Feb 13, 2022, 1:17 pm IST

ಕಳೆದ ಆವೃತ್ತಿಯಲ್ಲಿ 9.25 ಕೋಟಿಗೆ ಹರಾಜಾಗಿದ್ದ ಕೆ. ಗೌತಮ್ ಈ ಬಾರಿ 90 ಲಕ್ಷಕ್ಕೆ ಲಕ್ನೋ ಸೂಪರ್‌ಜೈಂಟ್ಸ್ ಪಾಲಾಗಿದ್ದಾರೆ.

Feb 13, 2022, 1:12 pm IST

ಶಿವಂ ದುಬೆ

Feb 13, 2022, 1:11 pm IST

ಆಲ್‌ರೌಂಡರ್ ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. 4 ಕೋಟಿ ಮೊತ್ತಕ್ಕೆ ದುಬೆ ಹರಾಜಾಗಿದ್ದಾರೆ

Feb 13, 2022, 1:03 pm IST

ಮ್ಯಾಕ್ರೋ ಜಾನ್ಸನ್

Feb 13, 2022, 1:02 pm IST

ದಕ್ಷಿಣ ಆಫ್ರಿಕಾದ ಯುವ ವೇಗಿ ಮ್ಯಾಕ್ರೋ ಜಾನ್ಸನ್ 4.20 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ.

Feb 13, 2022, 12:59 pm IST

ಓಡಿಯನ್ ಸ್ಮಿತ್

Feb 13, 2022, 12:57 pm IST

ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಓಡಿಯನ್ ಸ್ಮಿತ್ ಉತ್ತಮ ಮೊತ್ತವನ್ನು ಪಡೆದುಕೊಂಡಿದ್ದಾರೆ. 6 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ ಓಡಿಯನ್ ಸ್ಮಿತ್.

Feb 13, 2022, 12:50 pm IST

ವಿಜಯ್ ಶಂಕರ್

Feb 13, 2022, 12:49 pm IST

ವಿಜಯ್ ಶಂಕರ್ ಅವರನ್ನು ಜುಜರಾತ್ ಟೈಟಾನ್ಸ್ ತಂಡ 1.40 ಕೋಟಿಗೆ ತಂಡಕ್ಕೆ ಸೇರ್ಪಡೆಗೊಳಿಸಿದೆ

Feb 13, 2022, 12:44 pm IST

ಲಿಯಾನ್ ಲಿವಿಂಗ್‌ಸ್ಟನ್ ಎರಡನೇ ದಿನದ ಅತಿ ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿದ್ದಾರೆ. 11.50 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.

Feb 13, 2022, 12:39 pm IST

ಆಲ್‌ರೌಂಡರ್ ಡೊಮಿನಿಕ್ ಡ್ರೇಕ್ಸ್‌ ಸನ್‌ರೈಸರ್ಸ್ ಹೈದ್ರಾಬಾದ್ ತಂಡಕ್ಕೆ 1.10 ಕೋಟಿಗೆ ಹರಾಜು

Feb 13, 2022, 12:34 pm IST

ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್‌ 11.50 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ಗೆ ಹರಾಜು

Feb 13, 2022, 12:26 pm IST

ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲೂ ನೆರವಾಗುವ ಲಿವಿಂಗ್‌ಸ್ಟೋನ್‌ಗಾಗಿ ಭಾರೀ ಬಿಡ್ಡಿಂಗ್. ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್‌ ನಡುವೆ ಸ್ಪರ್ಧೆ ಮುಂದುವರಿದಿದೆ.

Feb 13, 2022, 12:23 pm IST

ಲಿಯಾಮ್ ಲಿವಿಂಗ್‌ಸ್ಟೋನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಕೆಆರ್‌ ನಡುವೆ ತೀವ್ರ ಸ್ಪರ್ಧೆ

Feb 13, 2022, 12:21 pm IST

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಾ ಅನ್‌ಸೋಲ್ಡ್‌

Feb 13, 2022, 12:20 pm IST

ಆಸ್ಟ್ರೇಲಿಯಾದ ಲಿಮಿಟೆಡ್ ಓವರ್ ಕ್ರಿಕೆಟ್ ನಾಯಕ ಆ್ಯರೋನ್ ಫಿಂಚ್ ಅನ್‌ಸೋಲ್ಡ್‌

Feb 13, 2022, 12:19 pm IST

ಎಡಗೈ ಬ್ಯಾಟ್ಸ್‌ಮನ್ ಸೌರಬ್ ತಿವಾರಿ ಅನ್‌ಸೋಲ್ಡ್‌

Feb 13, 2022, 12:19 pm IST

ಇಂಗ್ಲೆಂಡ್ ಲಿಮಿಟೆಡ್ ಓವರ್ ಕ್ರಿಕೆಟ್ ನಾಯಕ ಇಯಾನ್ ಮಾರ್ಗನ್ ಅನ್‌ಸೋಲ್ಡ್‌

Feb 13, 2022, 12:17 pm IST

ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಪಂಜಾಬ್ ಮೂಲದ ಬ್ಯಾಟ್ಸ್‌ಮನ್ ಮಂದೀಪ್ ಸಿಂಗ್‌ 1.10 ಕೋಟಿ ರೂಪಾಯಿಗೆ ಹರಾಜು

Feb 13, 2022, 12:15 pm IST

ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಅನ್‌ಸೋಲ್ಡ್

Feb 13, 2022, 12:14 pm IST

ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 1 ಕೋಟಿ ರೂಪಾಯಿಗೆ ಕೆಕೆಆರ್‌ಗೆ ಹರಾಜು

Feb 13, 2022, 12:12 pm IST

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಏಡನ್ ಮಕ್ರಾಮ್‌ 2.60 ಕೋಟಿಗೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ ಹರಾಜು

Feb 13, 2022, 12:10 pm IST

ದಕ್ಷಿಣ ಆಫ್ರಿಕಾದ ಏಡನ್ ಮಕ್ರಾಮ್‌ಗಾಗಿ ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್‌ ನಡುವೆ ಸ್ಪರ್ಧೆ

Feb 13, 2022, 12:05 pm IST

ಐಪಿಎಲ್ 2ನೇ ದಿನದ ಹರಾಜು ಪ್ರಕ್ರಿಯೆ ಆರಂಭ, ಹರಾಜುದಾರ ಹ್ಯೂ ಎಡ್ಮೀಡ್ಸ್ ಅನುಪಸ್ಥಿತಿಯಲ್ಲಿ ನಿರೂಪಕ ಮತ್ತು ವೀಕ್ಷಕ ವಿವರಣೆಗಾರ ಚಾರು ಚರ್ಮಾ ಐಪಿಎಲ್ ಹರಾಜು ನಡೆಸಿಕೊಡಲಿದ್ದಾರೆ. ಹರಾಜುದಾರ ಹ್ಯೂ ಎಡ್ಮೀಡ್ಸ್ ನಿನ್ನೆ ವೇದಿಕೆಯಲ್ಲೇ ಕುಸಿದು ಬಿದ್ದಿದ್ದರು.

Feb 13, 2022, 9:19 am IST

ಎಲ್ಲಾ ಫ್ರಾಂಚೈಸಿಗಳು ಹೊಂದಿರುವ ಪರ್ಸ್ ಮೊತ್ತ: ಚೆನ್ನೈ ಸೂಪರ್ ಕಿಂಗ್ಸ್: 20.45 ಕೋಟಿ ಡೆಲ್ಲಿ ರಾಜಧಾನಿಗಳು: 16.50 ಕೋಟಿ ಗುಜರಾತ್ ಟೈಟಾನ್ಸ್: 18.85 ಕೋಟಿ ಕೋಲ್ಕತ್ತಾ ನೈಟ್ ರೈಡರ್ಸ್: 12.65 ಕೋಟಿ ಲಕ್ನೋ ಸೂಪರ್ ಜೈಂಟ್ಸ್: 6.90 ಕೋಟಿ ಮುಂಬೈ ಇಂಡಿಯನ್ಸ್: 27.85 ಕೋಟಿ ಪಂಜಾಬ್ ಕಿಂಗ್ಸ್: 28.65 ಕೋಟಿ ರಾಜಸ್ಥಾನ್ ರಾಯಲ್ಸ್: 12.15 ಕೋಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರು: 9.25 ಕೋಟಿ ಸನ್ ರೈಸರ್ಸ್ ಹೈದರಾಬಾದ್: 20.15 ಕೋಟಿ

Feb 13, 2022, 8:34 am IST

2ನೇ ದಿನದ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು ಹರಾಜಿನಲ್ಲಿರುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಬಲಿಷ್ಠಗೊಳಿಸಲು ಫ್ರಾಂಚೈಸಿಗಳು ಇಂದು ಕೂಡ ಪ್ರಯತ್ನ ಮುಂದುವರಿಸಲಿದೆ.

Feb 12, 2022, 9:44 pm IST

ಐಪಿಎಲ್ 2022 ಮೊದಲನೇ ದಿನದ ಹರಾಜು ಮುಕ್ತಾಯವಾಗಿದ್ದು ಎರಡನೇ ದಿನದ ಹರಾಜು ಪ್ರಕ್ರಿಯೆ ನಾಳೆ ( ಫೆಬ್ರವರಿ 13 ) ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ

Feb 12, 2022, 9:42 pm IST

ತಮಿಳುನಾಡು ಮೂಲದ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ 3 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ

Feb 12, 2022, 9:32 pm IST

ಕರ್ನಾಟಕ ಮೂಲದ ಬೌಲಿಂಗ್ ಆಲ್ರೌಂಡರ್ ಜಗದೀಶ ಸುಚಿತ್ 20 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ

Feb 12, 2022, 9:31 pm IST

ಕರ್ನಾಟಕ ಮೂಲದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ 75 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಸೇರಿದ್ದಾರೆ

Feb 12, 2022, 9:30 pm IST

ಕರ್ನಾಟಕ ಮೂಲದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ 75 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಸೇರಿದ್ದಾರೆ

Feb 12, 2022, 9:29 pm IST

ಕರ್ನಾಟಕ ಮೂಲದ ಲೆಗ್ ಬ್ರೇಕ್ ಬೌಲರ್ ಕೆಸಿ ಕಾರಿಯಪ್ಪ 30 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ

Feb 12, 2022, 9:28 pm IST

ತಮಿಳುನಾಡು ಮೂಲದ ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್ ಹರಾಜಾಗದೇ ಉಳಿದಿದ್ದಾರೆ

Feb 12, 2022, 9:27 pm IST

ತಮಿಳುನಾಡು ಮೂಲದ ಬಲಗೈ ಲೆಗ್ ಬ್ರೇಕ್ ಬೌಲರ್ ಮುರುಗನ್ ಅಶ್ವಿನ್ 1.6 ಕೋಟಿಗೆ ಮುಂಬೈ ಇಂಡಿಯನ್ಸ್ ಸೇರಿದ್ದಾರೆ

Feb 12, 2022, 9:24 pm IST

ಅನ್‌ಕ್ಯಾಪ್ಡ್ ಸ್ಪಿನ್ನರ್ ನೂರ್ ಅಹ್ಮದ್ 30 ಲಕ್ಷಕ್ಕೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ

Feb 12, 2022, 9:23 pm IST

ಬಲಗೈ ಮಧ್ಯಮ ವೇಗಿ ಅಂಕಿತ್ ಸಿಂಗ್ ರಜಪೂತ್ 50 ಲಕ್ಷಕ್ಕೆ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ

Feb 12, 2022, 9:22 pm IST

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸದಸ್ಯನಾಗಿದ್ದ ತುಷಾರ್ ದೇಶಪಾಂಡೆ 20 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದಾರೆ

Feb 12, 2022, 9:19 pm IST

ಕಳೆದ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಸದಸ್ಯನಾಗಿದ್ದ ಬೌಲರ್ ಇಶಾನ್ ಪೊರೆಲ್ 25 ಲಕ್ಷಕ್ಕೆ ಮತ್ತೆ ಪಂಜಾಬ್ ಕಿಂಗ್ಸ್ ಸೇರಿದ್ದಾರೆ

Feb 12, 2022, 9:15 pm IST

ವೇಗಿ ಅವೇಶ್ ಖಾನ್ ಬರೋಬ್ಬರಿ 10 ಕೋಟಿಗೆ ನೂತನ ಲಕ್ನೋ ತಂಡ ಸೇರಿದ್ದಾರೆ. ಈ ಮೂಲಕ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಅನ್‌ಕ್ಯಾಪ್ಡ್ ಪ್ಲೇಯರ್ ಎನಿಸಿಕೊಂಡಿದ್ದಾರೆ

Feb 12, 2022, 9:15 pm IST

ಕಳೆದ 4 ಐಪಿಎಲ್ ಆವೃತ್ತಿಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಸದಸ್ಯನಾಗಿರುವ ಕೆಎಂ ಆಸಿಫ್ 20 ಲಕ್ಷಕ್ಕೆ ಹರಾಜಾಗಿದ್ದು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದಾರೆ

Feb 12, 2022, 9:13 pm IST

ಕಳೆದ ಐಪಿಎಲ್ ದ್ವಿತೀಯಾರ್ಧದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರಿದ್ದ ಆಕಾಶ್ ದೀಪ್ 20 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದಾರೆ

Feb 12, 2022, 9:10 pm IST

ಕಳೆದೆರಡು ವರ್ಷ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಕಾರ್ತಿಕ್ ತ್ಯಾಗಿಯನ್ನು 4 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ

Feb 12, 2022, 9:09 pm IST

2018ರಿಂದ 2021ರವರೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಸದಸ್ಯನಾಗಿದ್ದ ಬಸಿಲ್ ತಂಪಿ 30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ

Feb 12, 2022, 9:07 pm IST

ಜಿತೇಶ್ ಶರ್ಮಾ 20 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

Feb 12, 2022, 9:05 pm IST

ಶೆಲ್ಡನ್ ಜಾಕ್ಸನ್ 60 ಲಕ್ಷಕ್ಕೆ ಹರಾಜಾಗಿದ್ದು ಮತ್ತೆ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೇರಿದ್ದಾರೆ

Feb 12, 2022, 9:04 pm IST

ಎನ್ ಜಗದೀಶನ್ ಹರಾಜಾಗದೇ ಉಳಿದಿದ್ದಾರೆ

Feb 12, 2022, 9:04 pm IST

ಕಳೆದ 3 ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸದಸ್ಯನಾಗಿದ್ದ ಪ್ರಭ್ ಸಿಮ್ರಾನ್ ಸಿಂಗ್ 60 ಲಕ್ಷಕ್ಕೆ ಮತ್ತೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

Feb 12, 2022, 9:01 pm IST

ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಉತ್ತರಾಖಂಡ್ ಮೂಲದ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ ಅನೂಜ್ ರಾವತ್ 3.4 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ

Feb 12, 2022, 8:49 pm IST

ಬರೋಡ ಪರ ರಣಜಿ ಟ್ರೋಫಿಯಲ್ಲಿ ಭಾಗವಹಿಸಿರುವ ಅನುಭವ ಹೊಂದಿರುವ ವಿಷ್ಣು ಸೋಲಂಕಿ ಹರಾಜಾಗದೇ ಉಳಿದಿದ್ದಾರೆ

Feb 12, 2022, 8:46 pm IST

ಕೇರಳ ಮೂಲದ ಕ್ರಿಕೆಟಿಗ ವಿಷ್ಣು ವಿನೋದ್ ಹರಾಜಾಗದೇ ಉಳಿದಿದ್ದಾರೆ

Feb 12, 2022, 8:45 pm IST

ಕೇರಳ ಮೂಲದ ಮೊಹಮ್ಮದ್ ಅಜರುದ್ದೀನ್ ಹರಾಜಾಗದೇ ಉಳಿದಿದ್ದಾರೆ

Feb 12, 2022, 8:43 pm IST

ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿಕೆಟ್ ಕೀಪರ್ ಆಗಿ ಮಿಂಚಿದ್ದ ಕೆಎಸ್ ಭರತ್ 2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ

Feb 12, 2022, 8:25 pm IST

ಕಳೆದೆರೆಡು ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಬೌಲಿಂಗ್ ಆಲ್ ರೌಂಡರ್ ಶಹಬಾಜ್ ಅಹ್ಮದ್ 2.4 ಕೋಟಿಗೆ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ್ದಾರೆ.

Feb 12, 2022, 8:20 pm IST

ಕಳೆದ 3 ಆವೃತ್ತಿಗಳಿಂದ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿರುವ ಹರ್‌ಪ್ರೀತ್ ಬ್ರಾರ್ 3.80 ಕೋಟಿಗೆ ಮತ್ತೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತೆಕ್ಕೆಗೆ ಬಿದ್ದಿದ್ದಾರೆ

Feb 12, 2022, 8:16 pm IST

2014ರಿಂದ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ರಾಹುಲ್ ತೆವಾಟಿಯಾರನ್ನು ನೂತನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ 9 ಕೋಟಿಗೆ ಖರೀದಿಸಿದೆ

Feb 12, 2022, 8:13 pm IST

2018ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ಕೋಲ್ಕತ್ತ ನೈಟ್ ರೈಡರ್ಸ್ ಸದಸ್ಯನಾಗಿದ್ದ ಕಮಲೇಶ್ ನಾಗರಕೋಟಿ 1.10 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ

Feb 12, 2022, 8:02 pm IST

2018ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ಕೋಲ್ಕತ್ತ ನೈಟ್ ರೈಡರ್ಸ್ ಸದಸ್ಯನಾಗಿರುವ ಶಿವಮ್ ಮಾವಿ 7.25 ಕೋಟಿಗೆ ಮತ್ತೆ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೇರಿದ್ದಾರೆ

Feb 12, 2022, 7:58 pm IST

9 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದ ಶಾರುಖ್ ಖಾನ್

Feb 12, 2022, 7:50 pm IST

ಪವರ್ ಹಿಟ್ಟರ್ ಶಾರುಖ್ ಖಾನ್ ಮೇಲೆ ವಿವಿಧ ಫ್ರಾಂಚೈಸಿಗಳ ಕಣ್ಣು

Feb 12, 2022, 7:45 pm IST

ಮಹಾರಾಷ್ಟ್ರ ಮೂಲದ ಯುವ ಕ್ರಿಕೆಟಿಗ ಸರ್ಫರಾಜ್ ಖಾನ್ 20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ

Feb 12, 2022, 7:44 pm IST

ಕಳೆದ 3 ಐಪಿಎಲ್ ಆವೃತ್ತಿಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸದಸ್ಯನಾಗಿದ್ದ ಅಭಿಷೇಕ್ ಶರ್ಮಾ 6.5 ಕೋಟಿಗೆ ಮತ್ತೆ ಸನ್ ರೈಸರ್ಸ್ ಹೈದರಾಬಾದ್ ಸೇರಿದ್ದಾರೆ

Feb 12, 2022, 7:39 pm IST

ಕಳೆದ 3 ಐಪಿಎಲ್ ಆವೃತ್ತಿಗಳಿಂದ ರಾಜಸ್ಥಾನ ರಾಯಲ್ಸ್ ಸದಸ್ಯನಾಗಿರುವ ಅಸ್ಸಾಂ ಮೂಲದ ರಿಯಾನ್ ಪರಾಗ್ ಈ ಬಾರಿ ಕೂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 3.8 ಕೋಟಿಗೆ ಸೇರ್ಪಡೆಯಾಗಿದ್ದಾರೆ

Feb 12, 2022, 7:34 pm IST

ತಮಿಳುನಾಡಿನ ಚೆಳಿಯನ್ ಹರಿ ನಿಶಾಂತ್ ಹರಾಜಾಗದೇ ಉಳಿದಿದ್ದಾರೆ

Feb 12, 2022, 7:27 pm IST

ಕಳೆದೆರೆಡು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ಸದಸ್ಯನಾಗಿದ್ದ ರಾಹುಲ್ ತ್ರಿಪಾಠಿ 8.5 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ

Feb 12, 2022, 7:22 pm IST

2019ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿದ್ದ ಅನ್ಮೋಲ್ ಪ್ರೀತ್ ಸಿಂಗ್ ಹರಾಜಾಗದೇ ಉಳಿದಿದ್ದಾರೆ

Feb 12, 2022, 7:20 pm IST

ಆಂಧ್ರಪ್ರದೇಶ ಮೂಲದ ಅಶ್ವಿನ್ ಹೆಬ್ಬಾರ್ 20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಬಿದ್ದಿದ್ದಾರೆ

Feb 12, 2022, 7:17 pm IST

ಬೇಬಿ ಎಬಿಡಿ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಡಿವಾಲ್ಡ್ ಬ್ರೆವಿಸ್ 3 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ

Feb 12, 2022, 7:14 pm IST

ಬೆಂಗಳೂರು ಮೂಲದ ಅಭಿನವ್ ಮನೋಹರ್ ಸದರಾಂಗಣಿ 2.6 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ

Feb 12, 2022, 7:11 pm IST

ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಪ್ರಿಯಂ ಗಾರ್ಗ್

ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಪ್ರಿಯಂ ಗಾರ್ಗ್

2020ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿರುವ ಪ್ರಿಯಂ ಗಾರ್ಗ್ ಈ ಬಾರಿಯ ಮೆಗಾ ಹರಾಜಿನಲ್ಲಿ 20 ಲಕ್ಷಕ್ಕೆ ಮತ್ತೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದಾರೆ

Feb 12, 2022, 7:08 pm IST

ರಜತ್ ಪಾಟೀದಾರ್ ಅನ್‌ಸೋಲ್ಡ್‌

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ರಜತ್ ಪಾಟೀದಾರ್ ಅನ್‌ಸೋಲ್ಡ್‌ ಆಗಿದ್ದಾರೆ

Feb 12, 2022, 6:39 pm IST

ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಅನ್‌ಸೋಲ್ಡ್‌

Feb 12, 2022, 6:39 pm IST

ಆರ್‌ಸಿಬಿ ತಂಡದಲ್ಲಿದ್ದ ಯುಜವೇಂದ್ರ ಚಹಾಲ್ 6.5 ಕೋಟಿ ರೂಪಾಯಿಗೆ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಹರಾಜು

Feb 12, 2022, 6:33 pm IST

ರಾಹುಲ್ ಚಹಾರ್‌ 5.25 ಕೋಟಿ ರೂಪಾಯಿಗೆ ಪಂಜಾಬ್‌ ಕಿಂಗ್ಸ್‌ಗೆ ಹರಾಜು

Feb 12, 2022, 6:22 pm IST

ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ ಅನ್‌ಸೋಲ್ಡ್‌

Feb 12, 2022, 6:21 pm IST

ಚೈನಾಮೆನ್ ಸ್ಪಿನ್ನರ್ ಕುಲ್‌ದೀಪ್ ಯಾದವ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ 2 ಕೋಟಿ ರೂಪಾಯಿಗೆ ಹರಾಜಾಗಿದ್ದಾರೆ

Feb 12, 2022, 6:20 pm IST

ಇಂಗ್ಲೆಂಡ್‌ ಸ್ಪಿನ್ನರ್‌ ಆದಿಲ್ ರಶೀದ್ ಅನ್‌ಸೋಲ್ಡ್‌

Feb 12, 2022, 6:18 pm IST

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ ಅನ್‌ಸೋಲ್ಡ್ ಆಗಿದ್ದಾರೆ

Feb 12, 2022, 6:16 pm IST

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ 2 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ

Feb 12, 2022, 6:15 pm IST

10.75 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್

Feb 12, 2022, 6:04 pm IST

ಭಾರತದ ವೇಗಿ ಭುವನೇಶ್ವರ್ ಕುಮಾರ್ 4.20 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ ಹರಾಜು

Feb 12, 2022, 5:59 pm IST

ಇಂಗ್ಲೆಂಡ್‌ನ ವೇಗಿ ಮಾರ್ಕ್‌ ವುಡ್ 7.50 ಕೋಟಿ ರೂಪಾಯಿಗೆ ಲಕ್ನೋ ಸೂಪರ್‌ ಜಾಯಿಂಟ್ಸ್‌ಗೆ ಹರಾಜು

Feb 12, 2022, 5:56 pm IST

7.75 ಕೋಟಿ ರೂಪಾಯಿಗೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪಾಲಾದ ಆಸೀಸ್ ವೇಗಿ ಜೋಶ್ ಹೇಜಲ್‌ವುಡ್

Feb 12, 2022, 5:50 pm IST

2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ನ್ಯೂಜಿಲೆಂಡ್ ಬೌಲರ್ ಲ್ಯೂಕಿ ಫರ್ಗ್ಯುಸನ್ ಬರೋಬ್ಬರಿ 10 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್‌ಗೆ ಹರಾಜು

Feb 12, 2022, 5:43 pm IST

ಕನ್ನಡಿಗ, ವೇಗದ ಬೌಲರ್ ಪ್ರಸಿದ್ಧ ಕೃಷ್ಣ 10 ಕೋಟಿ ರೂಪಾಯಿಗೆ ರಾಜಸ್ತಾನ್ ರಾಯಲ್ಸ್‌ ತಂಡದ ಪಾಲು

Feb 12, 2022, 5:33 pm IST

ಭಾರತದ ವೇಗಿ ಉಮೇಶ್ ಯಾದವ್ ಅನ್‌ಸೋಲ್ಡ್‌ ಆಗಿ ಉಳಿದಿದ್ದಾರೆ

Feb 12, 2022, 5:32 pm IST

14 ಕೋಟಿ ರೂಪಾಯಿಗೆ ದೀಪಕ್ ಚಹಾರ್‌ನನ್ನ ಮರಳಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್‌

Feb 12, 2022, 5:23 pm IST

ಬೌಲರ್ ಟಿ. ನಟರಾಜನ್ 4 ಕೋಟಿ ರೂಪಾಯಿಗೆ ಸನ್‌ರೈಸರ್ಸ್‌ ಹೈದ್ರಾಬಾದ್‌ಗೆ ಹರಾಜು

Feb 12, 2022, 5:02 pm IST

10.75 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದ್ರಾಬಾದ್ ಪಾಲಾದ ವೆಸ್ಟ್‌ ಇಂಡೀಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್‌

Feb 12, 2022, 4:54 pm IST

ವೆಸ್ಟ್‌ ಇಂಡೀಸ್ ಎಡಗೈ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ನಡುವೆ ತೀವ್ರ ಸ್ಪರ್ಧೆ

Feb 12, 2022, 4:53 pm IST

ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಬಿಲ್ಲಿಂಗ್ಸ್ ಅನ್‌ಸೋಲ್ಡ್‌

Feb 12, 2022, 4:51 pm IST

1 ಕೋಟಿ ಮೂಲ ಬೆಲೆ ಹೊಂದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ ವೃದ್ದಿಮಾನ್ ಸಾಹಾ ಅನ್‌ಸೋಲ್ಡ್‌ ಆಗಿದ್ದಾರೆ.

Feb 12, 2022, 4:50 pm IST

5.50 ಕೋಟಿ ರೂಪಾಯಿಗೆ ಆರ್‌ಸಿಬಿ ಪಾಲಾದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್

Feb 12, 2022, 4:42 pm IST

ಇಂಗ್ಲೆಂಡ್‌ನ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈಸ್ಟ್ರೋವ್ 6.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ ತಂಡಕ್ಕೆ ಹರಾಜು

Feb 12, 2022, 4:33 pm IST

ಬರೋಬ್ಬರಿ 15.25 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್‌ಗೆ ಹರಾಜಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್

Feb 12, 2022, 4:27 pm IST

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಗಾಗಿ ಭಾರೀ ಬಿಡ್ಡಿಂಗ್. ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್‌, ಸನ್‌ರೈಸರ್ಸ್ ಹೈದ್ರಾಬಾದ್ ನಡುವೆ ಸ್ಪರ್ಧೆ

Feb 12, 2022, 4:22 pm IST

6.75 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ ಅಂಬಟಿ ರಾಯುಡು

Feb 12, 2022, 4:18 pm IST

ಅಂಬಟಿ ರಾಯುಡು ಖರೀದಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ತೀವ್ರ ಸ್ಪರ್ಧೆ

Feb 12, 2022, 4:16 pm IST

ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದಾರೆ

Feb 12, 2022, 4:13 pm IST

6.50 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌

Feb 12, 2022, 4:10 pm IST

ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ಗಾಗಿ ಸನ್‌ರೈಸರ್ಸ್ ಹೈದ್ರಾಬಾದ್, ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ತೀವ್ರ ಸ್ಪರ್ಧೆ

Feb 12, 2022, 4:06 pm IST

ಆಲ್‌ರೌಂಡರ್ ಕೃನಾಲ್ ಪಾಂಡ್ಯ 8.25 ಕೋಟಿ ರೂಪಾಯಿಗೆ ಲಕ್ನೋ ಸೂಪರ್‌ ಜಾಯಿಂಟ್ಸ್‌ಗೆ ಹರಾಜು

Feb 12, 2022, 4:02 pm IST

ಆಲ್‌ರೌಂಡರ್ ಕೃನಾಲ್ ಪಾಂಡ್ಯ ಗಾಗಿ ತೀವ್ರ ಬಿಡ್ಡಿಂಗ್ ಸ್ಪರ್ಧೆ. ಸನ್‌ರೈಸರ್ಸ್ ಹೈದ್ರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ ಮತ್ತು ಲಕ್ನೋ ಸೂಪರ್ ಜಾಯಿಂಟ್ಸ್‌ ನಡುವೆ ಸ್ಪರ್ಧೆ

Feb 12, 2022, 3:59 pm IST

ವಾಷಿಂಗ್ಟನ್ ಸುಂದರ್‌ 8.75 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ ಹರಾಜು

Feb 12, 2022, 3:54 pm IST

ಎಡಗೈ ಆಲ್‌ರೌಂಡರ್ ವಾಷಿಂಗ್ಟನ್‌ ಸುಂದರ್ ಖರೀದಿಸಲು ಗುಜರಾತ್ ಟೈಟನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ

Feb 12, 2022, 3:51 pm IST

ಶ್ರೀಲಂಕಾದ ಬೌಲಿಂಗ್ ಆಲ್‌ರೌಂಡರ್ ವಾನಿಂದು ಹಸರಂಗ 10.75 ಕೋಟಿ ರೂಪಾಯಿಗೆ ಆರ್‌ಸಿಬಿ ಪಾಲು

Feb 12, 2022, 3:23 pm IST

ನಿರೂಪಕ ಮತ್ತು ವೀಕ್ಷಕ ವಿವರಣೆಗಾರ ಚಾರು ಶರ್ಮಾ ಅವರು ಮಧ್ಯಾಹ್ನ 3:30 ರಿಂದ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಹರಾಜುದಾರ ಹ್ಯೂ ಎಡ್ಮೀಡ್ಸ್ಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.

Feb 12, 2022, 2:31 pm IST

ಐಪಿಎಲ್ 2022 ಹರಾಜು ಮಧ್ಯಾಹ್ನ 3.30ಕ್ಕೆ ಪುನರಾರಂಭವಾಗಲಿದೆ

Feb 12, 2022, 2:26 pm IST

IPL ಹರಾಜಿನಲ್ಲಿ ದುರ್ಘಟನೆ, ಹರಾಜುದಾರ ಹ್ಯೂ ಎಡ್ಮೀಡ್ಸ್ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. IPL ಹರಾಜು 2022 ಸ್ಥಗಿತ

Feb 12, 2022, 2:12 pm IST

ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಕೊಳ್ಳಲು ಜಿದ್ದಿಗೆ ಬಿದ್ದ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್.

Feb 12, 2022, 2:05 pm IST

ದೀಪಕ್ ಹೂಡಾ

Feb 12, 2022, 2:04 pm IST

ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ದೀಪಕ್ ಹೂಡಾ ಅವರನ್ನು 5.75 ಕೋಟಿ ನೀಡಿ ಖರೀದಿಸಿದೆ.

Feb 12, 2022, 1:59 pm IST

ಕಳೆದ ಐಪಿಎಲ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದ ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. 10.75 ಕೋಟಿಗೆ ಹರ್ಷಲ್ ಪಟೇಲ್ ಆರ್‌ಸಿಬಿ ಪಾಲಾಗಿದ್ದಾರೆ.

