For Quick Alerts
ALLOW NOTIFICATIONS  
For Daily Alerts
 

ವಿಂಡೀಸ್‌ನ ಆಲ್‌ರೌಂಡರ್ ಒಡಿಯನ್ ಸ್ಮಿತ್ 6 ಕೋಟಿಗೆ ಪಂಜಾಬ್‌ ಕಿಂಗ್ಸ್‌ಗೆ ಹರಾಜು

Odean smith

ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ , ಕೆಳಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್ ಒಡಿಯನ್ ಸ್ಮಿತ್‌ 6 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ ತಂಡದ ಪಾಲಾಗಿದ್ದಾರೆ.

ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಾಯಕ ಕಿರಾನ್ ಪೊಲಾರ್ಡ್‌ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಒಡಿಯನ್ ಸ್ಮಿತ್ ಬೌಲಿಂಗ್‌ನಲ್ಲಿ ಮಿಂಚಿದ್ದಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿದ್ರು. ದೊಡ್ಡ ಹೊಡೆತಗಳನ್ನ ಬಾರಿಸುವ ಸಾಮರ್ಥ್ಯವುಳ್ಳ ಒಡಿಯನ್ ಸ್ಮಿತ್ ಉತ್ತಮ ಟಿ20 ಬೌಲರ್ ಕೂಡ ಆಗಿದ್ದಾರೆ.

ಹೀಗಾಗಿಯೇ ಮೊದಲೇ ನಿರೀಕ್ಷಿಸಿದಂತೆ ಒಡಿಯನ್ ಸ್ಮಿತ್‌ಗೆ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಬೇಡಿಕೆ ಕಂಡುಬಂದಿತು. ಸನ್‌ರೈಸರ್ಸ್ ಹೈದ್ರಾಬಾದ್, ರಾಜಸ್ತಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ತೀವ್ರ ಸ್ಪರ್ಧೆಯ ನಡುವೆ ಕೊನೆಗೆ ಹೈದ್ರಾಬಾದ್ ಮತ್ತು ಪಂಜಾಬ್‌ ನಡುವೆ ಅಂತಿಮ ಬಿಡ್ಡಿಂಗ್ ಸ್ಪರ್ಧೆ ಕಂಡುಬಂದಿತು.

1 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿರುವ ಓಡಿಯನ್ ಸ್ಮಿತ್ ಅಂತಿಮವಾಗಿ 6 ಕೋಟಿ ರೂಪಾಯಿಗೆ ಬಿಡ್ಡಿಂಗ್ ಮಾಡಿದ ತಕ್ಷಣ ಸನ್‌ರೈಸರ್ಸ್ ಹೈದ್ರಾಬಾದ್ ಸ್ಪರ್ಧೆಯಿಂದ ಹೊರಗುಳಿಯಿತು. ಪರಿಣಾಮ ವಿಂಡೀಸ್ ಆಲ್‌ರೌಂಡರ್ ಒಡಿಯನ್ ಸ್ಮಿತ್ ಐಪಿಎಲ್ 2022ರ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್‌ ಪರ ಆಡಲಿದ್ದಾರೆ.

Story first published: Sunday, February 13, 2022, 15:47 [IST]
Other articles published on Feb 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+