
ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 15ನೇ ಸೀಸನ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5 ಕೋಟಿ ರೂಪಾಯಿ ಹರಾಜಾಗುವ ಮೂಲಕ ರಾಜಸ್ತಾನ್ ರಾಯಲ್ಸ್ ಪಾಲಾಗಿದ್ದಾರೆ.
ಕಳೆದ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಆರ್.ಅಶ್ವಿನ್‌ರನ್ನ ಕೊಂಡುಕೊಳ್ಳಲು ಡೆಲ್ಲಿ ಪ್ರಯತ್ನ ಪಟ್ಟಿತು. ಆದ್ರೆ ರಾಜಸ್ತಾನ್ ರಾಯಲ್ಸ್ ಪ್ರಬಲ ಬಿಡ್‌ನಿಂದಾಗಿ ಕೊನೆಗೆ ಐದು ಕೋಟಿ ರೂಪಾಯಿಗೆ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಹರಾಜಾಗಿದ್ದಾರೆ.
ಆರಂಭದಿಂದಲೇ ಡೆಲ್ಲಿ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ಬಿಡ್ ಸ್ಪರ್ಧೆ ಜೋರಾಗಿತ್ತು. ಆದ್ರೆ ಯಾವಾಗ ಅಶ್ವಿನ್ ಬೆಲೆಯು ಐದು ಕೋಟಿ ರೂಪಾಯಿಗೆ ಮುಟ್ಟಿತು, ಡೆಲ್ಲಿ ಸ್ಪಿನ್ನರ್ ಅನ್ನು ಕೊಂಡುಕೊಳ್ಳುವಲ್ಲಿ ಹಿಂದೆ ಸರಿಯಿತು. ಪರಿಣಾಮ ಐಪಿಎಲ್ 15ನೇ ಸೀಸನ್‌ನಲ್ಲಿ ಅಶ್ವಿನ್ ರಾಜಸ್ತಾನ್ ರಾಯಲ್ಸ್ ಪರ ಆಡಲಿದ್ದಾರೆ.