IPL Auction 2023: ಕೊಚ್ಚಿ ತಲುಪಿದ ಫ್ರಾಂಚೈಸಿ ಅಧಿಕಾರಿಗಳು, ಗುರುವಾರ ತಂಡಗಳ ಸಭೆ, ಅಣಕು ಹರಾಜು

ಐಪಿಎಲ್ 2023ರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 23ರಂದು ಶುಕ್ರವಾರ 10 ತಂಡಗಳು ಹರಾಜಿನಲ್ಲಿ 405 ಕ್ರಿಕೆಟಿಗರಲ್ಲಿ 87 ಜನರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಸಲಿವೆ. ಹರಾಜು ಪ್ರಕ್ರಿಯೆಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳ ಅಧಿಕಾರಿಗಳು ಬುಧವಾರ ಕೊಚ್ಚಿ ತಲುಪಲಿದ್ದಾರೆ.
ಐಪಿಎಲ್ ಫ್ರಾಂಚೈಸಿಗಳ ಅಧಿಕಾರಿಗಳು ಹರಾಜು ತಂತ್ರವನ್ನು ಸರಿಯಾಗಿ ಪಡೆಯಲು ಸಜ್ಜಾಗುತ್ತಿದ್ದಾರೆ ಮತ್ತು ತಯಾರಿ ನಡೆಸುತ್ತಿದ್ದಾರೆ. 10 ತಂಡಗಳು ಈಗಾಗಲೇ 163 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿವೆ.
ಐಪಿಎಲ್ ಹರಾಜು 2023 ಪ್ರಕ್ರಿಯೆಗಾಗಿ ಬಿಸಿಸಿಐ ಕೊಚ್ಚಿಯ ಬೊಲ್ಗಾಟ್ಟಿ ದ್ವೀಪದಲ್ಲಿರುವ ಗ್ರ್ಯಾಂಡ್ ಹಯಾಟ್‌ನ ಎರಡು ಮಹಡಿಗಳನ್ನು ಕಾಯ್ದಿರಿಸಿದೆ. ಮಿನಿ ಹರಾಜು ಪ್ರಕ್ರಿಯೆ ಒಟ್ಟು 7 ಗಂಟೆಗಳ ಕಾಲ ನಡೆಯಲಿದ್ದು, ನಡುವೆ ಒಂದು ಗಂಟೆ ವಿರಾಮ ಇರಲಿದೆ.
ಹರಾಜು ದಿನಕ್ಕೆ ಮುನ್ನ, ಫ್ರಾಂಚೈಸಿಗಳು ಡಿಸೆಂಬರ್ 21 ರಂದು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಫ್ರಾಂಚೈಸಿಗಳು ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಡಿಸೆಂಬರ್ 22ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಣಕು ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ.

10 ತಂಡಗಳಲ್ಲಿ ಉಳಿದಿರುವ ಪರ್ಸ್ ವಿವರ
10 ತಂಡಗಳು ಈಗಾಗಲೇ 163 ಆಟಗಾರರನ್ನು ಉಳಿಸಿಕೊಂಡಿದ್ದು, 87 ಸ್ಲಾಟ್‌ಗಳು ಖಾಲಿಯಿದ್ದು ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ವಿದೇಶಿ ಆಟಗಾರರಿಗಾಗಿ 30 ಸ್ಲಾಟ್‌ಗಳು ಉಳಿದಿವೆ.
ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಆಟಗಾರರಿಗಾಗಿ 743.5 ಕೋಟಿ ಖರ್ಚು ಮಾಡಿದ್ದು, ಈ ಬಾರಿಯ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು 206.5 ಕೋಟಿ ರುಪಾಯಿ ಉಳಿಸಿಕೊಂಡಿವೆ.
ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ 42.25 ಕೋಟಿ ರುಪಾಯಿ ಇದ್ದು, ಅತಿ ಹೆಚ್ಚಿನ ಮೊತ್ತವನ್ನು ಹೊಂದಿರುವ ತಂಡವಾಗಿದೆ. ಪಂಜಾಬ್ ಕಿಂಗ್ಸ್, 32.2 ಕೋಟಿ ರುಪಾಯಿ ಪರ್ಸ್ ಹೊಂದಿದೆ. ಲಕ್ನೋ ಸೂಪರ್ ಜೈಂಟ್, 23.35 ಕೋಟಿ ರು. ಮುಂಬೈ ಇಂಡಿಯನ್ಸ್, 20.55 ಕೋಟಿ ರುಪಾಯಿ. ಚೆನ್ನೈ ಸೂಪರ್ ಕಿಂಗ್ಸ್ ಪರ್ಸ್‌ನಲ್ಲಿ 20.45 ಕೋಟಿ ರುಪಾಯಿ ಹೊಂದಿದೆ.
ದೆಹಲಿ ಕ್ಯಾಪಿಟಲ್ಸ್ ತನ್ನ ಪರ್ಸ್‌ನಲ್ಲಿ 19.45 ಕೋಟಿ ರುಪಾಯಿ ಉಳಿಸಿಕೊಂಡಿದೆ. ಚಾಂಪಿಯನ್ ಗುಜರಾತ್ ಟೈಟಾನ್ಸ್, 19.25 ಕೋಟಿ ರು. ಪರ್ಸ್ ಹೊಂದಿದೆ. ರಾಜಸ್ಥಾನ್ ರಾಯಲ್ಸ್ 13.2 ಕೋಟಿ ರು., ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ್ಸ್‌ನಲ್ಲಿ 8.75 ಕೋಟಿ ರುಪಾಯಿ ಹೊಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 7.05 ಕೋಟಿ ರುಪಾಯಿ ಹೊಂದಿದೆ.
ಇದೇ ಮೊದಲ ಬಾರಿಗೆ ಐಪಿಎಲ್ ಇಬ್ಬರು ವಿಭಿನ್ನ ಪ್ರಸಾರಕರನ್ನು ಒಳಗೊಂಡಿದೆ. ಜಿಯೋ ಸಿನಿಮಾ 2023ರ ಐಪಿಎಲ್ ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿಯಲ್ಲಿ ಐಪಿಎಲ್ ಹರಾಜನ್ನು ನೋಡಬಹುದಾಗಿದೆ. ಕ್ರಿಸ್‌ಮಸ್ ಹಬ್ಬದ ಕಾರಣ ತಂಡಗಳ ಸಹಾಯಕರು ಆನ್‌ಲೈನ್ ಮೂಲಕ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 20-21ರಂದು ತಂಡದ ಮಾಲೀಕರು ಹಾಗೂ ಕೆಲವು ಸಹಾಯಕರು ಕೊಚ್ಚಿಗೆ ಆಗಮಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications