ಐಪಿಎಲ್: ಕೇವಲ 2 ಐಪಿಎಲ್ ಪಂದ್ಯ ಆಡಿರುವ ಆಟಗಾರನನ್ನು 10.75 ಕೋಟಿಗೆ ಖರೀದಿಸಿದ ಆರ್‌ಸಿಬಿ!

ಬೆಂಗಳೂರಿನಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಶ್ರೀಲಂಕಾ ಮೂಲದ ವನಿಂದು ಹಸರಂಗ ಬರೋಬ್ಬರಿ 10.75 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ.
ಕಳೆದ ವರ್ಷ ಭಾರತದಲ್ಲಿ ಆರಂಭವಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಯುಎಇಗೆ ಸ್ಥಳಾಂತರಿಸಲ್ಪಟ್ಟಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದ ಆಡಂ ಜಂಪಾ ಟೂರ್ನಿಯಿಂದ ಹೊರ ನಡೆದಿದ್ದರು. ಈ ಸಂದರ್ಭದಲ್ಲಿ ಆಡಂ ಜಂಪಾ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದ ವನಿಂದು ಹಸರಂಗ ಈ ಬಾರಿ ಬರೋಬ್ಬರಿ 10.75 ಕೋಟಿ ಪಡೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ.
ಇನ್ನು ಕಳೆದ ವರ್ಷ ಆಡಂ ಜಂಪಾ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರಿದ್ದ ವನಿಂದು ಹಸರಂಗ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿದು 1 ರನ್ ಗಳಿಸಿದ್ದರು ಹಾಗೂ 6 ಓವರ್ ಬೌಲಿಂಗ್ ಮಾಡಿದ್ದ ವನಿಂದು ಹಸರಂಗ ಯಾವುದೇ ವಿಕೆಟ್ ಪಡೆಯದೇ 60 ರನ್ ನೀಡಿದ್ದರು. ಹೀಗೆ ಆಡಮ್ ಜಂಪಾ ಸ್ಥಾನಕ್ಕೆ ಬಂದಿದ್ದ ವನಿಂದು ಹಸರಂಗ ಕೂಡ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಿರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಲ ಪಂದ್ಯಗಳು ಬಾಕಿ ಇರುವಾಗಲೇ ವನಿಂದು ಹಸರಂಗ ಭಾರತದಿಂದ ಶ್ರೀಲಂಕಾಕ್ಕೆ ಹಾರಿದ್ದರು. ಹೀಗೆ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡದ ವನಿಂದು ಹಸರಂಗ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ತಾನು ನೀಡಿರುವ ಉತ್ತಮ ಪ್ರದರ್ಶನದ ನೆರವಿನಿಂದ ಇದೀಗ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಬಾಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications