Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬರೋಬ್ಬರಿ 12.25 ಕೋಟಿ ರೂಪಾಯಿಗೆ ಕೆಕೆಆರ್ ತಂಡ ಸೇರಿದ ಶ್ರೇಯಸ್ ಅಯ್ಯರ್

Shreyas iyer

ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಹುನಿರೀಕ್ಷಿತ ಆಟಗಾರ ಶ್ರೇಯಸ್ ಅಯ್ಯರ್ ಭಾರೀ ಮೊತ್ತಕ್ಕೆ ಹರಾಜಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೇಯಸ್ ಅಯ್ಯರ್‌ನನ್ನ ಕೊಂಡುಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ಸೂಪರ್ ಜಾಯಿಂಟ್ಸ್‌ ಭಾರೀ ಸ್ಪರ್ಧೆಗಿಳಿದವು. ಕೊನೆಯವರೆಗೂ ಮೂರು ಫ್ರಾಂಚೈಸಿಗಳು ಅಯ್ಯರ್‌ಗಾಗಿ ಬಿಡ್ ಮಾಡಿದವು. ಆದ್ರೆ ಬಿಡ್ ಮೊತ್ತ 10 ಕೋಟಿ ದಾಟುತ್ತಿದ್ದಂತೆ ಆರ್‌ಸಿಬಿ ಹಿಂದೆ ಸರಿಯಿತು.

ಆದ್ರೆ ತನ್ನ ನಿರ್ಧಾರದಿಂದ ಹಿಂದೆ ಸರಿಯಾದ ಕೆಕೆಆರ್ ಮತ್ತು ಗುಜರಾತ್ ಫ್ರಾಂಚೈಸಿಗಳು ಭಾರೀ ಸ್ಪರ್ಧೆ ನಡೆಸಿದವು. ಆದ್ರೆ 12 ಕೋಟಿ ರೂಪಾಯಿ ಬಿಡ್ ಮೊತ್ತ ದಾಟುತ್ತಿದ್ದಂತೆ ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್‌ ಹಿಂದೆ ಸರಿಯಿತು. 12.25 ಕೋಟಿ ರೂಪಾಯಿಗೆ ಬಿಡ್‌ ಮಾಡಿದ್ದ ಕೆಕೆಆರ್ ಫ್ರಾಂಚೈಸಿ ಸ್ಫೋಟಕ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ನನ್ನು ಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಶ್ರೇಯಸ್ ಅಯ್ಯರ್ ಹರಾಜಿಗೆ ಹೋಗುವ ಆಸೆ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಆತನನ್ನ ರೀಟೈನ್ ಮಾಡಿಕೊಂಡಿರಲಿಲ್ಲ. ಆದ್ರೀಗ ಶ್ರೇಯಸ್ ಅಯ್ಯರ್ ಐಪಿಎಲ್ 15ನೇ ಸೀಸನ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಪರ ಆಡಲಿದ್ದಾರೆ.

Story first published: Saturday, February 12, 2022, 13:29 [IST]
Other articles published on Feb 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+