Feb 12, 2022, 1:54 pm IST

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದುಕೊಂಡಿದ್ದಾರೆ.

Feb 12, 2022, 1:53 pm IST

ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಜೇಸನ್ ಹೋಲ್ಡರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ. 8.75 ಕೋಟಿ ನೀಡಿ ಲಕ್ನೋ ಈ ಹರಾಜಿನಲ್ಲಿ ಹೋಲ್ಡರ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.

Feb 12, 2022, 1:50 pm IST

ಯುವ ಆಟಗಾರ ನಿತೀಶ್ ರಾಣಾ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ 8 ಕೋಟಿ ರೂಪಾಯಿ ನೀಡಿ ಮತ್ತೆ ತಂಡಕ್ಕೆ ಸೇರ್ಪಡೆಗೊಳಿಸಲು ಯಶಸ್ವಿಯಾಗಿದೆ

Feb 12, 2022, 1:45 pm IST

ಅನುಭವಿ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. 4.40 ಕೋಟಿ ನೀಡಿ ಡ್ವೇಯ್ನ್ ಬ್ತಾವೋ ಅವರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಸಿಎಸ್‌ಕೆ ಯಶಸ್ವಿಯಾಯಿತು

Feb 12, 2022, 1:41 pm IST

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಕೂಡ ಯಾವುದೇ ತಂಡದ ಪಾಲಾಗದೆ ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದುಕೊಂಡಿದ್ದಾರೆ

Feb 12, 2022, 1:40 pm IST

ಮೊದಲ ಸುತ್ತಿನಲ್ಲಿ ಹರಾಜಾಗದೇ ಉಳಿದ ಅನುಭವಿ ಆಟಗಾರ ಸುರೇಶ್ ರೈನಾ.

Feb 12, 2022, 1:38 pm IST

ಕನ್ನಡಿಗ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದು 7.75 ಕೋಟಿ ರೂಪಾಯಿ ನೀಡಿ ಆರ್ ಆರ್ ಖರೀದಿಸಿದೆ.

Feb 12, 2022, 1:33 pm IST

ಕನ್ನಡಿಗ ದೇವದತ್ ಪಡಿಕ್ಕಲ್ ಸೇರ್ಪಡೆಗೊಳಿಸಲು ರಾಜಸ್ಥಾನ್ ರಾಯಲ್ಸ್ ಮುಂಬೈ ಇಂಡಿಯನ್ಸ್ ಪೈಪೋಟಿ

Feb 12, 2022, 1:33 pm IST

ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಡೇವಿಡ್ ಮಿಲ್ಲರ್ ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದುಕೊಂಡಿದ್ದಾರೆ.

Feb 12, 2022, 1:32 pm IST

2 ಕೋಟಿ ಮೊತ್ತಕ್ಕೆ ಜೇಸನ್ ರಾಯ್ ಅಹಮದಾಬಾದ್ ತಂಡಕ್ಕೆ ಹರಾಜಾಗಿದ್ದಾರೆ

Feb 12, 2022, 1:29 pm IST

ಅನುಭವಿ ಆಟಗಾರ ರಾಬಿನ್ ಉತ್ತಪ್ಪ 2 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹರಾಜಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಅನುಭವಿ ಆಟಗಾರನನ್ನು ವಶಕ್ಕೆ ಪಡೆಯಲು ಸಿಎಸ್‌ಕೆ ಯಶಸ್ವಿಯಾಗಿದೆ.

Feb 12, 2022, 1:27 pm IST

ವೆಸ್ಟ್ ಇಂಡೀಸ್‌ನ ಸ್ಪೋಟಕ ಆಟಗಾರ ಶಿಮ್ರಾನ್ ಹೇಟ್ಮೇರ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದು 8.50 ರೂಪಾಯಿ ಮೊತ್ತಕ್ಕೆ ಹರಾಜಾಗಿದ್ದಾರೆ

Feb 12, 2022, 1:22 pm IST

ಕನ್ನಡಿಗ ಮನೀಶ್ ಪಾಂಡೆಯನ್ನು ಲಕ್ನೋ ಸೂಪರ್ ಜೈಂಟ್ಸ್ ತೆಕ್ಕೆಗೆ ಹಾಕಿಕೊಂಡಿದ್ದು 4.60 ಕೋಟಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ

Feb 12, 2022, 1:08 pm IST

ಇದುವರೆಗೆ ಹರಾಜಾದ ಆಟಗಾರರು: ಶ್ರೇಯಸ್ ಅಯ್ಯರ್ (ಕೆಕೆಆರ್) ರೂ. 12.25 ಕೋಟಿ; ಕಗಿಸೊ ರಬಾಡ (ಪಿಬಿಕೆಎಸ್) ರೂ. 9.25 ಕೋಟಿ; ಶಿಖರ್ ಧವನ್ (ಪಿಬಿಕೆಎಸ್) ರೂ. 8.25 ಕೋಟಿ; ಟ್ರೆಂಟ್ ಬೌಲ್ಟ್ (RR) ರೂ. 8 ಕೋಟಿ; ಪ್ಯಾಟ್ ಕಮ್ಮಿನ್ಸ್ (ಕೆಕೆಆರ್) ರೂ. 7.25 ಕೋಟಿ; ಫಾಫ್ ಡು ಪ್ಲೆಸಿಸ್ (ಆರ್‌ಸಿಬಿ) ರೂ. 7 ಕೋಟಿ; ಮೊಹಮ್ಮದ್ ಶಮಿ (ಜಿಟಿ) ರೂ. 6.25 ಕೋಟಿ; ಕ್ವಿಂಟನ್ ಡಿ ಕಾಕ್ (ಎಲ್‌ಎಸ್‌ಜಿ) ರೂ. 6.25 ಕೋಟಿ; ಡೇವಿಡ್ ವಾರ್ನರ್ (ಡಿಸಿ) ರೂ. 6.25 ಕೋಟಿ; ಆರ್ ಅಶ್ವಿನ್ (ಆರ್ಆರ್) ರೂ. 5 ಕೋಟಿ

Feb 12, 2022, 12:57 pm IST

6.25 ಕೋಟಿ ರೂಪಾಯಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದ ಡೇವಿಡ್ ವಾರ್ನರ್.

Feb 12, 2022, 12:53 pm IST

ಹರಾಜು ಕಣದಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಸ್ಪರ್ಧೆ

Feb 12, 2022, 12:52 pm IST

ಲಕ್ನೋ ಸೂಪರ್ ಜೈಂಟ್ಸ್ ಪಾಲಾದ ಕ್ವಿಂಟನ್ ಡಿಕಾಕ್. 6.75 ಕೋಟಿ ಮೊತ್ತಕ್ಕೆ ಹರಾಜಾದ ದಕ್ಷಿಣ ಆಪ್ರಿಕಾದ ಆಟಗಾರ

Feb 12, 2022, 12:48 pm IST

ಹರಾಜು ಕಣದಲ್ಲಿ ದಕ್ಷಿಣ ಆಪ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್

Feb 12, 2022, 12:47 pm IST

ಆರ್‌ಸಿಬಿ ತಂಡದ ಪಾಲಾದ ಫಾಫ್ ಡು ಪ್ಲೆಸಿಸ್. 7 ಕೋಟಿ ಮೊತ್ತಕ್ಕೆ ದಕ್ಷಿಣ ಆಫ್ರಿಕಾ ಸ್ಪೋಟಕ ಆಟಗಾರ ಆರ್‌ಸಿಬಿ ತೆಕ್ಕೆಗೆ

Feb 12, 2022, 12:46 pm IST

ಶ್ರೇಯಸ್ ಐಯ್ಯರ್

Feb 12, 2022, 12:44 pm IST

ವೇಗಿ ಮೊಹಮ್ಮದ್ ಶಮಿಯನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದ ಗುಜರಾತ್ ಜೈಂಟ್ಸ್. 6.25 ಕೋಟಿಗೆ ಹರಾಜು

Feb 12, 2022, 12:41 pm IST

ಹರಾಜು ಅಖಾಡದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ. ಸ್ಪರ್ಧೆಗಿಳಿದ ಆರ್‌ಸಿಬಿ ಹಾಗೂ ಲಕ್ನೋ

Feb 12, 2022, 12:38 pm IST

12.25 ಕೋಟಿ ಮೊತ್ತಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾದ ಶ್ರೇಯಸ್ ಐಯ್ಯರ್

Feb 12, 2022, 12:36 pm IST

ಹರಾಜಿನಲ್ಲಿ ಶ್ರೇಯಸ್ ಐಯ್ಯರ್. ನಿರೀಕ್ಷೆಯಂತೆಯೇ ಫ್ರಾಂಚೈಸಿಗಳಿಂದ ಭಾರೀ ಪೈಪೋಟಿ.

Feb 12, 2022, 12:35 pm IST

ಟ್ರೆಂಟ್ ಬೋಲ್ಟ್

Feb 12, 2022, 12:33 pm IST

ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾದ ಟ್ರೆಂಟ್ ಬೋಲ್ಟ್. 8 ಕೋಟಿ ರೂಪಾಯಿಗೆ ಆರ್‌ಆರ್ ಪಾಲಾದ ಕಿವೀಸ್ ವೇಗಿ

Feb 12, 2022, 12:32 pm IST

ಕಿವೀಸ್ ವೇಗಿ ಟ್ಟ್ರೆಂಟ್ ಬೋಲ್ಟ್‌ಗಾಗಿ ಹರಾಜಿನಲ್ಲಿ ಪೈಪೋಟಿ.

Feb 12, 2022, 12:29 pm IST

ಕಗಿಸೋ ರಬಾಡ

Feb 12, 2022, 12:28 pm IST

9.25 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ

Feb 12, 2022, 12:26 pm IST

ಆರ್ ಅಶ್ವಿನ್

Feb 12, 2022, 12:25 pm IST

ಶಿಖರ್ ಧವನ್

Feb 12, 2022, 12:24 pm IST

ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾದ ಕಮ್ಮಿನ್ಸ್.

Feb 12, 2022, 12:22 pm IST

ಪ್ಯಾಟ್ ಕಮ್ಮಿನ್ಸ್ ಪಡೆಯಲು ಪೈಪೋಟಿಗಿಳಿದ ತಂಡಗಳು. ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್ ಮಧ್ಯೆ ಹಣಾಹಣಿ

Feb 12, 2022, 12:20 pm IST

ಆರ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ಪಾಲು. 5 ಕೋಟಿ ರೂಪಾಯಿಗೆ ಆರ್ ಆರ್ ಪಾಲಾದ ಸ್ಪಿನ್ನರ್

Story first published: Sunday, February 13, 2022, 20:55 [IST]
Other articles published on Feb 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+