"ಆ ಒಬ್ಬ ಆಟಗಾರನಿಗಾಗಿ ಹರಾಜಿನಲ್ಲಿ ಆರ್‌ಸಿಬಿ 20 ಕೋಟಿ ಮೀಸಲಿಟ್ಟಿದೆ"

ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಪ್ರಕ್ರಿಯೆ ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಎರಡು ಹೊಸ ತಂಡಗಳು ಟೂರ್ನಿಗೆ ಸೇರ್ಪಡೆಯಾಗಿದ್ದು ಈ ಹರಾಜು ಪ್ರಕ್ರಿಯೆಯ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇನ್ನು ಎಲ್ಲಾ ತಂಡಗಳು ಕೂಡ ತಮ್ಮ ತಂಡದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು ಎರಡು ಹೊಸ ತಂಡಗಳು ತಮಗೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಆಟಗಾರರನ್ನು ಸೇರ್ಪಡೆಗೊಳಿಸಿದೆ.
ಇದೀಗ ಎಲ್ಲಾ ತಂಡಗಳು ಕೂಡ ಐಪಿಎಲ್ ಮೆಗಾ ಆಕ್ಷನ್‌ನತ್ತ ಚಿತ್ತ ನೆಟ್ಟಿದೆ. ತಮ್ಮ ತಂಡಗಳನ್ನು ಬಲಿಷ್ಠಗೊಳಿಸಲು ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರನ್ನು ತಮ್ಮ ತೆಕ್ಕೆಗೆ ಎಷ್ಟು ಮೊತ್ತಕ್ಕೆ ಹಾಕಿಕೊಂಡರೆ ಉತ್ತಮ ಎಂಬ ಲೆಕ್ಕಾಚಾರದಲ್ಲಿ ಫ್ರಾಂಚೈಸಿಗಳು ಇದೆ. ಇದರಲ್ಲಿ ಬೆಂಗಳೂರು ಮೂಲದ ಆರ್‌ಸಿಬಿ ಫ್ರಾಂಚೈಸಿ ಕೂಡ ಸಾಕಷ್ಟು ಅಂಶಗಳನ್ನು ಮುಂದಿಟ್ಟುಕೊಂಡು ಲೆಕ್ಕಾಚಾರವನ್ನು ನಡೆಸುತ್ತಿದೆ. ವಿರಾಟ್ ಕೊಹ್ಲಿ ಐಪಿಎಲ್ ನಾಯಕತ್ವದಿಂದಲೂ ಕೆಳಕ್ಕಿಳಿದಿರುವ ಕಾರಣ ಮುಂದಿನ ಆವೃತ್ತಿಗೆ ಹೊಸ ನಾಯಕನನ್ನು ಕೂಡ ತಂಡ ಆಯ್ಕೆ ಮಾಡುವ ದೃಷ್ಟಿಯಿಂದ ಆರ್‌ಸಿಬಿ ಆಕ್ಷನ್ ಕುತೂಹಲ ಹೆಚ್ಚಿಸಿದೆ.

ಆರ್‌ಸಿಬಿ ಆಕ್ಷನ್ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಆಕಾಶ್ ಚೋಪ್ರ
ಇನ್ನು ಎಲ್ಲಾ ಫ್ರಾಂಚೈಸಿಗಳ ಅಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರು ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲಾಗಬಹುದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಆರ್‌ಸಿಬಿ ತಂ ಡದ ಹರಾಜಿನ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ಓರ್ವ ಆಟಗಾರನ ಮೇಲೆ ವಿಶೇಷವಾಗಿ ಚಿತ್ತ ನೆಟ್ಟಿದ್ದು ಆತನಿಗಾಗಿ 20 ಕೋಟಿ ರೂಪಾಯಿ ವ್ಯಯಿಸಲು ಆರ್‌ಸಿಬಿ ಸಿದ್ಧವಾಗಿದೆ ಎಂಬ ಬಗ್ಗೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.

ಆರ್‌ಸಿಬಿ ಕಣ್ಣಿಟ್ಟಿರೋ ಆ ಆಟಗಾರ ಯಾರು?
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಕ್ಕಿಳಿದಿರುವ ಕಾರಣ ಆರ್‌ಸಿಬಿ ತಂಡ ನಾಯಕತ್ವಕ್ಕೆ ಸಮರ್ಥನಾಗುವ ಆಟಗಾರನ ಹುಡುಕಾಟದಲ್ಲಿದೆ. ಹೀಗಾಗಿ ಈ ಬಾರಿಯ ಹರಾಜು ಪಟ್ಟಿಗೆ ಬಿಡುಗಡೆಯಾಗಿರುವ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಶ್ರೇಯಸ್ ಐಯ್ಯರ್ ಮೇಲೆ ಆರ್‌ಸಿಬಿ ಚಿತ್ತ ನೆಟ್ಟಿದೆ ಎನ್ನಲಾಗುತ್ತಿದೆ. ಆಕಾಶ್ ಚೋಪ್ರ ಕೂಡ ಇದೇ ಸಂಗತಿಯನ್ನು ತಮ್ಮ ಯೂಟ್ಯೂಬ್ ಚಾನೆಲ್‌ನ್ಲಲಿ ಹಂಚಿಕೊಂಡಿದ್ದಾರೆ. ಯಾವ ಕಾರಣಕ್ಕೂ ಶ್ರೇಯಸ್ ಐಯ್ಯರ್ ಅವರನ್ನು ಬಿಟ್ಟುಕೊಡಬಾರದು ಎಂಬ ಲೆಕ್ಕಾಚಾರದಲ್ಲಿ ಆರ್‌ಸಿಬಿ ತಂಡವಿದೆ ಎಂಬ ಸಂಗತಿಯ್ನನು ಆಕಾಶ್ ಚೋಪ್ರ ಹಂಚಿಕೊಂಡಿದ್ದಾರೆ.

ಐಯ್ಯರ್‌ಗಾಗಿ 20 ಕೋಟಿ ತೆಗೆದಿರಿಸಿದೆಯಂತೆ ಆರ್‌ಸಿಬಿ
ಆಕಾಶ್ ಚೋಪ್ರಾ ಹೇಳಿಕೊಂಡಿರುವ ಅಂಶಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿರುವುದು ಆರ್‌ಸಿಬಿ ಶ್ರೇಯಸ್ ಐಯ್ಯರ್‌ಗಾಗಿ ಮೀಸಲಿಟ್ಟಿರುವ ಬಜೆಟ್ ಮೊತ್ತ. ಆರ್‌ಸಿಬಿ ತಂಡ ಶ್ರೇಯಸ್ ಐಯ್ಯರ್‌ಗೋಸ್ಕರ 20 ಕೋಟಿ ಮೊತ್ತವನ್ನು ಮೀಸಲಿಟ್ಟಿದೆ ಎಂದು ಯಾರೋ ನನಗೆ ಹೇಳಿದ್ದರು ಎಂದಿದ್ದಾರೆ ಆಕಾಶ್ ಚೋಪ್ರ. "ಈ ಹರಾಜು ಬಹಳಷ್ಟು ಕುತೂಹಲಕಾರಿಯಾಗಿರಲಿದೆ. ಶ್ರೇಯಸ್ ಐಯ್ಯರ್ 15-16 ಕೋಟಿ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಯಿದೆ. ನನಗೆ ಯಾರೋ ಒಬ್ಬರು ಹೇಳಿದ್ದಾರೆ ಆರ್‌ಸಿಬಿ ಐಯ್ಯರ್‌ಗೋಸ್ಕರ 20 ಕೋಟಿ ಮೊತ್ತವನ್ನು ಮೀಸಲಿರಿಸಿದೆ ಎಂದು. ವಾವ್..!!" ಎಂದು ಆಕಾಶ್ ಚೋಪ್ರ ಹೇಳಿಕೊಂಡಿದ್ದಾರೆ.

ಡೆಲ್ಲಿ ತಂಡದಿಂದ ಬಿಡುಗಡೆಯಾಗಿರುವ ಐಯ್ಯರ್
ಶ್ರೇಯಸ್ ಐಯ್ಯರ್ 2021ರ ಐಪಿಎಲ್ ಆವೃತ್ತಿಯ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಡುಗಡೆಯಾಗಿದ್ದರು. ಅದಕ್ಕೂ ಹಿಂದಿನ ಮೂರು ಆವೃತ್ತಿಗಳಲ್ಲಿ ಶ್ರೇಯಸ್ ಐಯ್ಯರ್ ಡೆಲ್ಲಿ ತಮಡದ ನಾಯಕತ್ವ ವಹಿಸಿಕೊಂಡಿದ್ದಾರೆ. 2018, 2019 ಹಾಗೂ 2020ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಯ್ಯರ್ ಮುನ್ನಡೆಸಿದ್ದಾರೆ. ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ 2020ರ ಆವೃತ್ತಿಯಲ್ಲಿ ಡೆಲ್ಲಿ ತಂಡ ಚೊಚ್ಚಲ ಬಾರಿಗೆ ಐಪಿಎಲ್ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿತ್ತು. ಹೀಗಾಗಿ ಶ್ರೇಯಸ್ ಐಯ್ಯರ್ ನಾಯಕತ್ವದ ಬಗ್ಗೆ ಸಾಕಷ್ಟು ಉತ್ತಮ ಅಭಿಪ್ರಾಯಗಳು ಇದೆ. ಹೀಗಾಗಿ ಈ ಐಪಿಎಲ್ ಆವೃತ್ತಿಗೆ ಮುನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ತಂಡಗಳು ಶ್ರೇಯಸ್ ಐಯ್ಯರ್ ಮೇಲೆ ವಿಶೇಷ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications