IPL Auction 2023 : ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದ ಬೆನ್ ಸ್ಟೋಕ್ಸ್: 16.25 ಕೋಟಿ ರುಪಾಯಿಗೆ ಹರಾಜು!

ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. 16.25 ಕೋಟಿ ರುಪಾಯಿಗಳ ಬೃಹತ್ ಮೊತ್ತ ನೀಡಿ ಸಿಎಸ್‌ಕೆ ತಂಡ ಬೆನ್ ಸ್ಟೋಕ್ಸ್‌ರನ್ನು ಖರೀದಿಸಿದೆ.
16.25 ಕೋಟಿ ರುಪಾಯಿ ಪಡೆಯುವ ಮೂಲಕ 3ನೇ ದುಬಾರಿ ಆಟಗಾರ ಎನಿಸಿಕೊಂಡರು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಬೆನ್ ಸ್ಟೋಕ್ಸ್ ಅವರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದವು.
ಆರಂಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಕೋಟಿ ರುಪಾಯಿವರೆಗೆ ಬಿಡ್ ಮಾಡಿದರು. ನಂತರ ರಾಜಸ್ಥಾನ ರಾಯಲ್ಸ್ ಕೂಡ ಇಂಗ್ಲೆಂಡ್ ಆಲ್‌ರೌಂಡರ್ ಸ್ಟೋಕ್ಸ್‌ಗೆ ಬಿಡ್ ಮಾಡಿತು. ನಂತರ ಸ್ಪರ್ಧೆಗೆ ಬಿದ್ದ ಸಿಎಸ್‌ಕೆ ಸ್ಟೋಕ್ಸ್ ಅವರಿಗಾಗಿ ಬಿಡ್ ಮಾಡಿತು, ಸನ್‌ರೈಸರ್ಸ್ ಹೈದರಾಬಾದ್ ಕೂಡ ಕೊನೆಯವರೆಗೂ ಸ್ಟೋಕ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯತ್ನಿಸಿದರೂ, ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸ್ಟೋಕ್ಸ್‌ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
ಬೆನ್‌ಸ್ಟೋಕ್ಸ್ 2017ರ ಹರಾಜಿನಲ್ಲಿ 14.5 ಕೋಟಿ ರುಪಾಯಿಗಳಿಗೆ ರೈಸಿಂಗ್ ಪುಣೆ ಸೂಪರ್‍ಜೈಂಟ್ ತಂಡದ ಪಾಲಾಗಿದ್ದರು. ನಂತರ 2018 ರಲ್ಲಿ 12.5 ಕೋಟಿ ರುಪಾಯಿಗಳಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದರು.

ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಬೆನ್‌ಸ್ಟೋಕ್ಸ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಒತ್ತಡದ ನಡುವೆಯೂ ಅಜೇಯ 52 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವಕಪ್‌ನಲ್ಲಿ 6.79 ಎಕಾನಮಿಯಲ್ಲಿ ಅವರು 6 ವಿಕೆಟ್ ಪಡೆದಿದ್ದಾರೆ.
ಸದ್ಯ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿರುವ ಸ್ಟೋಕ್ಸ್ ಅವರನ್ನು ಖರೀದಿ ಮಾಡಿರುವುದು ಸಿಎಸ್‌ಕೆ ತಂಡದ ಬಲವನ್ನು ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications