Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬ್ ಪಾಲಾದ ಸ್ಫೋಟಕ ಆಟಗಾರ ಶಾರೂಖ್ ಖಾನ್‌: 9 ಕೋಟಿ ರೂ. ಬಿಡ್

Shahrukh khan

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ನಿರೀಕ್ಷೆಯಂತೆ ತಮಿಳುನಾಡು ಮೂಲದ ಸ್ಫೋಟಕ ಆಟಗಾರ ಶಾರೂಖ್ ಖಾನ್ ಭಾರೀ ಮೊತ್ತಕ್ಕೆ ಹರಾಜಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಶಾರೂಖ್ ಖಾನ್‌ ದೊಡ್ಡ ಮೊತ್ತ ಬಾಚಿಕೊಳ್ಳಲು ಹರಾಜಿಗೆ ಧುಮುಕಿದ್ದರು. ಈತನನ್ನ ಕೊಂಡುಕೊಳ್ಳಲು ಕೆಕೆಆರ್, ಪಂಜಾಬ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಭಾರೀ ಪ್ರಯತ್ನ ನಡೆಸಿತು. ಅಂತಿಮ ಕ್ಷಣದವರೆಗೂ ಶಾರೂಖ್ ಯಾವ ತಂಡ ಸೇರಬಲ್ಲ ಎಂದು ಕುತೂಹಲ ಮೂಡಿಸಿತ್ತು.

ಅಂತಿಮವಾಗಿ ಪಟ್ಟು ಬಿಡದ ಪಂಜಾಬ್ ಕಿಂಗ್ಸ್‌ ಸತತ ಬಿಡ್ ಮಾಡುವ ಮೂಲಕ 40 ಲಕ್ಷ ಮೂಲಬೆಲೆಯ ತನ್ನ ಆಟಗಾರ ಶಾರೂಖ್‌ ಖಾನ್‌ನನ್ನ 9 ಕೋಟಿ ರೂಪಾಯಿಗೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಕಳೆದ ವರ್ಷ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಮಿಂಚಿನ ಬ್ಯಾಟಿಂಗ್ ನಡೆಸಿದ ತಮಿಳುನಾಡು ಬ್ಯಾಟ್ಸ್‌ಮನ್ ಶಾರೂಖ್ ಖಾನ್ ಸಿಕ್ಸರ್ ಸಿಡಿಸಿ ಐತಿಹಾಸಿಕ ಗೆಲುವನ್ನ ತಂದುಕೊಟ್ಟರು. ಶಾರೂಖ್‌ರ ಎಪಿಕ್ ರನ್ ಚೇಸ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಫಿನಿಷಿಂಗ್ ಸ್ಟೈಲ್ ನೆನಪಿಸುವಂತಿತ್ತು.

15 ಎಸೆತಗಳಲ್ಲಿ 33 ರನ್ ಸಿಡಿಸಿದ ಶಾರೂಕ್ ಖಾನ್ ಕೊನೆಯ ಎಸೆತವನ್ನ ಸಿಕ್ಸರ್‌ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನ ತಂದುಕೊಟ್ರು. ಅಂತಿಮ ಓವರ್‌ನಲ್ಲಿ 16 ರನ್‌ ತಲುಪುವಲ್ಲಿ ತಮಿಳುನಾಡು ಯಶಸ್ವಿಯಾಯಿತು. ಅದ್ರಲ್ಲೂ ಕೊನೆಯ ಎಸೆತದಲ್ಲಿ 5ರನ್‌ಗಳ ಒತ್ತಡವನ್ನ ಮೆಟ್ಟಿ ನಿಂತು ಶಾರೂಕ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ರು. ಜೊತೆಗೆ ತಮಿಳುನಾಡು ಮೂರನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನ ಮುಡಿಗೇರಿಸಿಕೊಂಡಿತು.

ಶಾರೂಖ್ ಫಿನಿಷಿಂಗ್ ಸಾಮರ್ಥ್ಯವನ್ನ ಗಮನದಲ್ಲಿಟ್ಟುಕೊಂಡು ಅನೇಕ ಫ್ರಾಂಚೈಸಿಗಳು ಹರಾಜಿನಲ್ಲಿ ಪ್ರಯತ್ನ ಪಟ್ಟವು. ಆದ್ರೆ ಅಂತಿಮವಾಗಿ ಶಾರೂಖ್ ಮರಳಿ ತವರು ತಂಡ ಪಂಜಾಬ್‌ಗೆ ಮರಳಲು ಯಶಸ್ವಿಯಾಗಿದ್ದಾರೆ.

Story first published: Sunday, February 13, 2022, 15:56 [IST]
Other articles published on Feb 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+