IPL Auction 2023: ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರರನ್ನೇ ಟಾರ್ಗೆಟ್ ಮಾಡಲಿದೆ ಸಿಎಸ್‌ಕೆ
ಐಪಿಎಲ್ 2023ಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲ ತಂಡದ ಮಾಲೀಕರು ಈಗಾಗಲೇ ತೆರೆಯ ಮರೆಯಲ್ಲಿ ಭರ್ಜರಿ ಲೆಕ್ಕಾಚಾರ ನಡೆಸಿದ್ದಾರೆ. ಫ್ರಾಂಚೈಸಿಗಳ ಚಿತ್ತ ಡಿಸೆಂಬರ್ 19ರಂದು ನಡೆಯುವ ಹರಾಜಿನಲ್ಲಿ ಯಾವ ಆಟಗಾರರನ್ನು ಟಾರ್ಗೆಟ್ ಮಾಡಬೇಕು ಎನ್ನುವದರ ಮೇಲೆ ನಿಂತಿದೆ. ಈ ಮೂಲಕ ಮಾಲೀಕರು ತಮ್ಮ ತಂಡವನ್ನು ಬಲಿಷ್ಠ ಮಾಡುವತ್ತ ಚಿತ್ತ ನೆಟ್ಟಿದ್ದಾರೆ.
ನವೆಂಬರ್ 6 ರಂದು, ಐಪಿಎಲ್‌ನ 10 ತಂಡಗಳು ಒಟ್ಟು 81 ಆಟಗಾರರನ್ನು ಬಿಡುಗಡೆ ಮಾಡಿವೆ. ಪಂಜಾಬ್ ಕಿಂಗ್ಸ್ ಅತಿ ಕಡಿಮೆ ಆಟಗಾರರನ್ನು ಬಿಡುಗಡೆ ಮಾಡಿದೆ. ಕೈ ಬಿಟ್ಟ ಆಟಗಾರರ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (12) ಅಗ್ರಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತಮ್ಮ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದೆ.
ಚೆನ್ನೈ ಸಹ ಅಳೆದು ತೂಗಿ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಕಪ್ ಮೇಲೆ ಕಣ್ಣು ಇಟ್ಟಿದೆ. ಈ ನಿಟ್ಟಿನಲ್ಲಿ ಚೆನ್ನೈ ತಂಡ ಆರ್‌ಸಿಬಿ ಕೈ ಬಿಟ್ಟ ಆಟಗಾರರಿಗೆ ಹರಾಜಿನಲ್ಲಿ ಬಿಡ್ ಮಾಡಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

ಹರ್ಷಲ್ ಪಟೇಲ್
ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ಕೈ ಬಿಟ್ಟಿದೆ. ಐಪಿಎಲ್ 2021 ರಲ್ಲಿ, ಹರ್ಷಲ್ ಪಟೇಲ್ 32 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದಿದ್ದರು. ಪಟೇಲ್ ಮುಂದಿನ ಎರಡು ಋತುಗಳಲ್ಲಿ ಕ್ರಮವಾಗಿ 19 ಮತ್ತು 14 ವಿಕೆಟ್ ಪಡೆದು ಗಮನ ಸೆಳೆದಿದ್ದರು.
ಡೆತ್ ಓವರ್‌ಗಳಲ್ಲಿ ಅವರು ರನ್ ಗಳನ್ನು ನೀಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹರ್ಷಲ್ ಅವರನ್ನು ಬಿಡುಗಡೆ ಮಾಡುವ ಮೂಲಕ ಆರ್‌ಸಿಬಿ 10 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಮುಂಬರುವ ಹರಾಜಿನಲ್ಲಿ ಸಿಎಸ್‌ಕೆ ಅವರನ್ನು ಖರೀದಿಸಬಹುದು. ಹರ್ಷಲ್ ಪಟೇಲ್ ಅವರು ಬೌಲಿಂಗ್ ನಲ್ಲಿ ವೇರಿಯೇಷನ್ ಹೊಂದಿದ್ದಾರೆ ಮತ್ತು ನಿಖರವಾದ ಯಾರ್ಕರ್‌ಗಳನ್ನು ಮಾಡುವ ಕಲೆ ತಿಳಿದಿದೆ. ಇಂತಹ ಆಟಗಾರನಿಂದ ಉತ್ತಮ ಪ್ರದರ್ಶನವನ್ನು ಹೇಗೆ ಪಡೆಯಬೇಕು ಎಂದು ಎಂಎಸ್ ಧೋನಿಗೆ ಚೆನ್ನಾಗಿ ತಿಳಿದಿದೆ. CSK ಭಾರತೀಯ ಬೌಲರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಹೀಗಾಗಿ ಇವರನ್ನು ಸಿಎಸ್‌ಕೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕಾಯುತ್ತಿದೆ.

ವನಿಂದು ಹಸರಂಗ
ಶ್ರೀಲಂಕಾದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿದೆ. ಅವರು ಆರ್‌ಸಿಬಿ 26 ಪಂದ್ಯಗಳಲ್ಲಿ 35 ವಿಕೆಟ್ ಪಡೆದರು. ಹಸರಂಗಾ ಐಪಿಎಲ್ 2022 ರಲ್ಲಿ 26 ವಿಕೆಟ್ ಪಡೆದು ಅಬ್ಬರಿಸಿದ್ದರು. ಇವರು ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವು ನೀಡಬಲ್ಲರು.
ವನಿಂದು ಹಸರಂಗ ಅವರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಟ್ರಂಪ್ ಕಾರ್ಡ್ ಎಂದು ಸಾಬೀತುಪಡಿಸಬಹುದು. ಧೋನಿ ಪತಿರಾನ ಜೊತೆ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಅಭಿಮಾನಿಗಳು ನೋಡಿದ್ದಾರೆ. ಹಸರಂಗ ಉತ್ತಮ ಸ್ಪಿನ್ನರ್. ಒಂದು ವೇಳೆ ವನಿಂದು ಹಳದಿ ಜೆರ್ಸಿ ತೊಟ್ಟಿದ್ದೇ ಆದರೆ ಧೋನಿಗೆ ಬಲ ಸಿಗುತ್ತದೆ.

ಜೋಶ್ ಹ್ಯಾಜಲ್‌ವುಡ್
ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ತಮ್ಮ ಏಕನಾಮಿಯಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಪ್ರಸಿದ್ಧರು. ಹ್ಯಾಜಲ್‌ವುಡ್ ಐಪಿಎಲ್ 2021 ರಲ್ಲಿ ಸಿಎಸ್‌ಕೆ ಭಾಗವಾಗಿದ್ದರು, ನಂತರ ಅವರು ಮುಂದಿನ ಎರಡು ವರ್ಷಗಳ ಕಾಲ ಆರ್‌ಸಿಬಿಯಲ್ಲಿದ್ದರು. ಐಪಿಎಲ್ 2022ರಲ್ಲಿ ಆರ್‌ಸಿಬಿ ಪರ 12 ಪಂದ್ಯಗಳಲ್ಲಿ ಹ್ಯಾಜಲ್‌ವುಡ್ 20 ವಿಕೆಟ್ ಕಬಳಿಸಿದ್ದರು. ಹೇಜಲ್‌ವುಡ್ ಐಪಿಎಲ್ 2023 ರಲ್ಲಿ ಗಾಯದಿಂದ ಕೆಲವೇ ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು.
CSK ತಂಡ ಮತ್ತೊಮ್ಮೆ ಹ್ಯಾಜಲ್‌ವುಡ್ ಅನ್ನು ಖರೀದಿಸಬಹುದು. ಎಂಎಸ್ ಧೋನಿ ಈ ಹಿಂದೆಯೂ ಹ್ಯಾಜಲ್‌ವುಡ್ ಅವರಿಂದ ಉತ್ತಮ ಕೆಲಸ ಮಾಡಿದ್ದಾರೆ. ಐಪಿಎಲ್ 2021 ರಲ್ಲಿ, ಹ್ಯಾಜಲ್‌ವುಡ್ 9 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications