Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮತ್ತೆ ಆರ್‌ಸಿಬಿ ಸೇರುವ ಚಹಾಲ್ ಕನಸು ಭಗ್ನ: 6.50 ಕೋಟಿಗೆ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಹರಾಜು

Yuzvendra chahal

ಟೀಂ ಇಂಡಿಯಾ ಸ್ಪಿನ್ನರ್‌, ಮಾಜಿ ಆರ್‌ಸಿಬಿ ಆಟಗಾರ ಯುಜವೇಂದ್ರ ಚಹಾಲ್ ಐಪಿಎಲ್ 15ನೇ ಸೀಸನ್‌ನ ಮೆಗಾ ಹರಾಜಿನಲ್ಲಿ ರಾಜಸ್ತಾನ್ ರಾಯಲ್ಸ್ ತಂಡಕ್ಕೆ 6.50 ಕೋಟಿಗೆ ಹರಾಜಾಗಿದ್ದಾರೆ.

ಹಲವು ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ್ದ ಚಹಾಲ್, ಆರ್‌ಸಿಬಿ ತಂಡಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ರು. ಆದ್ರೆ ಆರ್‌ಸಿಬಿ ಯಾವುದೇ ಬಿಡ್‌ ಮಾಡದ ಪರಿಣಾಮ ರಾಜಸ್ತಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ ಅಂತಿಮವಾಗಿ ರಾಯಲ್ಸ್‌ 6.5 ಕೋಟಿ ರೂಪಾಯಿಗೆ ಚಹಾಲ್‌ರನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಯುಜವೇಂದ್ರ ಚಹಾಲ್ 139 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಆದ್ರೆ ಈ ಬಾರಿ ಆರ್‌ಸಿಬಿ ಚಹಾಲ್‌ರನ್ನ ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟಿತು. ಇದೀಗ ಐಪಿಎಲ್ 15ನೇ ಸೀಸನ್‌ನಲ್ಲಿ ಚಹಾಲ್ ರಾಜಸ್ತಾನ್ ರಾಯಲ್ಸ್ ಪರ ಆಡಲಿದ್ದಾರೆ.

ಆರ್‌ಸಿಬಿ ಐಪಿಎಲ್ 15ನೇ ಸೀಸನ್‌ನ ರೀಟೈನ್ ಪ್ರಕ್ರಿಯೆಯಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್‌ರನ್ನ ತಂಡದಲ್ಲಿ ಉಳಿಸಿಕೊಂಡಿದೆ. ಹೀಗಾಗಿಯೇ ಐಪಿಎಲ್ 2022ರ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಕೊಂಡುಕೊಂಡರೂ ಸಹ ಆಡಲು ಸಿದ್ದನಿದ್ದೇನೆ ಎಂದು ಚಹಾಲ್ ಹೇಳಿದ್ದರು.

ಚಾಹಲ್ ಎಂಟು ಸೀಸನ್‌ಗಳಲ್ಲಿ ಆರ್‌ಸಿಬಿ ಪರ 113 ಪಂದ್ಯಗಳನ್ನು ಆಡಿದ್ದಾರೆ, ಎಬಿ ಡಿವಿಲಿಯರ್ಸ್ (157) ಮತ್ತು ವಿರಾಟ್ ಕೊಹ್ಲಿ (222) ನಂತರ ಆರ್‌ಸಿಬಿ ಪರ ಅತಿ ಹೆಚ್ಚು ಪಂದ್ಯವನ್ನಾಡಿದ ಮೂರನೇ ಆಟಗಾರನಾಗಿದ್ದಾರೆ.

ಒಂದೇ ಒಂದು ವಿಕೆಟ್ ಪಡೆದ ಈತನನ್ನ RCB 10 ಕೋಟಿ ಕೊಟ್ಟು ಖರೀದಿ ಮಾಡಿದ್ಯಾಕೆ? | Oneindia Kannada

Story first published: Sunday, February 13, 2022, 15:56 [IST]
Other articles published on Feb 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+